Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ ಜೊತೆ ವೆಜ್ ಕುರ್ಮ ಸಖತ್ ಟೇಸ್ಟಿ..! ಮಾಡೋದು ತುಂಬಾ ಸುಲಭ
ಇಡ್ಲಿ ದಕ್ಷಿಣ ಭಾರತದ ಖ್ಯಾತ ಖಾದ್ಯಗಳಲ್ಲಿ ಒಂದು. ಎಲ್ಲಾ ಮನೆಯಲ್ಲೂ ವಾರಕ್ಕೊಮ್ಮೆಯಾದರು ಇಡ್ಲಿ ಸವಿಯುತ್ತಾರೆ. ಹೋಟೆಲ್‌ಗಳಲ್ಲಂತು ಇಡ್ಲಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಏಕೆಂದ್ರೆ ಇಡ್ಲಿಯಲ್ಲಿ ಎಣ್ಣೆ ಅಂಶ ಇಲ್ಲದಿರುವುದು ಆರೋಗ್ಯಕ್ಕೂ ಉತ್ತಮವಾದ ಪದಾರ್ ಆಗಿರುವುದರಿಂದ ಎಲ್ಲರ ನೆಚ್ಚಿನ ಬ್ರೇಕ್‌ಫಾಸ್ಟ್ ಫುಡ್ ಇದಾಗಿದೆ.
ಆದ್ರೆ ಇಡ್ಲಿಗೆ ಚಟ್ನಿ ಮಾಡಿ ಇಲ್ಲವೆ ಸಾಂಬಾರ್‌ನಲ್ಲಿ ಇಡ್ಲಿ ಸೇವಿಸುವುದು ರೂಢಿಯಾಗಿಬಿಟ್ಟಿದೆ. ಇಡ್ಲಿಗೆ ಇದೆರಡು ಕಾಂಬಿನೇಷನ್‌ಗಿಂತಲೂ ಕುರ್ಮದ ರುಚಿಯೇ ಬೇರೆ. ಹೌದು ಇಡ್ಲಿ ಜೊತೆ ಕುರ್ಮ ಇದ್ದರೆ ಇನ್ನಷ್ಟು ಇಡ್ಲಿ ಸವಿಯಲು ಮನಸಾಗುತ್ತದೆ. ವೆಜ್ ಕುರ್ಮ ಇಡ್ಲಿ ಜೊತೆ ಸಿಕ್ಕಾಪಟ್ಟೆ ರುಚಿ ಕೊಡುತ್ತೆ.

ಹಾಗಾದ್ರೆ ನಾವಿಂದು ಈ ಇಡ್ಲಿಗೆ ಕುರ್ಮ ಮಾಡುವುದು ಹೇಗೆ? ಕುರ್ಮ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಕುರ್ಮ ಮಾಡುವ ಪಾಕ ವಿಧಾನವೇನು ಎಂಬುದನ್ನು ನೋಡೋಣ.
ಕುರ್ಮ ಮಾಡಲು ಬೇಕಾಗುವ ಪದಾರ್ಥಗಳು
ಹುರಿಯಲು ಮತ್ತು ರುಬ್ಬಲು ಈ ವಸ್ತುಗಳು ಬೇಕು
- ಎಣ್ಣೆ -
- ದೊಡ್ಡ ಈರುಳ್ಳಿ - 1
- ಹಸಿರು ಮೆಣಸಿನಕಾಯಿ - 4
- ಬೆಳ್ಳುಳ್ಳಿ - 6 ಪೀಸ್‌ಗಳು
- ಶುಂಠಿ
- ಸೋಂಪು
- ತೆಂಗಿನ ತುರಿ
- ಗೋಡಂಬಿ - 6
- ಕಡಲೆ - 2 ಟೇಬಲ್ಸ್ಪೂನ್
ಕುರ್ಮ ಮಾಡಲು ಬೇಕಾಗುವ ವಸ್ತು
- ಎಣ್ಣೆ- 2 ಟೇಬಲ್ಸ್ಪೂನ್
- ಚಕ್ಕೆ
- ಲವಂಗ - 5
- ಚಕ್ರಮೊಗ್ಗು-1
- ಬಿರಿಯಾನಿ ಎಲೆಗಳು - 2
- ಟೊಮೇಟೊ - 2 (ಸಣ್ಣದಾಗಿ ಕೊಚ್ಚಿದ)
- ಅರಿಶಿನ ಪುಡಿ - 1/4 ಟೀಸ್ಪೂನ್
- ಧನಿಯಾ ಪುಡಿ - 1 1/2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು
- ಉಪ್ಪು
- ನೀರು
ವೆಜ್ ಕುರ್ಮ ಪಾಕವಿಧಾನ:
ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಸೋಂಪು ಕಾಳುಗಳನ್ನು ಹಾಕಿ ಈರುಳ್ಳಿ ಕೆಂಪಾಗುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ತೆಂಗಿನ ತುರಿ ಮತ್ತು ಗೋಡಂಬಿಯನ್ನು ಹಾಕಿ ಚೆನ್ನಾಗಿ ಬೆರೆಸಿ ತಣ್ಣಗಾಗಿಸಿ ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಂಡು ಪಕ್ಕಕ್ಕೆ ಇಡಿ.
ನಂತರ ಒಲೆಯಲ್ಲಿ ಬಾಣಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಚಕ್ಕೆ, ಲವಂಗ, ಚಕ್ರಮೊಗ್ಗು ಮತ್ತು ಬಿರಿಯಾನಿ ಎಲೆಗಳನ್ನು ಹಾಕಿ. ನಂತರ ಟೊಮೇಟೊ ಹಾಕಿ ಅದಕ್ಕೆ ಬೇಕಾದಷ್ಟು ಉಪ್ಪು ಹಾಕಿ ಟೊಮೇಟೊ ಮೃದುವಾಗುವವರೆಗೆ ಚೆನ್ನಾಗಿ ಹುರಿಯಿರಿ. ಬಳಿಕ ಅದಕ್ಕೆ ಅರಿಶಿನ ಪುಡಿ ಮತ್ತು ಧನಿಯಾ ಪುಡಿ ಹಾಕಿ 2 ನಿಮಿಷ ಮಿಶ್ರಣ ಮಾಡಿ, ತೆಂಗಿನ ತುರಿ ಹಾಕಿ ಕಲಸಿ 10 ನಿಮಿಷ ಕುದಿಸಿ ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಇಡ್ಲಿಗೆ ವೆಜ್ ಕುರ್ಮ ರೆಡಿ.



Click it and Unblock the Notifications