Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಟ್ಟ ಟೊಮೆಟೋ ಹಣ್ಣಿನ ತಂಬುಳಿ ಮಾಡಿ ನೋಡಿ..! ನೀವೆಂದು ಟೇಸ್ಟ್ ಮಾಡಿರದ ರುಚಿ!
ಊಟದ ಜೊತೆಗೆ ಮಸಾಲೆ ಭರಿತ ಸಾಂಬಾರ್ ಮಾಡಿ ಸವಿಯಲು ಇಷ್ಟಪಡದಿದ್ದರೆ ಸಹಜವಾಗಿ ತಿಳಿ ಸಾರು, ಮಜ್ಜಿಗೆ ಹೀಗೆ ಯಾವುದಾದರು ಕಡಿಮೆ ಮಸಾಲೆಯುಕ್ತ ಖಾದ್ಯದೊಂದಿಗೆ ಊಟ ಮಾಡಲು ಮುಂದಾಗುತ್ತಿರಿ. ಹಾಗೆ ಅನ್ನದ ಜೊತೆಗೆ ರುಚಿ ರುಚಿಯ ಸಾರು ಇದ್ದರೆ ಊಟದ ರುಚಿಯು ದುಪ್ಪಟ್ಟಾಗುತ್ತೆ. ಹೀಗಾಗಿ ಕೆಲವರು ತಂಬುಳಿ, ತಿಳಿಸಾರು, ಮಜ್ಜಿಗೆ ಹುಳಿಯಂತಹ ಖಾದ್ಯ ಮಾಡುತ್ತಾರೆ, ಅದರಲ್ಲೂ ಬೇಸಿಗೆಯಲ್ಲಿ ಈ ಹುಳಿ ಆರೋಗ್ಯಕ್ಕೂ ಬಹಳ ಉತ್ತಮ ಎನ್ನಬಹುದು.
ಅದರಲ್ಲೂ ನೀವು ಸುಲಭವಾಗಿ ಮಾಡಬಹುದಾದ ತಂಬುಳಿ ಕುರಿತು ತಿಳಿದಿರುತ್ತೀರಿ. ಹಲವು ರೀತಿಯಲ್ಲಿ ಈ ತುಂಬುಳಿ ಮಾಡಬಹುದಾಗಿದೆ. ಅದರಲ್ಲೂ ಟೊಮೆಟೋ ಬಳಸಿಕೊಂಡು ಮಾಡುವ ತಂಬುಳಿ ಬಹಳ ರುಚಿಯಾಗಿರುತ್ತೆ. ಇದರ ರುಚಿ ಹೆಚ್ಚಾಗಲು ಟೊಮೆಟೋ ಅನ್ನು ಬೆಂಕಿಯಲ್ಲಿ ಸುಟ್ಟು ಈ ತಂಬುಳಿ ಮಾಡಲಾಗುತ್ತೆ. ಹೀಗಾಗಿ ಅದ್ಭುತ ರುಚಿಯಲ್ಲಿ ನಾವು ಸವಿಯಹುದು.

ಟೊಮೆಟೋ ತಂಬುಳಿ ಅದ್ಭುತ ರುಚಿ ನೀಡುವುದಲ್ಲದೆ, ಅನ್ನದ ಜೊತೆಗ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮಾಡೋದು ಕೂಡ ತುಂಬಾನೆ ಸುಲಭ. ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಇದನ್ನು ಮಾಡಬಹುದು. ಹಾಗಾದ್ರೆ ಟೊಮೆಟೋ ಅನ್ನು ಸುಟ್ಟು ಬಳಿಕ ತಂಬುಳಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಟೊಮೆಟೋ ತಂಬುಳಿ ಮಾಡಕು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ತಂಬುಳಿ ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ
- ಮಜ್ಜಿಗೆ
- ಹಸಿ ಮೆಣಸು
- ಉಪ್ಪು
- ತೆಂಗಿನಕಾಯಿ ತುರಿ
- ಕರಿಬೇವು
- ಜೀರಿಗೆ
- ಒಣ ಮೆಣಸು
- ಸಾಸಿವೆ
- ಕೊತ್ತಂಬರಿ ಸೊಪ್ಪು
- ಎಣ್ಣೆ
ಟೊಮೆಟೋ ತಂಬುಳಿ ಮಾಡುವ ವಿಧಾನ
ಮೊದಲು ಎರಡು ಅಥವಾ ಮೂರು ಟೊಮೆಟೋವನ್ನು ಗ್ಯಾಸ್ ಮೇಲೆ ಸುಟ್ಟಿಕೊಳ್ಳಬೇಕು, ಮೆಷ್ ಬಳಸಿ ಸುಡಬಹುದು, ಅಥವಾ ಚಿಮುಟ ಬಳಸಿಕೊಂಡು ಸುಡಬಹುದು. ನಂತರ ಅದನ್ನು ಒಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ. ನಂತರ ಎಲ್ಲಾ ಟೊಮೆಟೋ ಮೇಲಿನ ಸಿಪ್ಪೆಯನ್ನು ಕೂಡ ತೆಗೆದುಕೊಳ್ಳಿ. ಸಿಪ್ಪೆ ತೆಗೆದ ಬಳಿಕ ಸಣ್ಣದಾಗಿ ಹೆಚ್ಚಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಕತ್ತರಿಸಿ ಟೊಮೆಟೋ, ತೆಂಗಿನಕಾಯಿ ತುರಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು, ಹಾಗೆ ಸ್ವಲ್ಪವೇ ಸ್ವಲ್ಪ ಮಜ್ಜಿಗೆ ಹಾಕಿ ರುಬ್ಬಿಕೊಳ್ಳಬೇಕು. ಚಟ್ನಿಯಂತೆ ರುಬ್ಬಿಕೊಂಡ ಬಳಿಕ ಬೌಲ್‌ಗೆ ಹಾಕಿ ಬಳಿಕ ಇದಕ್ಕೆ ಒಂದು ಗ್ಲಾಸ್ ಮಜ್ಜಿಗೆ ಹಾಕಿ ಕಲಸಿಕೊಳ್ಳಿ. ಹಾಗೆ ಅರ್ಧ ಗ್ಲಾಸ್ ಜಾರ್ ತೊಳೆದ ನೀರು ಕೂಡ ಹಾಕಿಕೊಳ್ಳಿ.
ಈಗ ಒಲೆ ಮೇಲೆ ಸಣ್ಣ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು ಹಾಕಿಕೊಳ್ಳಿ. ನಂತರ ಇದಕ್ಕೆ ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಈ ಒಗ್ಗರಣೆಯನ್ನು ಬೌಲ್‌ನಲ್ಲಿರು ಟೊಮೆಟೋ ತಂಬುಳಿಗೆ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಈ ಟೊಮೆಟೋ ತಂಬುಳಿ ಸಿದ್ದವಾಗುತ್ತದೆ. ನೀವು ಕೂಡ ಮನೆಯಲ್ಲಿ ಊಟಕ್ಕೆ ಈ ತುಂಬುಳಿ ಮಾಡಿ. ಈ ರುಚಿ ಒಮ್ಮೆ ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ.



Click it and Unblock the Notifications