Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಕ್ಕರ್‌ನಲ್ಲಿ 5 ನಿಮಿಷದಲ್ಲೇ ಉಪ್ಪಿಟ್ಟು ಮಾಡಬಹುದು..! ಹೇಗೆ ಗೊತ್ತಾ?
ಉಪ್ಪಿಟ್ಟು ಬೆಳಗಿನ ತಿಂಡಿಗೆ ಮಾಡುವ ಒಂದು ಖಾದ್ಯ. ಉಪ್ಪಿಟ್ಟಲ್ಲಿ ಹತ್ತಾರು ರೀತಿಯ ವಿಧಗಳಿವೆ. ಕೆಲವರು ಉಪ್ಪಿಟ್ಟು ಅಂದ್ರೆ ಮೂಗು ಮುರಿಯುತ್ತಾರೆ. ಮತ್ತೆ ಕೆಲವರು ಉಪ್ಪಿಟ್ಟು ಇಷ್ಟಪಟ್ಟು ಸವಿಯುತ್ತಾರೆ. ಮತ್ತೆ ಉಪ್ಪಿಟ್ಟು ಮಾಡೋದು ಸಹ ತುಂಬಾನೆ ಸುಲಭ, ಎಲ್ಲರು ರವೆ ಹುರಿದು ತರಕಾರಿಗಳ ಮಿಕ್ಸ್ ಮಾಡಿ ಉಪ್ಪಿಟ್ಟು ಮಾಡುತ್ತಾರೆ.
ಇದಕ್ಕೆ ಬಟಾಣಿ, ತರಕಾರಿ ಹಾಕಿ ಉಪ್ಪಿಟ್ಟು ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ. ಬೆಳಗ್ಗೆ ಮಾಡಿದ ಉಪ್ಪಿಟ್ಟು ಸಂಜೆಗೂ ಒಳ್ಳೆಯ ತಿಂಡಿಯಾಗುತ್ತೆ. ಹೀಗಾಗಿ ಹಲವರು ಇದನ್ನು ಮಾಡುತ್ತಾರೆ. ಹಲವು ಹೋಟೆಲ್‌ಗಳಲ್ಲಿ ಉಪ್ಪಿಟ್ಟು ರುಚಿ ರುಚಿಯಾಗಿ ಮಾಡುತ್ತಾರೆ. ಹೀಗಾಗಿ ಕೆಲವು ಕಡೆ ಇದೇ ಫೇಮಸ್ ಖಾದ್ಯ.

ಬಹುತೇಕರು ಉಪ್ಪಿಟ್ಟನ್ನು ಒಂದೇ ರೀತಿ ಮಾಡುತ್ತಾರೆ. ಉಪ್ಪಿಟ್ಟು ಮಾಡಲು ರವೆಯನ್ನ ಪಾತ್ರೆಯನ್ನ ಹುರಿದು ಮಾಡಲಾಗುತ್ತೆ. ಆದ್ರೆ ಕುಕ್ಕರ್‌ನಲ್ಲಿ ಮತ್ತಷ್ಟು ಸುಲಭವಾಗಿ ಉಪ್ಪಿಟ್ಟು ಮಾಡಬಹುದು. ಕುಕ್ಕರ್ ಬಳಸಿ ಉಪ್ಪಿಟ್ಟು ಮಾಡುವುದನ್ನು ನೀವು ಒಮ್ಮೆ ನೋಡಿದರೆ ಮತ್ತೆಂದು ಉಪ್ಪಿಟ್ಟು ಮಾಡಲು 5 ನಿಮಿಷಕ್ಕಿಂತ ಹೆಚ್ಚಿನ ಸಮಯ ಹಾಳು ಮಾಡಲ್ಲ.
