Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗ್ಗೆ ತಿಂಡಿಗೆ ಹಾಗೆ ಸಂಜೆ ಸ್ನ್ಯಾಕ್ಸ್‌ಗೆ ಮಾಡಿ ಉದ್ದಿನ ಬೋಂಡಾ: ಎಷ್ಟು ಸುಲಭ ಗೊತ್ತಾ?
ಸಂಜೆಯ ಸ್ನ್ಯಾಕ್ಸ್ ಎಂದಾಗ ನಿಮಗೆ ಹಲವು ಖಾದ್ಯಗಳು ನೆನಪಿಗೆ ಬರುತ್ತವೆ. ಬಿಸಿ ಬಿಸಿ ಬಜ್ಜಿ, ಬೋಂಡಾ, ಮಸಾಲ ಪೂರಿ, ದೋಸೆ, ಹೀಗೆ ಹಲವು ರೀತಿಯ ಸ್ನ್ಯಾಕ್ಸ್ ಸವಿಯಲು ನೀವು ಇಷ್ಟಪಡುಬಹುದು. ಅದರಲ್ಲೂ ನೀವು ಬೋಂಡಾ ಸವಿಯಲು ಇಷ್ಟಪಡುವವರಾಗಿದ್ದರೆ ಈ ರೀತಿಯ ಉದ್ದಿನ ಬೋಂಡಾ ಮಾಡಿ ಸವಿದಿದ್ದೀರಾ? ಅದರಲ್ಲೂ ಬೋಂಡಾವನ್ನು ಬೆಳಗ್ಗೆ ಕೂಡ ತಿಂಡಿಗೆ ಸವಿದು ನೋಡಿ.
ಉದ್ದಿನ ಬೋಂಡಾ ನೀವು ಬೆಳಗ್ಗೆ ಕೂಡ ಸವಿಯಬಹುದು ಹಾಗೆ ಸಂಜೆ ಸ್ನ್ಯಾಕ್ಸ್ ಆಗಿಯೂ ಸವಿಯಬಹುದು. ನಾವಿಂದು ಈ ರುಚಿ ರುಚಿಯ ಉದ್ದಿನ ಬೋಂಡಾ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಉದ್ದಿನ ಬೋಂಡಾ ನಿಮ್ಮ ಬೆಳಗ್ಗಿನ ತಿಂಡಿ ಹಾಗೆ ಸಂಜೆಯ ಸ್ನ್ಯಾಕ್ಸ್‌ಗೂ ಉತ್ತಮ ರುಚಿ ನೀಡಲಿದೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ. ನೀವು ಸಂಜೆ ಸಮಯದಲ್ಲಿ ಫ್ರೀ ಆಗಿದ್ದಾಗ ಇಲ್ಲವೆ ಬೆಳಗ್ಗೆ ಹಾಗೂ ಸಂಜೆಗೆ ಸೇರಿ ಒಂದೇ ತಿಂಡಿ ಮಾಡುವ ಆಲೋಚನೆಯಲ್ಲಿದ್ದರೆ ಇದನ್ನು ಟ್ರೈ ಮಾಡಬಹುದು.

ಹಾಗಾದ್ರೆ ನಾವಿಂದು ಈ ಉದ್ದಿನ ಬೋಂಡಾ ಮಾಡೋದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಉದ್ದಿನ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಈ ಬೋಂಡಾ ಮಾಡುವುದು ಹೇಗೆ?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉದ್ದಿನ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಉದ್ದಿನ ಬೇಳೆ- ಅರ್ಧ ಕಪ್
- ಚಿರೋಟಿ ರವಾ
- ಅಕ್ಕಿ ಹಿಟ್ಟು
- ಉಪ್ಪು
- ತೆಂಗಿನಕಾಯಿ
- ಕೊತ್ತಂಬರಿ ಸೊಪ್ಪು
- ಸೋಡಾ
- ಹಸಿಮೆಣಸಿನಕಾಯಿ
- ಕರಿಬೇವು
- ಇಂಗು
- ಮೆಣಸಿನಕಾಯಿ
- ಶುಂಠಿ
- ಎಣ್ಣೆ
ಉದ್ದಿನ ಬೋಂಡಾ ಮಾಡುವ ವಿಧಾನವೇನು?
