Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂರು ಹೊತ್ತಿಗೂ ಇದೊಂದೇ ರೆಸಿಪಿ..! ಎಷ್ಟು ಸುಲಭ ಗೊತ್ತಾ?
ನಾವು ಸುಲಭವಾಗಿ ಯಾವೆಲ್ಲಾ ಅಡುಗೆ ಮಾಡಬಹುದು ಎಂಬುದನ್ನು ಯಾವಾಗಲು ಹುಡುಕುತ್ತಿರುತ್ತೇವೆ. ಏಕೆಂದರೆ ಅಡುಗೆ ದಿನಾಲು ಮಾಡಬೇಕಾದ ಕೆಲಸ ಆಗಿರೋದ್ರಿಂದ ಕೆಲವೊಮ್ಮೆ ದೊಡ್ಡ ತಲೆನೋವಾಗಿ ಇದು ಕಾಣಿಸುತ್ತೆ. ಅದರಲ್ಲೂ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಹೀಗೆ ಅಡುಗೆ ಮನೆ ಯಾವಾಗಲು ಗಿಜಿಗುಡುವ ಜಾಗ. ಅಡುಗೆ ಮನೆಗೆ ವಿಶ್ರಾಂತಿ ನೀಡುವುದು ಬಹಳ ಕಡಿಮೆ.
ಆದ್ರೆ ಕೆಲವೊಮ್ಮೆ ಮಧ್ಯಾಹ್ನಕ್ಕೆ ಮಾಡಿರುವ ಊಟ ರಾತ್ರಿಯ ಊಟಕ್ಕೂ ಸವಿಯುತ್ತೇವೆ. ಈ ಸಮಯದಲ್ಲಿ ಮಾತ್ರ ಗೃಹಿಣಿಯರು ಸ್ವಲ್ಪ ಅಡುಗೆ ಮನೆಗೆ ಬಿಡುವು ನೀಡುತ್ತಾರೆ. ಆದ್ರೆ ನಾವಿಂದು ಒಂದೇ ಒಂದು ಖಾದ್ಯ ನಿಮಗೆ ಮೂರು ಹೊತ್ತು ಕೂಡ ಸವಿಯಲು ಬರಬೇಕು, ಅಡುಗೆ ಮನೆಗೆ ನೀವು ಒಂದು ಬಾರಿ ಭೇಟಿ ನೀಡಿದರೆ ಸಾಕು ಈ ಖಾದ್ಯ ರಡಿಯಾಗಿ ಮೂರು ಹೊತ್ತು ಬಾಯಿ ಚಪ್ಪರಿಸಿ ಸವಿಯಬಹುದಾದ ರೆಸಿಪಿ ಹೇಳಲಿದ್ದೇವೆ.

ಹೌದು ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟಕ್ಕೆ ಬೇರೆ ಬೇರೆ ಖಾದ್ಯ ಮಾಡದೆ ಒಂದೇ ರೆಸಿಪಿಯನ್ನು ಮೂರು ಹೊತ್ತು ರುಚಿ ರುಚಿಯಾಗಿ ಸವಿಯಬಹುದು. ಈ ಖಾದ್ಯ ನೀವು ಒಮ್ಮೆ ಟ್ರೈ ಮಾಡಿದರೆ ಮತ್ತೆ ಎಂದಿಗೂ ಮೂರು ಹೊತ್ತು ಅಡುಗೆ ಮನೆಯಲ್ಲಿ ಕಾಲ ಕಳೆಯುವುದಿಲ್ಲ. ಇದನ್ನು ಒಂದು ಸರಿ ಮಾಡಿ ಮೂರು ಹೊತ್ತು ಸವಿಯಲು ಮುಂದಾಗುತ್ತೀರಿ.
