Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ನೀರು ತರಿಸುವ ವೆಜಿಟೇಬಲ್ ಕಿಚಡಿ ಮಾಡಿ ನೋಡಿ..! ಹೇಗೆ ಮಾಡಬೇಕು ಗೊತ್ತಾ?
ನೀವು ಬೆಳಗ್ಗೆ ತಿಂಡಿಗೆ ಎಷ್ಟೊಂದು ಬಗೆಯ ತಿಂಡಿ ಮಾಡಿ ಸವಿದಿರುತ್ತೀರಿ. ಅದರಲ್ಲು ಸುಲಭವಾಗಿ ಮಾಡಿ ಸವಿಯುವ ಖಾದ್ಯದ ಕಡೆಗೆ ಯಾವಾಗಲು ಆಲೋಚಿಸುತ್ತೀರಿ. ಅದರಲ್ಲೂ ಆರೋಗ್ಯಕ್ಕೂ ಉತ್ತಮ ಬಾಯಿ ರುಚಿಗೂ ಹೇಳಿ ಮಾಡಿಸಿದ ಖಾದ್ಯ ಯಾವುದಾದರು ಮಾಡಿ ಸವಿಯುವ ಆಲೋಚನೆ ನಿಮ್ಮಲ್ಲಿದ್ದರೆ ನೀವು ಈ ವೆಜಿಟೇಬಲ್ ದಾಲ್ ಕಿಚಡಿ ಟ್ರೈ ಮಾಡಬಹುದು.
ವೆಜಿಟೇಬಲ್ ದಾಲ್ ಕಿಚಡಿ ಬೆಳಗ್ಗಿನ ತಿಂಡಿ ರುಚಿ ಹೆಚ್ಚಿಸುವಂತಹ ಖಾದ್ಯ ಇದು. ಉತ್ತರ ಭಾರತದಲ್ಲಿ ಕಿಚಡಿ ಬಹಳ ಫೇಮಸ್ ಖಾದ್ಯ ಹಾಗೆ ಚಪಾತಿ, ಅನ್ನದ ಜೊತೆಗೂ ಕಿಚಡಿ ಸವಿಯುವುದು ನೋಡಬಹುದು ಮತ್ತೆ ಹಲವರು ಬರಿ ಕಿಚಡಿಯನ್ನೇ ಬ್ರೇಕ್‌ಫಾಸ್ಟ್ ಆಗಿ ಸವಿಯುವುದು ನೋಡಬಹುದು. ಈ ಕಿಚಡಿ ಮಾಡೋದು ಬಹಳ ಸುಲಭ ಆಗಿರೋದ್ರಿಂದ ಎಲ್ಲರು ಮಾಡಿ ಸವಿಯಲು ಮುಂದಾಗುತ್ತಾರೆ.

ನಾವಿಂದು ಈ ವೆಜಿಟೇಬಲ್ ಕಿಚಡಿ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದರಲ್ಲೂ ಈ ಕಿಚಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಕಿಚಡಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಕಪ್
- ಹೆಸರುಬೇಳೆ ಅರ್ಧ ಕಪ್
- ತೊಗರಿಬೇಳೆ ಅರ್ಧ ಕಪ್
- ಈರುಳ್ಳಿ- 1
- ಟೊಮೆಟೋ
- ಕ್ಯಾರೆಟ್ 1
- ಹಸಿ ಬಟಾಣಿ
- ಬೀನ್ಸ್
- ಕ್ಯಾಪ್ಸಿಕಂ
- ತುಪ್ಪ
- ಒಣ ಮೆಣಸು
- ಪಲಾವ್ ಎಲೆ
- ತುರಿದ ಶುಂಠಿ
- ಬೆಳ್ಳುಳ್ಳಿ
- ಜೀರಿಗೆ
- ಸಾಸಿವೆ
- ಹಸಿ ಮೆಣಸು
- ಖಾರದ ಪಡಿ
- ಇಂಗು
- ಅರಿಶಿನ ಪುಡಿ
- ಉಪ್ಪು
- ಎಣ್ಣೆ
ವೆಜಿಟೇಬಲ್ ಕಿಚಡಿ ಮಾಡುವುದು ಹೇಗೆ?
ಮೊದಲು ಅಕ್ಕಿಯನ್ನು ತೊಳೆದು ನೀರಿನಲ್ಲಿ ನೆನೆಸಿಡಬೇಕು. 10 ನಿಮಿಷ ನೆನೆಸಿಟ್ಟರೆ ಸಾಕು. ಅದೆ ಬೌಲ್‌ಗೆ ಹೆಸರು ಬೇಳೆ ಹಾಗೂ ತೊಗರಿ ಬೇಳೆಯನ್ನು ಕೂಡ ಹಾಕಿಕೊಂಡು ಅಕ್ಕಿ ಜೊತೆಗೆ ನೆನೆಸಿಡಬೇಕು. ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಿಸಿಯಾದ ಬಳಿಕ ಇದಕ್ಕೆ ಪಲಾವ್ ಎಲೆ, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿ.
2 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಬೆಳ್ಳುಳ್ಳಿ, ಹಸಿ ಮೆಣಸು, ಶುಂಠಿ ಸೇರಿಸಿ 1 ನಿಮಿಷ ಹುರಿದುಕೊಳ್ಳಿ. ಇಲ್ಲಿ ತುಪ್ಪದ ಬದಲಾಗಿ ಎಣ್ಣೆ ಬೇಕಾದರು ನೀವು ಬಳಸಿ. ನಂತರ ಟೊಮೆಟೋ ಹಾಕಿ 4 ನಿಮಿಷ ಫ್ರೈ ಮಾಡಿ. ನಂತರ ಖಾರದ ಪುಡಿ, ಅರಶಿಣ ಪುಡಿ, ಹಾಕಿ ನಂತರ ಬೀನ್ಸ್, ಹಸಿ ಬಟಾಣಿ, ಕ್ಯಾರೆಟ್, ಕ್ಯಾಪ್ಸಿಕಂ, ಉಪ್ಪು ಕೂಡ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.
ನಂತರ ಅಳತೆ ಕಪ್‌ನಲ್ಲಿ 4 ಕಪ್ ನೀರು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ನಂತರ ನೆನೆಸಿಟ್ಟ ಅಕ್ಕಿ ಬೇಳೆಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ಮೂರು ಸೀಟಿ ಹೊಡೆದ ಬಳಿಕ ಕುಕ್ಕರ್ ತಣ್ಣಗಾಗಲು ಬಿಡಿ. ನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ. ಅನಂತರ ಇದಕ್ಕೆ 2 ಕಪ್ ಅಳತೆಯ ಬಿಸಿ ಬಿಸಿ ನೀರನ್ನು ಕುಕ್ಕರ್‌ಗೆ ಹಾಕಿಕೊಳ್ಳಬೇಕು. ಮತ್ತೆ ನೀರು ಹಾಕಿದ ಮೇಲೆ ಕಲಸಿಕೊಳ್ಳಿ.
ಈಗ ಮತ್ತೊಂದು ಕಡೆ ಒಲೆ ಮೇಲೆ ಕಡಾಯಿ ಇಟ್ಟು ಅದಕ್ಕೆ ತುಪ್ಪ ಇಲ್ಲವೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಕರಿಬೇವು, ಇಂಗು, ಜೀರಿಗೆ, ಒಣ ಮೆಣಸು ಹಾಕಿಕೊಂಡು ಒಗ್ಗರಣೆಯನ್ನು ಕುಕ್ಕರ್‌ಗೆ ಸೇರಿಸಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ವೆಜಿಟೇಬಲ್ ಕಿಚಡಿ ರೆಡಿಯಾಗುತ್ತದೆ. ನೀವು ಕೂಡ ಈ ರೀತಿಯ ಕಿಚಡಿ ಮಾಡಿ ನೋಡಿ.



Click it and Unblock the Notifications