Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ಸ್ಪೆಷಲ್ ಕಡಲೆ ಕಾಳಿನ ಗೊಜ್ಜು ಸವಿದು ನೋಡಿ..! ಮಾಡೋದು ಹೇಗೆ?
ಯುಗಾದಿ ಹಬ್ಬ ಹತ್ತಿರವಾಗುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ನೀವು ಯುಗಾದಿ ಆಚರಿಸಲಿದ್ದೀರಿ. ಅದರಲ್ಲೂ ಯುಗಾದಿ ಅಂದರೆ ಅಲ್ಲಿ ರುಚಿ ರುಚಿಯ ಖಾದ್ಯಗಳು, ಸಿಹಿ ತಿಂಡಿ ಸಹ ಮಾಡುವುದು ಸಾಮಾನ್ಯ. ಅದರಲ್ಲೂ ನಾವು ಹೆಚ್ಚಾಗಿ ಹೋಳಿಗೆ ಮಾಡುವುದು ಸಾಮಾನ್ಯ. ಹೋಳಿಗೆ ಮಾಡೋದು ಯುಗಾದಿಯಲ್ಲಿ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಹೋಳಿಗೆ ಇಲ್ಲದಿದ್ದರೆ ಹಬ್ಬದ ಸಂಭ್ರಮವೇ ಇರುವುದಿಲ್ಲ. ಹಾಗೆ ಯುಗಾದಿಯಂದು ಹೋಳಿಗೆ ಮಾತ್ರವಲ್ಲ ಹಲವು ರೀತಿಯ ಸಿಹಿ, ಹಾಗೆ ಊಟಕ್ಕೆ ಖಾದ್ಯ ಮಾಡುವುದು ನೋಡಬಹುದು.
ಅದರಲ್ಲೂ ಹಬ್ಬದ ದಿನ ಹೋಳಿಗೆ ಹಾಗೂ ಊಟ ಸವಿಯಲು ಕಡಲೆ ಕಾಳಿನ ಗೊಜ್ಜು ಮಾಡುವುದು ಸಾಮಾನ್ಯ. ಏಕೆಂದರೆ ಊಟದ ಜೊತೆಗೆ ಈ ಕಾಳಿನ ಗೊಜ್ಜು ಹಾಗೆ ಹೊಳಿಗೆ ಸವಿಯಲು ಕೂಡ ಈ ಕಾಳಿನ ಗೊಜ್ಜು ಮಾಡಿ ಸವಿಯುತ್ತಾರೆ. ಈ ಕಾಳಿನ ಗೊಜ್ಜು ಮಾಡಿದ್ರೆ ಹಬ್ಬದ ಸಂಭ್ರಮ ಹೆಚ್ಚಾಗೋದು ನೋಡಬಹುದು. ಇದು ಹೋಳಿಗೆ ಸವಿಯಲು ಅದ್ಭುತವಾಗಿರಲಿದೆ.

ಹಾಗಾದ್ರೆ ಈ ಕಾಳಿನ ಗೊಜ್ಜು ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಡಲೆ ಕಾಳಿನ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಡಲೆ ಕಾಳು ಅರ್ಧ ಕಪ್
- ಒಣ ಬಟಾಣಿ ಅರ್ಧ ಕಪ್
- ಕಾಬುಲ್ ಚನ್ನ ಕಾಲು ಕಪ್
- ಬಾಳೆಕಾಯಿ 1
- ಆಲೂಗಡ್ಡೆ 2
- ಈರುಳ್ಳಿ 3
- ಟೊಮೊಟೊ ಹಣ್ಣು 2
- ತೆಂಗಿನಕಾಯಿ ತುರಿ ಅರ್ಧ ಕಪ್
- ಹಸಿ ಶುಂಠಿ ಒಂದಿಂಚು
- ಬೆಳ್ಳುಳ್ಳಿ 1 ಗಡ್ಡೆ
- ಎಣ್ಣೆ 4 ಟೇಬಲ್ ಸ್ಪೂನ್
- ಬ್ಯಾಡಗಿ ಮೆಣಸಿನಕಾಯಿ 4
- ಸಾಸಿವೆ ಸ್ವಲ್ಪ
- ದನಿಯ ಪುಡಿ 3 ಟೇಬಲ್ ಸ್ಪೂನ್
- ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
- ಗಸಗಸೆ 1 ಟೀ ಸ್ಪೂನ್
- ಅರಿಶಿಣದ ಪುಡಿ
- ಚಕ್ಕೆ ಅರ್ಧ ಇಂಚು
- ಲವಂಗ 2
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಕರಿಬೇವಿನ ಸೊಪ್ಪು ಸ್ವಲ್ಪ
- ಪುದಿನ ಸೊಪ್ಪು ಸ್ವಲ್ಪ
- ಉಪ್ಪು ರುಚಿಗೆ ತಕ್ಕಷ್ಟು
ಕಡಲೆ ಕಾಳಿನ ಗೊಜ್ಜು ಮಾಡುವುದು ಹೇಗೆ?
