Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್‌ನಲ್ಲಿ ವೆಜ್ ಫ್ರೈಡ್ ರೈಸ್ 5 ನಿಮಿಷದಲ್ಲಿ ಹೇಗೆ ಮಾಡ್ತಾರೆ? ಈ ಟ್ರಿಕ್ಸ್ ನೀವೂ ಮಾಡಿ..!
ಬ್ರೇಕ್‌ಫಾಸ್ಟ್‌ಗೆ ರುಚಿ ರುಚಿಯ ಹಾಗೆ ಹೊಟ್ಟೆ ತುಂಬಿಸುವಂತಹ ರೈಸ್‌ನಿಂದ ಮಾಡಿದ ಯಾವುದಾದರು ತಿಂಡಿ ಇದ್ದರೆ ಉತ್ತಮ ಎಂದು ನೀವು ಭಾವಿಸಬಹುದು. ಹೀಗಾಗಿ ಪಲಾವ್, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆ ಅಂತಹ ಖಾದ್ಯ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಆಗಾಗ ಮಾಡುತ್ತಿರುತ್ತಾರೆ. ಹಾಗೆ ನೀವು ಫ್ರೈಡ್ ರೈಸ್ ಸವಿಯಲು ಕೂಡ ಇಷ್ಟಪಡುವವರಾಗಿದ್ದರೆ ಬ್ರೇಕ್‌ಫಾಸ್ಟ್‌ಗೆ ವೆಜ್ ಫ್ರೈಡ್ ರೈಸ್ ಮಾಡಿ ನೋಡಿ.
ವೆಜ್ ಫ್ರೈಡ್ ರೈಸ್ ಸಂಜೆ ಸಮಯದಲ್ಲಿ ಸವಿಯಲು ಎಲ್ಲರು ಇಷ್ಟಪಡುತ್ತಾರೆ. ತರಕಾರಿಗಳ ಹಾಕಿ ಬಿಸಿ ಬಿಸಿಯಾಗಿ ಈ ರೈಸ್ ಮಾಡಿ ಸವಿದರೆ ಅದರ ರುಚಿಗೆ ನೀವು ಕೂಡ ಫಿದಾ ಆಗುತ್ತೀರಿ. ಹಾಗೆ ನಿತ್ಯ ಇದನ್ನೇ ಮಾಡಿ ಸವಿಯಲು ಮುಂದಾಗೋದು ಪಕ್ಕಾ. ಆದ್ರೆ ಫ್ರೈಡ್ ರೈಸ್ ಮಾಡುವಾಗ ಕೆಲವೊಂದು ತಪ್ಪು ಮಾಡೋದ್ರಿಂದ ಅಷ್ಟು ಚೆನ್ನಾಗಿ ಬರುವುದಿಲ್ಲ ಎಂದು ದೂರು ಹೇಳೋದು ನೋಡಬಹುದು.

ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲಿ ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ವೆಜ್ ಫ್ರೈಡ್ ರೈಸ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದರಲ್ಲೂ ಈ ರೀತಿ ರುಚಿ ನೀವೆಂದು ಮಾಡಿರಲ್ಲ. ಹಾಗಾದ್ರೆ ಈ ವೆಜ್ ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೆಜ್ ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅನ್ನ
- ಈರುಳ್ಳಿ
- ಕ್ಯಾರೆಟ್
- ಹಸಿ ಮೆಣಸು
- ಕ್ಯಾಪ್ಸಿಕಂ
- ಉಪ್ಪು
- ಎಣ್ಣೆ
- ಬಟಾಣಿ
- ಟೊಮೆಟೋ
- ಎಲೆಕೋಸು
- ಪುದಿನ ಎಲೆ
- ಕೊತ್ತಂಬರಿ ಸೊಪ್ಪು
- ಹಸಿ ಶುಂಠಿ
- ಬೆಳ್ಳುಳ್ಳಿ
- ಸೋಯಾ ಸಾಸ್
- ವಿನೆಗರ್
- ಚಿಲ್ಲಿ ಸಾಸ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್
ವೆಜ್ ಫ್ರೈಡ್ ರೈಸ್ ಮಾಡುವ ವಿಧಾನವೇನು?
ಮೊದಲಿಗೆ ಅನ್ನವನ್ನು ಮಾಡಿಟ್ಟುಕೊಂಡಿರಿ, ಆದಷ್ಟು ಹುಡಿ ಹುಡಿಯಾಗಿರಲಿ. ಅನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಈರುಳ್ಳಿ, ಬಟಾಣಿ ಸೇರಿಸಿ ಫ್ರೈ ಮಾಡಿ. ನಂತರ ಕ್ಯಾಪ್ಸಿಕಂ, ಹಸಿ ಮೆಣಸು, ಕ್ಯಾರೆಟ್ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ಈಗ ಬೆಳ್ಳುಳ್ಳಿ, ಶುಂಠಿ, ಎಲೆಕೋಸು ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಮಾಡಿಟ್ಟಿರುವ ಅನ್ನವನ್ನು ಇದಕ್ಕೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. 1 ನಿಮಿಷ ಮಿಕ್ಸ್ ಮಾಡಿದ ಬಳಿಕ ಸೋಯಾ ಸಾಸ್, ಉಪ್ಪು, ಕರಿಮೆಣಸಿನ ಪುಡಿ ಹಾಕಿ ಮತ್ತೆ ಮಿಶ್ರಣ ಮಾಡಿಕೊಳ್ಳಿ. ನಂತರ ಚಿಲ್ಲಿ ಸಾಸ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಸ್ಪೂನ್ ಎಣ್ಣೆ, ಮತ್ತೆ ಸ್ವಲ್ಪ ಉಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಪುದಿನ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ಮಿಕ್ಸ್ ಮಾಡಿಕೊಂಡು 1 ನಿಮಿಷ ಬಿಸಿ ಮಾಡಿಕೊಳ್ಳಿ.
ಇಷ್ಟಾದರೆ ಸುಲಭದ ಫ್ರೈಡ್ ರೈಸ್ ರೆಡಿಯಾಗುತ್ತದೆ, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಇದೇ ರೀತಿಯಾಗಿ ವೆಜ್ ಫ್ರೈಡ್ ಮಾಡಲಾಗುತ್ತದೆ. ಅವರು ತರಕಾರಿಗಳನ್ನು ಹೆಚ್ಚು ಸಮಯ ಬೇಯಿಸುವುದಿಲ್ಲ. ಹಾಗೆ ಹಸಿ ಹಸಿಯಾಗಿ ಮಾಡಿರುತ್ತಾರೆ, ಇದು ಬಹಳ ರುಚಿಕರವಾಗಿರುತ್ತೆ, ನೀವು ಬೇಕಿದ್ದರೆ ಎಣ್ಣೆ ಕಡಿಮೆ ಬಳಸಿಯೂ ಇದನ್ನು ಮಾಡಬಹುದು. ಹೀಗಾಗಿ ಆರೋಗ್ಯಕ್ಕೂ ಒಂದು ಮಿಕ್ಸ್ ತರಕಾರಿ ಖಾದ್ಯ ಉತ್ತಮವಾಗಿರುತ್ತೆ.
ನೀವು ಕೂಡ ಬ್ರೇಕ್ ಫಾಸ್ಟ್‌ಗೆ ಹೊಸದಾಗಿ ಏನಾದರು ಮಾಡುವ ಆಲೋಚನೆ ಇದ್ದರೆ ಈ ರೀತಿ ಫ್ರೈಡ್ ರೈಸ್ ಅನ್ನು 5 ನಿಮಿಷದೊಳಗೆ ಎಲ್ಲಾ ತಯಾರಿ ಮಾಡಿಟ್ಟುಕೊಂಡು ಸವಿಯಬಹುದು. ಇದಕ್ಕೆ ಚಟ್ನಿ, ಮೊಸರುಬಜ್ಜಿಯ ಅಗತ್ಯವೂ ಇರುವುದಿಲ್ಲ ಹಾಗೆ ಸವಿಯಬಹುದು.



Click it and Unblock the Notifications