ಹಾಗಾದ್ರೆ ಯಾವುದು ಈ ವೆಜಿಟೇಬಲ್ ರೈಸ್ ರೆಸಿಪಿ, ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಲಂಚ್ ಬಾಕ್ಸ್ ರೈಸ್ ರೆಸಿಪಿ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ - 1
- ಟೊಮೆಟೋ -1
- ಬೀನ್ಸ್
- ಕ್ಯಾರೆಟ್
- ಪಲಾವ್ ಎಲೆ
- ಜೀರಿಗೆ
- ಸಾಸಿವೆ
- ಚಕ್ಕೆ
- ಹಸಿ ಮೆಣಸು
- ಅರಶಿನ
- ಖಾರದ ಪುಡಿ
- ಉಪ್ಪು
- ಎಣ್ಣೆ
- ಧನಿಯಾ
- ಗರಂ ಮಸಾಲೆ
ವೆಜಿಟೇಬಲ್ ರೈಸ್ ರೆಸಿಪಿ ಮಾಡುವ ವಿಧಾನ
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಪಲಾವ್ ಎಲೆ, ಚಕ್ಕೆ, ಸಾಸಿವೆ, ಜೀರಿಗೆ, ಹಸಿ ಮೆಣಸು, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ ಮಾಡಿಕೊಳ್ಳಿ. ನಂತರ ಇದಕ್ಕೆ ಉಪ್ಪು ಒಂದು ಚಿಟಿಕೆ ಅರಶಿನ ಪುಡಿ ಹಾಕಿ ಫ್ರೈ ಮಾಡಿ.
ನಂತರ ಇದಕ್ಕೆ ಕತ್ತರಿಸಿಕೊಂಡಿರುವ ಆಲೂಗಡ್ಡೆ, ಕ್ಯಾರೆಟ್, ಬೀನ್ಸ್ ಹಾಕಿಕೊಂಡು ಫ್ರೈ ಮಾಡಿ, 2 ನಿಮಿಷದ ಬಳಿಕ ಒಂದು ಟೊಮೆಟೂ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ 3 ನಿಮಿಷ ಬಿಟ್ಟು, ಇದಕ್ಕೆ ಒಂದು ಚಮಚ, ಗರಂ ಮಸಾಲೆ, ಧನಿಯಾ ಪುಡಿ ಹಾಗೆ ನಿಮ್ಮ ಖಾರಕ್ಕೆ ಅನುಗುಣವಾಗಿ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಒಂದು ಕಪ್ ನೀರು ಹಾಕಿ ಕುದಿಯಲು ಬಿಡಬೇಕು. ನೀರು ಜಾಸ್ತಿ ಹಾಕಬೇಡಿ. ಪಾತ್ರೆ ಬುಡದಲ್ಲಿ ನೀರು ಇದ್ದರೆ ಸಾಕು. ತರಕಾರಿ ಬೇಯುವಂತೆ ಮುಚ್ಚಳ ಮುಚ್ಚಿ 3 ನಿಮಿಷ ಬೇಯಲು ಬಿಡಿ. ಈಗ ಮೊದಲೇ ಮಾಡಿಕೊಂಡಿರುವ ಅನ್ನವನ್ನು ಇದಕ್ಕೆ ಹಾಕಿಕೊಂಡು ಈಗ ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಮಸಾಲೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಿ.
ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಮ್ಮೆ ತಿರುಗಿಸಿಕೊಂಡು ಟೇಸ್ಟ್ ಮಾಡಿ ಸವಿಯಲು ನೀಡಿ. ಇಷ್ಟಾದರೆ ನಿಮ್ಮ ಮುಂದೆ ಮೂರು ಹೊತ್ತು ಸವಿಯಬಹುದಾದ ವೆಜಿಟೇಬಲ್ ರೈಸ್ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಇದನ್ನು ಟ್ರೈ ಮಾಡಿ ಮೂರು ಹೊತ್ತು ಕೂಡ ಸವಿಯಬಹದೇ ಎಂಬುದನ್ನು ಪರೀಕ್ಷಿಸಿ ನೋಡಿ. ನಿಮಗೆ ಖಂಡಿತ ಇದು ಇಷ್ಟವಾದ ರೆಸಿಪಿಯಾಗಲಿದೆ.



Click it and Unblock the Notifications