ಮೊದಲಿಗೆ ಒಂದು ಬೌಲ್ನಲ್ಲಿ ಕಡಲೆ ಕಾಳು, ಒಣ ಬಟಾಣಿ , ಕಾಬುಲ್ ಚನ್ನ ಕಾಳನ್ನು ಹಾಕಿಕೊಂಡು ಅದಕ್ಕೆ ನೀರು ಹಾಕಿ ಇಡೀ ರಾತ್ರಿ ನೆನೆಯಲು ಬಿಡಬೇಕು. ಮಾರನೆ ದಿನ ಬೆಳಗ್ಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಒಣ ಮೆಣಸು ಹಾಕಿಕೊಂಡು ಬಳಿಕ 2 ಸ್ಪೂನ್ ಎಣ್ಣೆ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಧನಿಯಾ ಪುಡಿ, ತೆಂಗಿನಕಾಯಿ ತುರಿ, ಖಾರದ ಪುಡಿ, ಅರಶಿಣ, ಗಸೆಗಸೆ, ಚಕ್ಕೆ, ಲವಂಗ, ಕೊತ್ತಂಬರಿ, ಪುದಿನ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಒಲೆ ಆಫ್ ಮಾಡಿಕೊಂಡು ಇದನ್ನು ತಣ್ಣಗಾಗಲು ಬಿಡಿ. ಈಗ ನೆನೆಸಿಟ್ಟಿರುವ ಕಾಳುಗಳನ್ನು ಒಂದು ಕುಕ್ಕರ್ಗೆ ಹಾಕಿ ನೀರು, ಉಪ್ಪು ಹಾಕಿ ಮಿಕ್ಸ್ ಮಾಡಿ 2 ಸೀಟಿ ಹೊಡೆಯಲು ಬಿಡಿ.
2 ಸೀಟಿಯ ಬಳಿಕ ಕಾಳುಗಳನ್ನು ಬೇರ್ಪಡಿಸಿ ಆ ನೀರನ್ನು ಸಹ ಇಟ್ಟುಕೊಳ್ಳಿ. ನಂತರ ಫ್ರೈ ಮಾಡಿರುವ ಮಸಾಲೆಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನೀರು ಸಹ ಹಾಕಿಕೊಂಡು ಚೆನ್ನಾಗಿ ನುಣ್ಣಗೆ ರುಬ್ಬಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಕರಿವೇವು, ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿ. ಈಗ ಚಿಕ್ಕದಾಗಿ ಕತ್ತರಿಸಿದ ಟೊಮೆಟೋ ಹಾಕಿ ಫ್ರೈ ಮಾಡಿ. ಅನಂತರ ಒಂದು ಸಣ್ಣ ಬಾಳೆಕಾಯಿಯನ್ನು ಸಹ ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿ. ಬಾಳೆಕಾಯಿ ಇಲ್ಲದಿದ್ದರೆ ಆಲೂಗಡ್ಡೆ ಬಳಸಿ. ಇದರ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿಕೊಳ್ಳಿ.
ನಂತರ ಬೇಯಿಸಿಕೊಂಡಿರುವ ಕಾಳುಗಳನ್ನು ಈ ಬಾಣಲೆಗೆ ಹಾಕಿಕೊಳ್ಳಿ. ಅದರ ನೀರು ಕೂಡ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಮಿಕ್ಸಿಯಲ್ಲಿ ರುಬ್ಬಿರುವ ಮಸಾಲೆಗಳ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿ. ಇದು ದಪ್ಪವಾಗಿ ಇರಲಿ, ಮತ್ತೆ ನೀರು ಹಾಕಿಕೊಳ್ಳಬೇಡಿ. ಬೇಕಾದರೆ ರುಚಿ ನೋಡಿ ಉಪ್ಪು ಬೇಕಿದ್ದರೆ ಹಾಕಿಕೊಳ್ಳಿ. ಹಾಗೆ ಕುದಿಬರಲು ಬಿಡಿ. ಚೆನ್ನಾಗಿ ಕಾಳು ಬೆಂದ ನಂತರ ಒಲೆ ಆಫ್ ಮಾಡಿಕೊಳ್ಳಿ.



Click it and Unblock the Notifications