ಉಡುಪಿ ಹೋಟೆಲ್ ಉಪ್ಪಿಟ್ಟು ಸವಿದರೆ ದಿನವೂ ಇದೇ ಬೇಕೆನ್ನುತ್ತೀರಿ! ಮಾಡೋದು ಹೇಗೆ?

Posted By:

ನೀವು ಬೆಳಗ್ಗೆ ತಿಂಡಿಯ ಸಮಯದಲ್ಲಿ ಸವಿಯಲು ಉಪ್ಪಿಟ್ಟು ಅಂದ್ರೆ ಹಲವರು ಇಷ್ಟಪಡುತ್ತಾರೆ. ಹಾಗೆ ಮತ್ತೆ ಕೆಲವರು ಇಷ್ಟಪಡದೆ ಇರಬಹುದು. ಇನ್ನು ಹಲವರು ಉಪ್ಪಿಟ್ಟು ಸವಿಯಲು ಇಷ್ಟಪಡುತ್ತಾರೆ. ಆದ್ರೆ ಬಹುತೇಕರು ಮನೆಯಲ್ಲಿ ಮಾಡುವ ಉಪ್ಪಿಟ್ಟು ಸವಿಯಲು ಇಷ್ಟಪಡೋದಿಲ್ಲ. ಹಾಗೆ ಮತ್ತೊಂದಿಷ್ಟು ಜನರಿಗೆ ಉಪ್ಪಿಟ್ಟಿನ ರುಚಿ ಹಿಡಿಸೋದಿಲ್ಲ.

ಆದ್ರೆ ನಾವಿಂದು ರುಚಿಯಾದ ಉಪ್ಪಿಟ್ಟು ಮನೆಯಲ್ಲಿ ಮಾಡುವ ಕುರಿತು ತಿಳಿಯೋಣ. ಕೆಲವೊಂದು ಕಡೆಗಳಲ್ಲಿ ಉಪ್ಪಿಟ್ಟು ಬಹಳ ರುಚಿಕರವಾಗಿ ಮಾಡುತ್ತಾರೆ. ಕೆಲವು ಹೋಟೆಲ್‌ಗಳು ಉಪ್ಪಿಟ್ಟು ತಿಂಡಿಗಳಿಂದಲೇ ಫೇಮಸ್ ಆಗಿರೋದು ನೋಡಬಹುದು. ಹಾಗೆ ಉಡುಪಿ ಹೋಟೆಲ್‌ನ ಉಪ್ಪಿಟ್ಟು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

How To Make Udupi Hotel Style Upma At Home In Kannada

ಉಡುಪಿ ಹೋಟೆಲ್‌ನ ಫೇಮಸ್ ತಿಂಡಿಗಳಲ್ಲಿ ಉಪ್ಪಿಟ್ಟು ಕೂಡ ಒಂದು. ನೀವು ಈ ಹೋಟೆಲ್‌ನ ಉಪ್ಪಿಟ್ಟು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಈ ರೀತಿಯ ರುಚಿಯ ಉಪ್ಪಿಟ್ಟು ಮನೆಯಲ್ಲಿ ಮಾಡೋದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಹೋಟೆಲ್ ಶೈಲಿ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.


ಉಡುಪಿ ಹೋಟೆಲ್ ಉಪ್ಪಿಟ್ಟು ಮಾಡಲು ಬೇಕಾಗುವ ವಸ್ತುಗಳು

  • ರವೆ- 1 ಕಪ್
  • ಜೀರಿಗೆ- 1 ಸ್ಪೂನ್
  • ಸಾಸಿವೆ- 1 ಸ್ಪೂನ್
  • ಉದ್ದಿನ ಬೇಳೆ
  • ತುಪ್ಪ
  • ಎಣ್ಣೆ
  • ಹಸಿ ಮೆಣಸು
  • ಈರುಳ್ಳಿ- 2
  • ಟೊಮೆಟೋ- 1
  • ಉಪ್ಪು
  • ಶುಂಠಿ
  • ಕೊತ್ತಂಬರಿ ಸೊಪ್ಪು
  • ಸಕ್ಕರೆ- 2 ಸ್ಪೂನ್
  • ತೆಂಗಿನಕಾಯಿ ತುರಿ

ಉಡುಪಿ ಹೋಟೆಲ್ ಉಪ್ಪಿಟ್ಟು ಮಾಡುವುದು ಹೇಗೆ?

ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಅದಕ್ಕೆ ಜೀರಿಗೆ, ಸಾಸಿವೆ ಹಾಕಿ ಚಟಪಟ ಎನ್ನುವಾಗ ಉದ್ದಿನ ಬೇಳೆ ಸೇರಿಸಿ ಹುರಿದುಕೊಳ್ಳಿ. ನಂತರ ಕರಿಬೇವು, ಹಸಿ ಮೆಣಸು, ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿಕೊಳ್ಳಿ. ನಂತರ ಇದಕ್ಕೆ 2ರಿಂದ 3 ನಿಮಿಷ ಫ್ರೈ ಮಾಡಿ. ನಂತರ ಶುಂಠಿ ತುರಿ ಹಾಕಿ ಮಿಕ್ಸ್ ಮಾಡಿ.

ಈಗ 1 ಕಪ್ ಉಪ್ಪಿಟ್ಟು ರವೆ ಇದಕ್ಕೆ ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ 1 ನಿಮಿಷ ಬಿಟ್ಟು ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋ ಹಾಕಿಕೊಳ್ಳಿ. ಅನಂತರ ರುಚಿಗೆ ತಕ್ಕಷ್ಟು ಉಪ್ಪು, 2 ಸ್ಪೂನ್ ಸಕ್ಕರೆ ಕೂಡ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಬೇಕು. ಈಗ 1 ಕಪ್‌ ರವೆಗೆ 3 ಕಪ್ ಬಿಸಿ ನೀರು ಹಾಕಿಕೊಳ್ಳಬೇಕು. ಈ ನೀರು ಬಹಳ ಬಿಸಿಯಾಗಿರಲಿ.

ಈಗ ನೀರು ಹಾಕಿ ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. ಇದು ನೀರು ಒಣಗಿ ಸ್ವಲ್ಪ ಗಟ್ಟಿಯಾಗಿರಬೇಕು. ಕೇಸರಿಬಾತಿನಂತಹ ಹದಕ್ಕೆ ಬರುವಂತೆ ಕಾಯಿಸಿಕೊಳ್ಳಿ. ಕೊನೆಯಲ್ಲಿ 1 ಸ್ಪೂನ್ ತುಪ್ಪ ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 1 ನಿಮಿಷ ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಹಾಕಿ ಮಿಕ್ಸ್ ಮಾಡಿಕೊಂಡು ಮತ್ತೆ 30 ಸೆಕೆಂಡ್ ಸಮಯ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ.

ಇಷ್ಟಾದರೆ ಸ್ಪೆಷಲ್ ರುಚಿಯ ಉಡುಪಿ ಹೋಟೆಲ್ ಉಪ್ಪಿಟ್ಟು ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಇದ್ರ ರುಚಿಗೆ ನೀವು ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ. ಹೋಟೆಲ್ ರುಚಿಯಲ್ಲಿ ಮಾಡುವ ಈ ಉಪ್ಪಿಟ್ಟು ಎಲ್ಲರಿಗೂ ಇಷ್ಟವಾಗುತ್ತೆ. ಉಪ್ಪಿಟ್ಟು ಇಷ್ಟಪಡುವವರು ಕೂಡ ಈ ಉಪ್ಪಿಟ್ಟು ಸವಿಯಲು ಇಷ್ಟಪಡುತ್ತಾರೆ.

[ of 5 - Users]
Story first published: Monday, September 8, 2025, 15:10 [IST]
X
Desktop Bottom Promotion