Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗ್ಗೆ ತಿಂಡಿಗೆ ವಾಂಗಿಬಾತ್ ಮಾಡಿ..! ಸಿಕ್ಕಾಪಟ್ಟೆ ರುಚಿ..!
ಬದನೆಕಾಯಿಯ ಜೊತೆ ಅನ್ನ ಹಾಗೂ ಉತ್ತಮ ಮಸಾಲೆಗಳ ಮಿಶ್ರಣದಿಂದ ತಯಾರಾಗುವ ಈ ಖಾದ್ಯವೇ ವಾಂಗಿಬಾತ್. ಬೆಳಗ್ಗೆಯ ತಿಂಡಿಗೆ ವಾಂಗಿಬಾತ್ ಮಾಡಿದ್ರೆ ತಿನ್ನಲು ಸಹ ರುಚಿಕರವಾಗಿರುತ್ತೆ ಮಾಡಲು ಸುಲಭವಾಗಿದೆ. ಹೀಗಾಗಿ ಬೆಳಗ್ಗೆ ಇದನ್ನು ಗಡಿಬಿಡಿಯ ನಡುವೆಯೂ ಮಾಡಬಹುದು.
ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಎನ್ನುವಂತೆ ಮಾಡುತ್ತೆ. ಇದು ಪರಿಪೂರ್ಣವಾದ ಪೌಷ್ಟಿಕಾಂಶ ಹಾಗೂ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಕೂಡಿದೆ. ಈ ಪಾಕವಿಧಾನವನ್ನು ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವನ್ನಾಗಿಯೂ ಸಹ ಸೇವಿಸಬಹುದು.

ಲವಂಗ, ಏಲಕ್ಕಿ, ದಾಲ್ಚಿನ್ನಿ, ಮೇಥಿ ಬೀಜ, ಸೇರಿದಂತೆ ಇನ್ನಿತರ ಆರೋಗ್ಯಕರವಾದ ಮಸಾಲ ಪದಾರ್ಥಗಳು ಇದರಲ್ಲಿ ಸೇರಿರುವುದರಿಂದ ದೇಹದ ಆರೋಗ್ಯದ ಸುಧಾರಣೆಗೂ ಸಹಾಯ ಮಾಡುವುದು. ಬದನೆಕಾಯಿ ಮತ್ತು ತೆಂಗಿನ ತುರಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು.
ಹಾಗಾದ್ರೆ ವಾಂಗಿಬಾತ್ ಮಾಡಲು ಬೇಕಾಗುವ ಪದಾರ್ಥಗಳೇನು? ವಾಂಗಿಬಾತ್ ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವಾಂಗಿಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ
- ಅನ್ನ
- ಸಾಸಿವೆ - 1 ಟೀಸ್ಪೂನ್
- ಉದ್ದಿನ ಬೇಳೆ - 1 tbs (ಟೇಬಲ್ ಸ್ಪೂನ್)
- ನೆಲ ಕಡಲೆ - 2 ಟೀಸ್ಪೂನ್
- ಮೆಣಸಿನಕಾಯಿ - 4
- ಈರುಳ್ಳಿ- 1
- ಕರಿಬೇವಿನ ಎಲೆಗಳು - 2 tbs
- ಹುಣಸೆಹಣ್ಣು - 1 tbs
- ಅರಿಶಿನ ಪುಡಿ - 1/4 ಟೀಸ್ಪೂನ್
- ಕೊತ್ತಂಬರಿ ಪುಡಿ - 1 ಟೀಸ್ಪೂನ್
- ಮೆಣಸಿನ ಪುಡಿ - 1/2 ಟೀಸ್ಪೂನ್
- ಗರಂ ಮಸಾಲಾ ಪುಡಿ - 1/4 ಟೀಸ್ಪೂನ್
- ಸಾಂಬಾರ್ ಪುಡಿ - 1 tbs
- ಕೊತ್ತಂಬರಿ ಸೊಪ್ಪು - 2 tbs
- ಎಣ್ಣೆ
- ಉಪ್ಪು
ವಾಂಗಿಬಾತ್ ಮಾಡುವ ವಿಧಾನ
ಬದನೆಕಾಯಿಯನ್ನು ತೆಗೆದುಕೊಂಡು ತೆಳುವಾಗಿ ಹೆಚ್ಚಿಕೊಳ್ಳಿ. ಎಲ್ಲಾ ಬದನೆಕಾಯಿ ಹೋಳನ್ನು ಒಂದು ಬೌಲ್‍ನಲ್ಲಿ ಹಾಕಿ ನೀರಿನಲ್ಲಿ ನೆನೆಯಿಡಿ.
ಒಂದು ಪಾತ್ರೆ ತೆಗೆದುಕೊಂಡು ಎಣ್ಣೆ ಹಾಕಿ ಒಲೆ ಮೇಲೆ ಇಡಿ. ಅದಕ್ಕೆ ಈರುಳ್ಳಿ, ಉದ್ದಿಮ ಬೇಳೆ, ಜೀರಿಗೆ, ಕಡ್ಲೇ ಬೇಳೆ, ಎಳ್ಳು, ಮೇಥಿ, ಲವಂಗ, ಧನಿಯಾವನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಹುರಿಯಿರಿ. ಮೆಣಸು ಮತ್ತು ತೆಂಗಿನ ತುರಿಯನ್ನು ಸೇರಿಸಿ ಹುರಿಯಿರಿ. ಬಳಿಕ 3 ನಿಮಿಷ ತಣ್ಣಗಾಗಲು ಇಡಿ.
ರಿದುಕೊಂಡ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸರ್ ಜಾರ್‌ಗೆ ಹಾಜಿ ರುಬ್ಬಿಕೊಳ್ಳಿ. ನುಣ್ಣನೆಯ ಪುಡಿಯಂತೆ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಿ. ಅದಕ್ಕೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೇ ಬೇಳೆ, ಕರಿಬೇವಿನ ಎಲೆ, ಅರಿಶಿನ, ಬದನೆಕಾಯಿ ಎಲ್ಲವನ್ನೂ ಸೇರಿಸಿ ಒಂದು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.
ಹುಣಸೆ ಹುಳಿ ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಉಪ್ಪು ಸೇರಿಸಿ 2 ನಿಮಿಷ ಕಾಯಲು ಬಿಡಿ. ನಂತರ ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ. ಮುಚ್ಚಳವನ್ನು ಮುಚ್ಚಿ, ಎಲ್ಲವೂ ಚೆನ್ನಾಗಿ ಹೀರಿಕೊಳ್ಳುವಂತೆ 2-3 ನಿಮಿಷಗಳ ಕಾಲ ಬೇಯಿಸಿ. ಮುಚ್ಚಳವನ್ನು ತೆರೆದು ಬದನೆಕಾಯಿಯನ್ನು ತಿರುವಿ. ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇಷ್ಟಾದರೆ ವಾಂಗಿಬಾತ್ ರೆಡಿ. ಕೊನೆಯಲ್ಲಿ ಬೇಕಾದರೆ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ.



Click it and Unblock the Notifications