ಉದ್ದಿನ ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಈಗ ಮಿಕ್ಸಿ ಜಾರ್‌ಗೆ ನೆನೆಸಿಟ್ಟ ಉದ್ದಿನ ಬೇಳೆ ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. 2 ಸ್ಪೂನ್ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟು ಆದಷ್ಟು ಗಟ್ಟಿಯಾಗಿರಲಿ. ನಂತರ ಈ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.
ಹಾಗೆ ಸ್ವಲ್ಪ ಅಕ್ಕಿ ಹಿಟ್ಟು, ಚಿರೋಟಿ ರವೆ ಹಾಕಿ ಮತ್ತೆ ಚೆನ್ನಾಗಿ ಕಲಸಿಕೊಳ್ಳಿ. ಹಾಗೆ ಇದಕ್ಕೆ ಶುಂಠಿ, ಕಾಳು ಮೆಣಸನ್ನು ಪುಡಿ ಮಾಡಿ ಹಾಕಿಕೊಳ್ಳಿ. ಇಂಗು ಸಣ್ಣದಾಗಿ ಹೆಚ್ಚಿದ ಹಸಿಮೆಣಸು ಹಾಗೂ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಚಿಟಿಕೆ ಸೋಡಾ ಹಾಕಿ ಮಿಶ್ರಣ ಮಾಡಬೇಕು. ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಕೈಯಿಂದಲೇ ಹಿಟ್ಟು ತೆಗೆದುಕೊಂಡು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರದಲ್ಲಿ ಉಂಡೆಯನ್ನು ನಿಧಾನವಾಗಿ ಎಣ್ಣೆ ಬಿಡಿ. ಉರಿಯನ್ನು ಮಧ್ಯಮದಲ್ಲಿಟ್ಟು ನಿಧಾನವಾಇ ಕರಿದುಕೊಳ್ಳಿ. ಬೋಂಡಾದ ಒಳಗೂ ಚೆನ್ನಾಗಿ ಬೇಯಬೇಕು. ಇಷ್ಟಾದರೆ ನಿಮ್ಮ ಮುಂದೆ ಉದ್ದಿನ ಬೋಂಡಾ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ತಿಂಡಿಗೆ ಇಲ್ಲವೆ ಸ್ನ್ಯಾಕ್ಸ್ ಆಗಿ ಮಾಡಿ ನೋಡಿ.
ಮಕ್ಕಳಿಂದ ಹಿಡಿದು ಹಿರಿಯರಿಗೂ ಇದು ಇಷ್ಟವಾಗುತ್ತೆ. ಇದರ ಜೊತೆಗೆ ತೆಂಗಿನಕಾಯಿ ಇಲ್ಲವೆ ಹುರಿಗಡಲೆ ಚಟ್ನಿ ಮಾಡಿದರೆ ರುಚಿಗೆ ಅದ್ಭುತವಾಗಿರಲಿದೆ. ನೀವು ಸಹ ಮನೆಯಲ್ಲಿ ಸಂಜೆ ಸಮಯಕ್ಕೆ ಇಲ್ಲವೆ, ಬ್ರೇಕ್ ಫಾಸ್ಟ್‌ಗೆ ಇದನ್ನು ಮಾಡಿ ನೋಡಿ. ಅದರಲ್ಲೂ ಇದನ್ನು ಟೀ-ಕಾಫಿಯ ಹೊತೆಗೆ ಒಂದು ಖಾರ ಚಟ್ನಿ ಮಾಡಿ ಸವಿಯಲು ನೀಡಬಹುದು.



Click it and Unblock the Notifications