Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟದ ರುಚಿ ದುಪ್ಪಟ್ಟಾಗಿಸೋ ತಂಬುಳಿ..! ಇದು ಸ್ಪೆಷಲ್ ರುಚಿ ನೀಡೋದು ಖಚಿತ!
ಊಟದೊಂದಿಗೆ ಹಲವರು ತಿಳಿ ಸಾರು ಅಥವಾ ರಸಂ ಇರಬೇಕೆಂದು ಬಯಸುತ್ತಾರೆ. ಸಾಂಬಾರ್, ಪಲ್ಯ, ಮೊಸರು, ಚಟ್ನಿ ಇಲ್ಲದಿದ್ದರೂ ಪರವಾಗಿಲ್ಲ ಆದ್ರೆ ತಿಳಿಸಾರು ಇರಬೇಕೆಂದು ಬಯಸೋದು ನೋಡಬಹುದು. ಆದ್ರೆ ಮತ್ತೆ ಕೆಲವರು ತಂಬುಳಿ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರೋದು ಖಚಿತ. ಇನ್ನು ಹಲವರಿಗೆ ತಂಬುಳಿ ಅಂದರೆ ಇಷ್ಟವಾಗುತ್ತೆ.
ತಂಬುಳಿಯನ್ನು ಹಲವು ವಿಧವಾಗಿ ಮಾಡಬಹುದು. ಹಲವು ಬಗೆಯಲ್ಲಿ ಮಾಡುವ ತಂಬುಳಿಯು ಊಟದ ಜೊತೆಗಿದ್ದರೆ ಅದರ ರುಚಿಯೇ ಬೇರೆ. ಹಾಗೆ ದೇಹಕ್ಕೆ ತಂಪು ತರುವಂತಹ ಖಾದ್ಯ ಇದು. ಹಾಗಾದ್ರೆ ತಂಬುಳಿಯಲ್ಲಿ ರುಚಿ ರುಚಿಯಾಗಿ ಮಾಡುವಂತಹ ಖಾದ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗೋದು ಖಚಿತ.

ಹಾಗೆ ನಾವಿಂದು ಸುಲಭವಾಗಿ ಹಾಗೆ ರುಚಿಯಾಗಿ ಮಾಡುವಂತಹ ಟೊಮೆಟೋ ತಂಬುಳಿ ಎಲ್ಲರಿಗೂ ಇಷ್ಟವಾಗುತ್ತೆ. ಈ ಟೊಮೆಟೋ ತಂಬುಳಿಯು ಮಾಡೋಕೆ ಬಹಳ ಸುಲಭ ಹಾಗೆ ರುಚಿ ಕೂಡ ಅದ್ಭುತವಾಗಿರಲಿದೆ. ಇನ್ನು ಅನ್ನೊದೊಂದಿಗೆ ಈ ತಂಬುಳಿ ಒಂದಿದ್ದರೆ ಊಟದ ರುಚಿ ದುಪ್ಪಟ್ಟಾಗುತ್ತೆ.
ಹಾಗಾದ್ರೆ ನಾವಿಂದು ಈ ಟೊಮೆಟೋ ತಂಬುಳಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ತಂಬುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಟೊಮೆಟೋ
- ಎಣ್ಣೆ
- ಸಾಸಿವೆ
- ಜೀರಿಗೆ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಕರಿಬೇವು
- ಮೆಣಸಿನ ಪುಡಿ
- ಉಪ್ಪು
- ಮೊಸರು
- ಬೆಳ್ಳುಳ್ಳಿ
- ಒಣ ಮೆಣಸು
- ಇಂಗು
ಟೊಮೆಟೋ ತಂಬುಳಿ ಮಾಡುವ ವಿಧಾನವೇನು?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಅನಂತರ ಜಿರಿಗೆ, ಹಸಿ ಮೆಣಸನ್ನು ಮುರಿದು ಹಾಕಿ, 2 ಟೊಮೆಟೋವನ್ನು ಸಣ್ಣದಾಗಿ ಹೆಚ್ಚಿ ಹಾಕಿ 1 ನಿಮಿಷ ಪ್ರೈ ಮಾಡಿಕೊಳ್ಳಿ. ಈಗ ಕೊತ್ತಂಬರಿ, ಕರಿಬೇವು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಕಾಳು ಮೆಣಸಿನ ಪುಡಿ, ಹಾಗೆ ಕತ್ತರಿಸಿಕೊಂಡ ಕಾಯಿ ಇಲ್ಲವೆ ಕಾಯಿ ತುರಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
2 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್‌ಗೆ ಈ ಎಲ್ಲಾ ಪದಾರ್ಥಗಳ ಹಾಕಿಕೊಂಡು ಉಪ್ಪು, ಬೆಲ್ಲ, ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿ ಬದಿಗಿಟ್ಟುಕೊಳ್ಳಿ. ಈಗ ಒಂದು ಬೌಲ್‌ಗೆ ಅರ್ಧ ಕಪ್ ಮೊಸರು ತೆಗೆದುಕೊಂಡು ಅದನ್ನು ನೀರು ಮಜ್ಜಿಗೆ ಮಾಡಿಕೊಳ್ಳಿ. ಈಗ ರೆಡಿ ಮಾಡಿ ಇಟ್ಟು ಮಿಶ್ರಣವನ್ನು ಈ ಮಜ್ಜಿಗೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಹೆಚ್ಚಿಕೊಂಡಿರುವ ಬೆಳ್ಳುಳ್ಳಿ, ಕರಿಬೇವು ಹಾಕಿ ಒಂದು ಒಗ್ಗರಣೆ ಮಾಡಬೇಕು. ಇದಕ್ಕೆ ಒಣ ಮೆಣಸು, ಇಂಗು ಹಾಕಿ ಒಲೆ ಆಫ್ ಮಾಡಿಕೊಂಡು ಈ ಒಗ್ಗರಣೆಯನ್ನು ತಂಬುಳಿಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಲ್ಲಿ ಘಮ ಘಮ ಎನ್ನುವ ಟೊಮೆಟೋ ತಂಬುಳಿ ರೆಡಿಯಾಗುತ್ತೆ. ಅನ್ನದ ಜೊತೆ ಸವಿಯಲು ಇದು ಬಹಳ ರುಚಿ ನೀಡಲಿದೆ. ಊಟದೊಂದಿಗೆ ಸವಿಯಲು ಇದು ಬಹಳ ರುಚಿ ನೀಡಲಿದೆ.



Click it and Unblock the Notifications