Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಒಂದು ಕಪ್ ರೇಷನ್ ಅಕ್ಕಿಯಲ್ಲಿ ವಡೆ ರೆಡಿ..! ಮಾಡೋಕು ಸುಲಭ.!
ದಕ್ಷಿಣ ಭಾರತದಲ್ಲಿ ಫೇಮಸ್ ತಿಂಡಿ ಅಂದ ತಕ್ಷಣ ಇಡ್ಲಿ ವಡೆ ನೆನಪಿಗೆ ಬರುತ್ತೆ. ಅದೆಷ್ಟೋ ಮಂದಿಗೆ ಈಗಲೂ ಇಡ್ಲೆ ವಡೆ ಬೆಳಗ್ಗೆ ತಿಂಡಿಗೆ ಇದ್ದರೆ ಇಷ್ಟ ಆಗುತ್ತೆ. ಇಡ್ಲಿಯನ್ನ ನಾವು ಮನೆಯಲ್ಲೇ ಸವಿಯುತ್ತೇವೆ, ಈ ತೂತು ವಡೆಯನ್ನ ಹೋಟೆಲ್‌ನಲ್ಲಿ ಸವಿಯುವುದೇ ಹೆಚ್ಚು. ಆದ್ರೆ ಈಗ ಈ ತೂತು ವಡೆಯ ದರ ಸಹ ಹೆಚ್ಚಾಗಿದ್ದು, ಕೆಲವು ಇಡ್ಲಿ ಮಾತ್ರ ಸವಿದು ಬರುತ್ತಾರೆ.
ವಡೆ ಜೊತೆಗೆ ಕಾಯಿ ಚಟ್ನಿ ಇದ್ದರೆ ಅದರ ರುಚಿಯೇ ಬೇರೆಯಾಗಿರುತ್ತೆ. ವಡೆ ಮನೆಯಲ್ಲೇ ಮಾಡಿ ಸವಿಯುವವರು ಸಹ ಇದ್ದಾರೆ. ಆದರೆ ವಡೆ ಮಾಡಲು ಹೆಚ್ಚು ಪದಾರ್ಥ ಬೇಕು, ಬಹಳ ಸಮಯ ಹಿಡಿಯುತ್ತೆ ಎಂದುಕೊಂಡಿರುತ್ತಾರೆ. ಆದ್ರೆ ವಡೆಯನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ವಡೆ ರುಚಿ ನೋಡಿದವರು ಎಂದಿಗೂ ಅದರ ಮರೆಯಲ್ಲ. ವಡೆ ಜೊತೆಗೆ ಒಳ್ಳೆಯ ಸಾಂಬಾರ್ ಇದ್ದರಂತು ತಟ್ಟೆ ತುಂಬ ಸಾಂಬಾರ್ ಹಾಕಿಕೊಂಡು ಡಿಪ್ ಮಾಡಿ ಸವಿಯುತ್ತೇವೆ.

ಹಾಗಾದ್ರೆ ನಾವಿಂದು ಮನೆಯಲ್ಲೇ ಅದರಲ್ಲೂ ರೇಷನ್ ಅಕ್ಕಿಯಿಂದಲೂ ಈ ತೂತು ವಡೆ ಮಾಡುವುದು ಹೇಗೆ ಎಂಬುದನ್ನು ನೋಡೋಣ. ವಡೆ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ- 1 ಬೌಲ್
- ಮೊಸರು - 1 ಬೌಲ್
- ಜೀರಿಗೆ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪಿ
- ಕರಿಬೇವು
- ಶುಂಠಿ
- ಎಣ್ಣೆ
- ಉಪ್ಪು
ರೇಷನ್ ಅಕ್ಕಿಯಲ್ಲಿ ವಡೆ ಮಾಡುವುದು ಹೇಗೆ?
ಈಗ ಒಂದು ಬೌಲ್‌ನಲ್ಲಿ ರೇಷನ್ ಅಕ್ಕಿ ಹಾಕಿ ತೊಳೆದು ನೆನೆಸಿಡಬೇಕು. ಇದನ್ನು 3 ಗಂಟೆ ನೆನೆಸಿಡಬೇಕು. ಬಳಿಕ ಇದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಬಳಿಕ ಮೊಸರು ಹಾಕಿಕೊಂಡಿ ಚೆನ್ನಾಗಿ ರುಬ್ಬಿಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಿ. ಈಗ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಈ ಹಿಟ್ಟು ಹಾಕಿಕೊಂಡು ಅದಕ್ಕೆ ಸರಿಯಾದ ಅಳತೆಯ ಕಪ್‌ನಲ್ಲಿ ಒಂದು ಗ್ಲಾಸ್ ನೀರು ಹಾಕಿಕೊಂಡು ಮಿಕ್ಸ್ ಮಾಡಿ.
ಈ ಹಿಟ್ಟು ತಳ ಹಿಡಿಯದಂತೆ ಚೆನ್ನಾಗಿ ತಿರುಗಿಸುತ್ತಾ ಇರಿ. ಬಳಿಕ ಹಿಟ್ಟು ಸ್ವಲ್ಪ ಗಟ್ಟಿಯಾಗಲು ಆರಂಭವಾದಾಗ ಉಪ್ಪು ಹಾಕಿ ಮಿಕ್ಸ್ ಮಾಡಿ. ಹಿಟ್ಟು ವಡೆ ಮಾಡುವ ಹಂತಕ್ಕೆ ಬರುವವರೆಗೂ ತಿರುಗಿಸುತ್ತಾ ಇರಿ. ಹಿಟ್ಟು ಸ್ವಲ್ಪ ಗಟ್ಟಿ ಗಟ್ಟಿಯಾಗಬೇಕು. ನಂತರ ಈ ಹಿಟ್ಟು ಇಳಿಸಿಕೊಂಡು ಒಂದು ತಟ್ಟೆಗೆ ಹಾಕಿಕೊಂಡು ಅದಕ್ಕೆ ಜೀರಿಗೆ, ಕತ್ರಸಿಕೊಂಡಿರುವ ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು, ತುರಿದುಕೊಂಡ ಶುಂಠಿ ಹಾಕಿಕೊಂಡು ಕೈಗೆ ಸ್ವಲ್ಪ ನೀರು ಸವರಿಕೊಂಡು ಹಿಟ್ಟು ಹದ ಮಾಡಿಕೊಳ್ಳಿ.
ಎಲ್ಲಾ ಪದಾರ್ಥಗಳು ಹಿಟ್ಟಿನಲ್ಲಿ ಚೆನ್ನಾಗಿ ಮಿಶ್ರಣ ಆಗುವಂತೆ ಹದ ಮಾಡಿಕೊಳ್ಳಿ. ಈಗ ಕೈಗೆ ಎಣ್ಣೆ ಹಚ್ಚಿಕೊಂಡು ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿ ಬಳಿಕ ಅದರ ಮಧ್ಯದಲ್ಲಿ ತೂತು ಮಾಡಿಕೊಂಡು ಇಟ್ಟುಕೊಳ್ಳಿ. ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ವಡೆಯನ್ನು ಎಣ್ಣೆಗೆ ಬಿಡಿ.
ಸಣ್ಣ ಉರಿಯಲ್ಲಿ ವಡೆಯನ್ನು ಚೆನ್ನಾಗಿ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರೇಷನ್ ಅಕ್ಕಿಯ ವಡೆ ರೆಡಿಯಾಗುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿ ಮಾಡಬಹುದು, ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications