Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉಳಿದ ಇಡ್ಲಿಯಲ್ಲಿ ಕ್ರಿಸ್ಪಿಯಾದ ವಡೆ ಮಾಡಿ..! ಎಷ್ಟು ಸುಲಭ ಮಾಡೋದು ಗೊತ್ತಾ?
ನೀವು ಬೆಳಗ್ಗೆ ತಿಂಡಿಗೆ ಅದ್ಭುತ ರುಚಿಯಲ್ಲಿ ಇಡ್ಲಿ ಮಾಡುವುದು ಕಾಮನ್, ಆದ್ರಲ್ಲೂ ಸಾಂಬಾರ್, ಚಟ್ನಿಯೊಂದಿಗೆ ಇಡ್ಲಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನಾವು ಕೂಡ ಈ ಇಡ್ಲಿ ಸಾಂಬಾರ್ ಅನ್ನು ಸವಿದಿರುತ್ತೇವೆ. ಹಾಗೆ ಇಡ್ಲಿಯನ್ನು ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ಕಡಿಮೆ ಎಣ್ಣೆ, ಮಸಾಲ ಮುಕ್ತ ತಿಂಡಿ ಆಗಿರುವುದರಿಂದ ಎಲ್ಲರಿಗೂ ಇದನ್ನು ಸವಿಯಲು ಇಷ್ಟವಾಗುತ್ತೆ.
ಅದ್ರಲ್ಲೂ ಈಗಂತು ವಿವಿಧ ರೀತಿಯ, ಬಗೆ ಬಗೆ ರುಚಿಯ ಇಡ್ಲಿಗಳ ನೋಡಬಹುದು. ಸಾಮಾನ್ಯವಾಗಿ ರವೆ ಇಡ್ಲಿ, ಅಕ್ಕಿ ಉದ್ದಿನ ಇಡ್ಲಿ ಎಲ್ಲ ಕಡೆಗೂ ಫೇಮಸ್. ಆದ್ರೆ ಮನೆಯಲ್ಲಿ ಮಾಡಿದ ಇಡ್ಲಿ ಉಳಿದರೆ ಏನು ಮಾಡುತ್ತೀರಿ. ಒಂದೆರಡು ಇಡ್ಲಿ ಉಳಿದರೆ ನೀವು ಮತ್ತೆ ಅದನ್ನೇ ಸವಿಯಬಹುದು. ಆದ್ರೆ ಅದಕ್ಕಿಂತ ಹೆಚ್ಚಿನ ಇಡ್ಲಿ ಉಳಿದರೆ ಏನು ಮಾಡಬಹುದು.

ನಾವಿಂದು ಉಳಿದ ಇಡ್ಲಿಗಳಿಂದ ಅದ್ಭುತ ರುಚಿ ನೀಡುವಂತಹ ವಡೆ ಮಾಡುವ ಕುರಿತು ಹೇಳಲಿದ್ದೇವೆ. ಹೌದು ಇಡ್ಲಿ ಉಳಿದರೆ ಅದನ್ನು ಎಸೆಯುವುದು ಇಲ್ಲವೆ ಬಿಸಿ ಮಾಡಿ ಸವಿಯುವ ಬದಲಾಗಿ ಈ ರೀತಿ ರುಚಿ ರುಚಿಯಾಗಿ ವಡೆ ಮಾಡಿ ಸವಿದು ನೋಡಿ. ಹಾಗಾದ್ರೆ ಇಡ್ಲಿಯಿಂದ ವಡೆ ಮಾಡುವುದು ಹೇಗೆ? ಮಾಡಲು ಏನೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಇಡ್ಲಿಯಿಂದ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಇಡ್ಲಿ
- ಆಲೂಗಡ್ಡೆ
- ಈರುಳ್ಳಿ
- ಅರಿಶಿಣ
- ಶುಂಠಿ
- ಬೆಳ್ಳುಳ್ಳಿ
- ಕಡ್ಲೆ ಹಿಟ್ಟು
- ಖಾರದ ಪುಡಿ
- ಜೀರಿಗೆ
- ಅಜ್ವೈನ
- ಕರಿಬೇವು
- ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಇಡ್ಲಿಯಿಂದ ವಡೆ ಮಾಡುವ ವಿಧಾನವೇನು?