ಹಾಗಾದ್ರೆ ಕುಕ್ಕರ್‌ನಲ್ಲಿ ಉಪ್ಪಿಟ್ಟು ಮಾಡುವುದು ಹೇಗೆ?, ಕುಕ್ಕರ್‌ನಲ್ಲಿ ಉಪ್ಪಿಟ್ಟು ಮಾಡಲು ಬೇಕಾಗುವ ವಸ್ತುಗಳು ಏನು?, ಉಪ್ಪಿಟ್ಟು ಮಾಡುವ ವಿಧಾನವೇನು? ಕುಕ್ಕರ್‌ನಲ್ಲಿ ಉಪ್ಪಿಟ್ಟು ಮಾಡುವ ಸರಿಯಾದ ಕ್ರಮ ಏನು ಎಂಬುದನ್ನು ನೋಡೋಣ.
ಕುಕ್ಕರ್‌ನಲ್ಲಿ ಉಪ್ಪಿಟ್ಟು ಮಾಡಲು ಬೇಕಾಗುವ ವಸ್ತುಗಳು
- ಗೋಧಿ ರವೆ- 1 ಕಪ್
- ಸಾಸಿವೆ
- ಉದ್ದಿನ ಬೇಳೆ
- ಕಡಲೆ ಬೇಳೆ
- ಈರುಳ್ಳಿ
- ಹಸಿರು ಮೆಣಸಿನಕಾಯಿ
- ಕರಿಬೇವು
- ಶುಂಠಿ
- ಹಸಿರು ಬಟಾಣಿ
- ಟೊಮೆಟೋ- 1
- ಉಪ್ಪು
- ನಿಂಬೆ
- ತೆಂಗಿನ ಕಾಯಿ
- ಕೊತ್ತಂಬರಿ ಸೊಪ್ಪು
- ತುಪ್ಪ
- ಎಣ್ಣೆ
ಕುಕ್ಕರ್‌ನಲ್ಲಿ ಉಪ್ಪಿಟ್ಟು ಮಾಡುವ ಕ್ರಮವೇನು?
ಮೊದಲು ಗೋಧಿ ರವೆ ಅಥವಾ ಉಪ್ಪಿಟ್ಟು ರವೆಯನ್ನ ಪಾತ್ರೆಯಲ್ಲು ಹಾಕಿ ಹುರಿದುಕೊಳ್ಳಿ. ಈಗ ಒಂದು ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೇ ಬೇಳೆ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ, ಹಸಿ ಮೆಣಸು, ಕರಿಬೇವಿನ ಎಲೆ, ಶುಂಠಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಬಟಾಣಿ, ಟೊಮೆಟೋ, ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ಕಪ್ ರೆವೆಗೆ 2.5 ಕಪ್ ನೀರು ಹಾಕಬೇಕು. ಉಪ್ಪು, ನಿಂಬೆ ರಸ ಹಿಂಡಿಕೊಂಡು ಹುರಿದುಕೊಂಡಿರುವ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ಸೀಟಿ ಹೊಡೆಯಲು ಬಿಡಿ.
ಒಂದು ಸೀಟಿಯ ಬಳಿಕ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಉಪ್ಪಿಟ್ಟು ರೆಡಿಯಾಗುತ್ತದೆ. ಕುಕ್ಕರ್‌ನಲ್ಲಿ ಮಾಡಿದ ಉಪ್ಪಿಟ್ಟು ಒಮ್ಮೆ ಟ್ರೈ ಮಾಡಿ ನೋಡಿ. ಮಾಡೋಕೆ 5 ರಿಂದ 10 ನಿಮಿಷ ಸಾಕಾಗುತ್ತದೆ, ಸಮಯವೂ ಉಳಿತಾಯವಾಗುತ್ತದೆ.
ನೀವು ಇದಕ್ಕೆ ಯಾವುದಾದರು ತರಕಾರಿಯನ್ನು ಸಹ ಹಾಕಿಕೊಳ್ಳಬಹುದು. ಕುಕ್ಕರ್‌ನಲ್ಲಿ ಮಾಡೋದ್ರಿಂದ ಬೇಯಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.



Click it and Unblock the Notifications