Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿ ಸ್ಪೆಷಲ್: ಸಾಂಪ್ರದಾಯಿಕ ಶೈಲಿಯ ಕಜ್ಜಾಯ, ಹೊಸ ವಿಧಾನದಲ್ಲಿ ಮಾಡಿ!
ದೀಪಾವಳಿ ಎಂದ ಕೂಡಲೆ ನಮಗೆ ಸಿಹಿ ತಿಂಡಿಗಳು ನೆನಪಾಗೋದು ಕಾಮನ್. ಅದ್ರಲ್ಲೂ ರುಚಿ ರುಚಿಯ ಸಿಹಿ ತಿಂಡಿಗಳನ್ನು ಮಾಡಿ ಮಕ್ಕಳು ಹಿರಿಯರು ಸವಿದು ಸಂಭಮ್ರದಲ್ಲಿ ಈ ಹಬ್ಬ ಆಚರಿಸುತ್ತಾರೆ. ಹಾಗೆ ಈ ಹಬ್ಬದಲ್ಲಿ ಯಾವುದಾದರು ತಿಂಡಿ ಮಾಡಿ ಸವಿಯೋದು ಪ್ರತಿಯೊಂದು ಮನೆಯಲ್ಲೂ ಕಾಮನ್.
ಈ ದೀಪಾವಳಿಯ ಸಂಭ್ರಮದ ನಡುವೆ ಈ ಸಿಹಿಗಳು ಎಲ್ಲರ ಬಾಯಲ್ಲೂ ನೀರು ತರಿಸುತ್ತವೆ. ಹೀಗಾಗಿ ನಾವಿಂದು ದೀಪಾವಳಿಯ ಸಮಯದಲ್ಲಿ ಬಹುತೇಕರ ಮನೆಯಲ್ಲಿ ಮಾಡಿ ಸವಿಯುವಂತಹ ರುಚಿ ರುಚಿಯ ಸಾಂಪ್ರದಾಯಿಕ ಶೈಲಿಯ ಕಚ್ಚಾಯವನ್ನು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಕಚ್ಚಾಯ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಅದ್ರಲ್ಲೂ ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ಕಜ್ಜಾಯದ ರುಚಿ ನೀವು ಕೂಡ ಸವಿದಿರಬಹುದು, ಆದ್ರೆ ಈಗ ಅಂಗಡಿ ಬೇಕರಿಯಲ್ಲೂ ರುಚಿ ರುಚಿಯ ಕಜ್ಜಾಯ ಸಿಗುತ್ತವೆ. ಆದ್ರೆ ಮನೆಯಲ್ಲಿ ಮಾಡಿದಂತಹ ರುಚಿಯ ಕಜ್ಜಾಯ ಎಲ್ಲೂ ಸಿಗೋದಿಲ್ಲ. ಈ ರೀತಿ ಸಾಂಪ್ರದಾಯಿಕ ಶೈಲಿಯ ಕಜ್ಜಾಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸಾಂಪ್ರದಾಯಿಕ ಶೈಲಿಯ ಕಜ್ಜಾಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಸಾಂಪ್ರದಾಯಿಕ ಶೈಲಿಯ ಕಜ್ಜಾಯ ಮಾಡಲು ಬೇಕಾಗುವ ವಸ್ತುಗಳು
ಅಕ್ಕಿ
ತುಪ್ಪ
ಏಲಕ್ಕಿ
ಎಳ್ಳು
ಕೊಬ್ಬರಿ
ಬೆಲ್ಲ
ಸಾಂಪ್ರದಾಯಿಕ ಶೈಲಿಯ ಕಜ್ಜಾಯ ಮಾಡುವ ವಿಧಾನವೇನು?