ಮೊದಲಿಗೆ ಇಡ್ಲಿಗಳನ್ನು ಒಂದು ಬೌಲ್‌ಗೆ ಹಾಕಿಕೊಂಡು ಒಂದು ಆಲೂಗಡ್ಡೆಯ ತೊಳೆದು ತುರಿದುಕೊಂಡು ಮತ್ತೆ ನೀರಿಗೆ ಹಾಕಿ ಆ ಪುಡಿಯನ್ನು ಇದಕ್ಕೆ ಹಾಕಿ, ಬಳಿಕ ಒಂದು ಈರುಳ್ಳಿ, ಕರಿಬೇವು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರಶಿಣ, ಜೀರಿಗೆ, ಅಜ್ವೈನಾ, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಗೆ ಕಡಲೆ ಹಿಟ್ಟು ಅರ್ಧ ಕಪ್ ಹಾಕಿ.
ನಂತರ ಈ ಎಲ್ಲಾ ಪದಾರ್ಥಗಳನ್ನು ಹಾಕಿ ಕೈಯಿಂದ ಚೆನ್ನಾಗಿ ಕಲಸಿಕೊಳ್ಳಿ. ಇಡ್ಲಿ ಪುಡಿಯಾಗುವಂತೆ ಕಲಸಿಕೊಳ್ಳಬೇಕು. ಇದಕ್ಕೆ ನೀರು ಮಿಕ್ಸ್ ಮಾಡಿ ಕಲಸಬೇಡಿ ಹಾಗೆ ನೀರಿಲ್ಲದೆ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಿ ಬರಬೇಕು. ಇದು ಗಟ್ಟಿ ಉಂಡೆಯಾಗಿ ಹಿಟ್ಟು ಹದಕ್ಕೆ ಬರಬೇಕು. ನಂತರ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ನಂತರ ಹಿಟ್ಟು ತೆಗೆದುಕೊಂಡು ವಡೆಗಳಾಗಿ ತಟ್ಟಿಕೊಳ್ಳಿ.
ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ವಡೆಯನ್ನು ತಟ್ಟಿಕೊಳ್ಳಬೇಕು. ತೀರ ದಪ್ಪವಾಗಿ ಅಥವಾ ತೆಳುವಾಗಿಯೂ ತಟ್ಟಿಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಬಳಿಕ 4ರಿಂದ 5 ವಡೆಗಳನ್ನು ಒಂದು ಬಾರಿ ಫ್ರೈ ಮಾಡಬಹುದು. ಒಳಗೆ ಚೆನ್ನಾಗಿ ಬೇಯುವಂತೆ ಕರಿದುಕೊಳ್ಳಬೇಕು. ಎರಡೂ ಭಾಗವು ಚೆನ್ನಾಗಿ ಕರಿದುಕೊಳ್ಳಬೇಕು.
ವಡೆಗಳ ಬಣ್ಣ ಬದಲಾಗುವವರೆಗೂ ಫ್ರೈ ಮಾಡಿಕೊಂಡು ಜರಡಿಯಲ್ಲಿ ಹಾಕಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ವಡೆ ಸಿದ್ದವಾಗುತ್ತದೆ. ಇದು ಯಾರಿಗೂ ಇಡ್ಲಿಯಿಂದ ಮಾಡಿದ ವಡೆ ಎಂದು ತಿಳಿಯೋದೇ ಇಲ್ಲ. ಇದನ್ನು ಬೆಳಗ್ಗೆ ತಿಂಡಿ ಜೊತೆಗೆ ಇಲ್ಲವೆ ಸಂಜೆ ಸ್ನ್ಯಾಕ್ಸ್ ಆಗಿ ಸವಿಯಬಹುದು. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications