Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಭಿನ್ನ ಶೈಲಿಯ ತರಕಾರಿ ಚಿತ್ರಾನ್ನ ಮಾಡಿ ನೋಡಿ..! ಪದೇ ಪದೇ ಸವಿಯುತ್ತೀರಿ..!
ನೀವು ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಎಷ್ಟೊಂದು ವಿಧವಾದ ತಿಂಡಿಗಳ ಮಾಡಿ ಸವಿದಿರುತ್ತೀರಿ. ಹಾಗೆ ಎಲ್ಲಾ ಬಗೆಯಲ್ಲೂ ಏನಾದರು ವಿಶೇಷ ಇರುವಂತೆ ನೋಡಿಕೊಳ್ಳುತ್ತೀರಿ. ಕೆಲವೊಮ್ಮೆ ವಿಭಿನ್ನ ರುಚಿ, ವಿಭಿನ್ನ ಖಾದ್ಯ, ವಿಶೇಷ ರೀತಿಯಲ್ಲಿ ಮಾಡಿ ಸವಿಯಬೇಕು ಅನ್ನೋದು ನಿಮ್ಮ ಆಸೆಯಾಗಿರುತ್ತೆ, ಇದಕ್ಕಾಗಿ ಹಲವು ರೀತಿಯ ಪ್ರಯತ್ನವನ್ನಂತು ನೀವು ಮಾಡಿಯೇ ಮಾಡುತ್ತೀರಿ. ಅದರಂತೆ ಬೆಳಗ್ಗೆ ರೈಸ್‌ನಿಂದ ಹಲವು ಬಗೆಯ ಖಾದ್ಯ ಮಾಡುವುದು ಕೂಡ ನಿಮಗೆ ತಿಳಿದಿರಬಹುದು.
ಅದರಲ್ಲೂ ಬೆಳಗ್ಗೆ ಗಡಿಬಿಡಿಯಾಗಿದ್ದಾಗ ಇಲ್ಲವೆ ರಾತ್ರಿಯ ಅನ್ನ ಹೆಚ್ಚಾಗಿ ಉಳಿದಾಗ ಬೆಳಗ್ಗೆ ಚಿತ್ರಾನ್ನ ಮಾಡುವುದು ಸಾಮಾನ್ಯವಾಗಿ ಎಲ್ಲರ ಮನೆಯ ಕಾಯಕ. ಆದ್ರೆ ಕೆಲವರಿಗೆ ಚಿತ್ರಾನ್ನ ಅಂದರೆ ಮೂಗು ತಿರುಗಿಸುತ್ತಾರೆ. ಅವರಿಗೆ ಚಿತ್ರಾನ್ನ ಅಂದರೆ ಅವರಿಗೆ ಇಷ್ಟವಾಗೋದಿಲ್ಲ. ಆದ್ರೆ ಕೆಲವರಿಗೆ ಇಷ್ಟವಾಗಬಹುದು. ಅದರಲ್ಲೂ ಚಿತ್ರಾನ್ನ ಹೇಗೆ ಮಾಡಿದ್ದಾರೆ ಎಂಬುದರ ಮೇಲೆ ಹಲವರಿಗೆ ಇಷ್ಟವಾಗುತ್ತೆ.

ನೀವು ಕೂಡ ಬಗೆ ಬಗೆಯ ಚಿತ್ರಾನ್ನ ಸವಿದಿರಬಹುದು. ಸಾಮಾನ್ಯವಾಗಿ ನಿಂಬೆ ಹುಳಿಯನ್ನು ಹಿಂಡಿ ಒಂದು ಒಗ್ಗರಣೆ ಹಾಕಿ ಮಾಡುವಂತಹ ಚಿತ್ರಾನ್ನ ಕಾಮನ್. ಆದ್ರೆ ನಾವಿಂದು ವಿಭಿನ್ನ ಶೈಲಿಯಲ್ಲಿ ಚಿತ್ರಾನ್ನ ಮಾಡುವ ಕುರಿತು ಹೇಳಲಿದ್ದೇವೆ. ಅದರಲ್ಲೂ ತರಕಾರಿ ಚಿತ್ರಾನ್ನ ನೀವು ಸವಿದರೆ ಅದರ ರುಚಿಗೆ ಪದೇ ಪದೇ ಈ ಚಿತ್ರಾನ್ನ ಮಾಡಿಯೇ ಮಾಡುತ್ತೀರಿ.