ಮೊದಲು ಒಂದು ಅಳತೆ ಕಪ್‌ನಲ್ಲಿ 2 ಕಪ್ ಅಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಇದನ್ನು ನೀರು ಹಾಕಿ ನೆನೆಯಲು ಬಿಡಿ. 2 ದಿನಗಳ ಕಾಲ ಈ ಅಕ್ಕಿ ನೆನೆಯಬೇಕು. ದಿನಕ್ಕೆ 2 ಬಾರಿ ನೀರು ಬದಲಾಯಿಸಬೇಕು. 2 ದಿನದ ಬಳಿಕ ಅಕ್ಕಿಯನ್ನು ತೆಗೆದು ಸ್ವಲ್ಪ ಡ್ರೈ ಮಾಡಿಕೊಳ್ಳಿ. ಬಟ್ಟೆ ಮೇಲೆ ಹಾಕಿ 15 ನಿಮಿಷ ಒಣಗಿಸಿದರೆ ಸಾಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಬಿಳಿ ಎಳ್ಳು ಹಾಕಿ ಹುರಿದುಕೊಳ್ಳಿ. ತೆಗೆದು ಬದಿಗಿಟ್ಟು ಇದಕ್ಕೆ ಗಸೆಗಸೆ ಕೂಡ ಹಾಕಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ ಒಣ ಕೊಬ್ಬರಿ, ಏಲಕ್ಕಿ, ಒಣ ಶುಂಠಿ ಸಹ ಹಾಕಿ ರುಬ್ಬಿಕೊಳ್ಳಬೇಕು. ಪುಡಿ ಮಾಡಿದ ನಂತರ ಇದನ್ನು ಸಹ ಬದಿಗಿಟ್ಟುಕೊಳ್ಳಿ.
ಈಗ ಒಣಗಿದ ಅಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು. ನುಣ್ಣಗೆ ಪುಡಿ ಮಾಡಿದ ಹಿಟ್ಟನ್ನು ಜರಡಿ ಹಿಡಿದು ನುಣ್ಣಣೆಯ ಪುಡಿ ತೆಗೆದುಕೊಳ್ಳಿ. ಹಿಟ್ಟಿನಲ್ಲಿ ತೇವಾಂಶ ಒಣಗದಂತೆ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಪಾತ್ರೆ ಇಟ್ಟು 2 ಕಪ್ ಬೆಲ್ಲದ ಪುಡಿ ಹಾಕಿ ನೀರು ಹಾಕಿ ಕರಗಿಸಿಕೊಳ್ಳಿ. ಇದು ಸ್ವಲ್ಪ ದಪ್ಪವಾದ ನೀರಾಗಿರಲಿ. ನಂತರ ಜರಡಿ ಹಿಡಿದು ಪಾಕ ತೆಗೆದಿಟ್ಟುಕೊಳ್ಳಿ. ಈ ಪಾಕ ನಂತರ ಕುದಿಬರಲು ಬಿಡಿ. ಬೆಲ್ಲದ ಪಾಕ ರೆಡಿಯಾಗಬೇಕು.
ಈಗ ಈ ಪಾಕಕ್ಕೆ ಮೊದಲು ರುಬ್ಬಿದ್ದ ಏಲಕ್ಕಿ, ಎಳ್ಳು, ಕೊಬ್ಬರಿ ಪುಡಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಮಿಕ್ಸ ಆಗಬೇಕು. ಚೆನ್ನಾಗಿ ಗಂಟುಗಳಲ್ಲಿಲ್ಲದಂತೆ ಮಿಕ್ಸ್ ಮಾಡಬೇಕು. ಉರಿ ಸಣ್ಣಗೆ ಇಟ್ಟು ಮಿಕ್ಸ್ ಮಾಡಿ. ಹಿಟ್ಟು ಮಿಕ್ಸ್ ಮಾಡಿದ ಬಳಿಕ ಇದು ಹೂರ್ಣದಂತೆ ಗಟ್ಟಿಯಾಗಿ ಬರಬೇಕು. ಮೇಲೆ 2 ಸ್ಪೂನ್ ತುಪ್ಪ ಸವರಿ ಇಟ್ಟುಕೊಳ್ಳಿ. ಸುಮಾರು 6 ಗಂಟೆ ಈ ಹಿಟ್ಟನ್ನ ಹಾಗೆ ಇಡಿ. ಈಗ ಈ ಹಿಟ್ಟನ್ನು ಕಜ್ಜಾಯವಾಗಿ ಮಾಡಿಕೊಳ್ಳಿ.
ನಿಮಗೆ ಯಾವ ಗಾತ್ರ ಬೇಕೋ ಆ ಗಾತ್ರಕ್ಕೆ ತಟ್ಟಿಕೊಳ್ಳಬೇಕು. ಅನಂತರ ಎಣ್ಣೆಯಲ್ಲಿ ಬಿಟ್ಟು ಕರಿದುಕೊಂಡರೆ ನಿಮ್ಮ ಮುಂದೆ ಕಜ್ಜಾಯ ರೆಡಿಯಾಗುತ್ತದೆ, ನೀವು ಸಹ ಈ ರೀತಿ ಕಜ್ಜಾಯ ಮಾಡಿ ನೋಡಿ.



Click it and Unblock the Notifications