Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಟೊಮೆಟೊ ತೊಕ್ಕು ಮಾಡಿಟ್ಟರೆ ತಿಂಗಳವರೆಗೆ ಇಟ್ಟು ಬಳಸಬಹುದು:ಇದೊಂದು ಇದ್ದರೆ ಸಾಕು ಸಾರು ಕೂಡ ಬೇಕಾಗಿಲ್ಲ
ನೀವು ಟೊಮೆಟೊ ತೊಕ್ಕು ಮಾಡಿಟ್ಟರೆ ತಿಂಗಳಗಟ್ಟಲೆ ಇಟ್ಟು ಬಳಸಬಹುದು, ನಾವು ಉಪ್ಪಿನಕಾಯಿ ಬಳಸುವಂತೆ ಇದನ್ನು ಬಳಸಬಹುದು, ಆದರೆ ಉಪ್ಪಿನಕಾಯಿಗಿಂತ ಇನ್ನೂ ಬೆಸ್ಟ್ ಈ ಟೊಮೆಟೊ ತೊಕ್ಕು. ನೀವು ಉಪ್ಪಿನಕಾಯಿ ಮಾಡಿದರೆ ಊಟದ ರುಚಿ ಹೆಚ್ಚುತ್ತೆ, ಆದರೆ ತೊಕ್ಕು ಮಾಡಿಟ್ಟರೆ ಸಾರು ಏನೂ ಇಲ್ಲ ಎಂದಾಗ ಕೂಡ ಇದನ್ನು ಸೇವಿಸಬಹುದು. ಅಲ್ಲದೆ ಇದು ಮಾಡುವುದು ಕೂಡ ದೊಡ್ಡ ಶ್ರಮದ ಕೆಲಸವಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಟೊಮೆಟೊ: 4-5 ಹಣ್ಣಾದ ಕೆಂಪು ಟೊಮೆಟೊ ಬಳಸಿ ,ನಾಟಿ ಅಥವಾ ಜಾಮೂನು ಟೊಮೆಟೊ
ಬಳಸಬಹುದು
ಕಾಶ್ಮೀರಿ ಮೆಣಸಿನ ಪುಡಿ
1 ಚಮಚ ಎಣ್ಣೆ
1 ಚಮಚ ಶುಂಠಿ
ಅರಿಶಿಣ ಪುಡಿ
ರೋಸ್ಟ್ ಮಾಡಿದ ಮೆಂತೆ ಪುಡಿ
1/2 ಚಮಚ ಸಾಸಿವೆ ಪುಡಿ
ಸ್ವಲ್ಪ ಬೆಲ್ಲ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಸಾಸಿವೆಯೆಣ್ಣೆ
ಸ್ವಲ್ಪ ಸಾಸಿವೆ
ಇಂಗು
ಕರಿಬೇವು
ಮಾಡುವ ವಿಧಾನ
- ಒಂದು ಪ್ಯಾನ್ ಬಿಸಿ ಮಾಡಿ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಸಾಸಿವೆ ಹಾಕಿ, 1 ಚಮಚ ತುರಿದ ಅಥವಾ ಚಿಕ್ಕದಾಗಿ ಕತ್ತರಿಸಿದ ಶುಂಠಿ ಹಾಕಿ
- ನಂತರ ಟೊಮೆಟೊ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಸೌಟ್ನಿಂದ ಆಡಿಸಿ
- ನಂತರ ಉರಿ ಕಡಿಮೆ ಮಾಡಿ ಪ್ಯಾನ್ ಬಾಯಿ ಮುಚ್ಚಿ ಅದು ಮೆತ್ತಗಾಗುವವರೆಗೆ ಬೇಯಿಸಿ.
- ಈಗ ಸ್ವಲ್ಪ ಬೆಲ್ಲ, ಸ್ವಲ್ಪ ಅರಿಶಿಣ ಪುಡಿ, 2 ಚಮಚ ಖಾರದ ಪುಡಿ, 1/2 ಚಮಚ ಸಾಸಿವೆಪುಡಿ, ರೋಸ್ಟ್ ಮಾಡಿದ ಮೆಂತೆ ಪುಡ ಹಾಕಿ ಮಿಕ್ಸ್ ಮಾಡಿ.
- ನಂತರ ಟೇಸ್ಟ್ ಮಾಡಿ ಬೇಕಿದ್ದರೆ ಇನ್ನೂ ಸ್ವಲ್ಪ ಖಾರದ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ
ಈಗ ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
ನಂತರದ ಅದಕ್ಕೆ ಸ್ವಲ್ಪ ಸಾಸಿವೆ ಹಾಕಿ, ನಂತರ ಸ್ವಲ್ಪ ಇಂಗು, ಕರಿಬೇವು ಹಾಕಿ
ಅದನ್ನು ಟೊಮೆಟೊ ತೊಕ್ಕಿಗೆ ಸೇರಿಸಿ ಮಿಕ್ಸ್ ಮಾಡಿ ಗ್ಲಾಸ್ ಜಾರ್ನಲ್ಲಿ ತುಂಬಿ
ಫ್ರಿಡ್ಜ್ನಲ್ಲಿಟ್ಟರೆ ತಿಂಗಳವರೆಗೆ ಇಟ್ಟು ಬಳಸಬಹುದು.
ಟೊಮೆಟೊ ತೊಕ್ಕು ಮಾಡಿಟ್ಟರೆ ಸಾಕು ಬಾಯಿ ರುಚಿ ಮಾತ್ರವಲ್ಲ, ಸಾರು ಮಾಡಲು ಹೊತ್ತಿಲ್ಲ ಎಂದಾಗ ಇದನ್ನು ಹಾಕಿ ಚಪಾತಿ, ಇಡ್ಲಿ, ದೋಸೆ,ಅನ್ನ ಹೀಗೆ ಯಾವುದೇ ಆಹಾರದ ಜೊತೆ ಹಾಕಿ ತಿನ್ನಬಹುದು. ಹಾಗಾಗಿ ಟೊಮೆಟೊ ಎಲ್ಲಾ ಹಣ್ಣಾಗಿದೆ, ಸುಮ್ಮನೆ ಹಾಳು ಮಾಡುವುದೇಕೆ ಎಂದಾಗ ಅಥವಾ ಕೆಲವೊಂದುಸಮಯದಲ್ಲಿ ಕೆಜಿಗೆ 10 ರುಪಾಯಿಗಿಂತಲೂ ಕಡಿಮೆಗೆ ಸಿಗುತ್ತೆ, ಆವಾಗ ತಂದು ಈ ರೀತಿ ತೊಕ್ಕು ಮಾಡಿಟ್ಟರೆ ತುಂಬಾ ಸಮಯವಿಟ್ಟು ಬಳಸಬಹುದು.
ಇನ್ನು ಟೊಮೆಟೊ ತೊಕ್ಕು ಫ್ರಿಡ್ಜ್ನಿಂದ ಹೊರಗಡೆ ಇಡುವುದಾದರೂ 15 ದಿನ ಬಳಸಬಹುದು.



Click it and Unblock the Notifications