ತರಕಾರಿಗಳ ಹಾಕಿ ಮಾಡುವುದರಿಂದ ಅದರ ರುಚಿ ಕೂಡ ಮಿಕ್ಕೆಲ್ಲಾ ಚಿತ್ರಾನ್ನಕ್ಕಿಂತ ಅದ್ಭುತ ಎನ್ನಬಹುದು. ಹಾಗೆ ತರಕಾರಿಗಳಿರುವ ಕಾರಣ ಆರೋಗ್ಯಕ್ಕೂ ಬಹಳ ಉತ್ತಮ. ಮಕ್ಕಳಿಗೂ ಈ ಚಿತ್ರಾನ್ನ ಬಹಳ ಇಷ್ಟವಾಗುತ್ತೆ. ಹಾಗಾದ್ರೆ ಈ ಚಿತ್ರಾನ್ನ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತರಕಾರಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಈರುಳ್ಳಿ
- ಅನ್ನ
- ಕ್ಯಾಪ್ಸಿಕಂ
- ಹಸಿ ಮೆಣಸು
- ಕ್ಯಾರೆಟ್
- ಹಸಿ ಬಟಾಣಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ತೆಂಗಿನಕಾಯಿ ತುರಿ
- ಸಾಸಿವೆ
- ಅರಶಿಣ
- ಜೀರಿಗೆ
- ಎಣ್ಣೆ
- ನಿಂಬೆ ಹಣ್ಣಿನ ರಸ
- ಉಪ್ಪು
ತರಕಾರಿ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಸಾಸಿವೆ, ಜೀರಿಗೆ ಹಾಕಿ ಬಿಸಿ ಮಾಡಿ ಬಳಿಕ ಹಸಿ ಮೆಣಸು, ಕರಿಬೇವು, ಈರುಳ್ಳಿ ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ಹಸಿ ಬಟಾಣಿ ಹಾಗೆ ಕ್ಯಾಪ್ಸಿಕಂ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಇದನ್ನು 3ರಿಂದ 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ತುರಿದ ಕ್ಯಾರೆಟ್ ಹಾಕಿ 1 ನಿಮಿಷ ಬೇಯಿಸಿ. ನಂತರ ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ನಿಂಬೆ ಹಣ್ಣಿನ ರಸ ಹಿಂಡಿಕೊಳ್ಳಿ. ಹಾಗೆ ತುರಿದುಕೊಂಡಿದ್ದ ಸ್ವಲ್ಪ ಕಾಯಿ ತುರಿ ಕೂಡ ಹಾಕಿಕೊಳ್ಳಿ. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದೆಲ್ಲಾ ಬಿಸಿಯಲ್ಲೇ ಬೇಯುತ್ತದೆ.
ಈಗ ಮೊದಲೇ ರೆಡಿ ಮಾಡಿರುವ ಹುಡಿ ಹುಡಿಯಾದ ಅನ್ನವನ್ನು ಇದಕ್ಕೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಮಸಾಲೆ ಎನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಿ. ಹಾಗೆ ಉಪ್ಪು ಕಡಿಮೆಯಾಗಿದ್ದರೆ ರುಚಿ ನೋಡಿಕೊಂಡು ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ತರಕಾರಿ ಚಿತ್ರಾನ್ನ ರೆಡಿಯಾಗುತ್ತದೆ, ನೀವು ತೆಂಗಿನಕಾಯಿ ತುರಿ ಬಳಸದೇ ಇದ್ದರೆ ಮಧ್ಯಾಹ್ನವೂ ಇಟ್ಟು ಸವಿಯಬಹುದಾಗಿದೆ. ನೀವು ಕೂಡ ಮನೆಯಲ್ಲಿ ಈ ಬಗೆಯ ಚಿತ್ರಾನ್ನ ಸವಿದು ನೋಡಿ.



Click it and Unblock the Notifications