Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಲಿಗೆ ರುಚಿಗೆ ಖಾರ ಖಾರದ ಟೊಮೆಟೋ ಪಚಡಿ ಮಾಡಿ ನೋಡಿ..! 5 ನಿಮಿಷ ಸಾಕು!
ಊಟದ ಜೊತೆಗೆ ಕೆಲವರಿಗೆ ಸಿಹಿ ಇದ್ದರೆ ಚೆನ್ನಾ ಹಾಗೆ ಕೆಲವರಿಗೆ ಖಾರ ಖಾರವಾಗಿ ನಾಲಿಗೆ ರುಚಿಗೆ ಯಾವುದಾದರು ಖಾದ್ಯ ಇದ್ದರೆ ಊಟ ಚೆನ್ನಾಗಿ ಮಾಡುವ ಮನಸಾಗುತ್ತೆ. ಖಾರವಾಗಿ ಯಾವುದಾದರು ಚಟ್ನಿ, ಪಲ್ಯ, ಗೊಜ್ಜು, ಮೆಣಸಿನ ಖಾದ್ಯಗಳನ್ನು ಹಲವರು ಇಷ್ಟಪಡುತ್ತಾರೆ. ಏಕೆಂದರೆ ಅನ್ನದ ಜೊತೆಗೆ ಯಾವುದಾದರು ಖಾರ ಖಾರವಾದ ಚಟ್ನಿ ಇದ್ದರೆ ಆ ರುಚಿ ಅದ್ಭುತವಾಗಿರುತ್ತೆ.
ಹಾಗಾದ್ರೆ ಊಟದ ಜೊತೆಗೆ ಯಾವ ಖಾದ್ಯ ಅದ್ಭುತ ರುಚಿ ನೀಡುತ್ತೆ ಅಂದ್ರೆ ನಾವು ಒಂದಿಷ್ಟು ಖಾದ್ಯಗಳ ಹೆಸರು ಹೇಳಬಹುದು. ಆದ್ರೆ ಊಟ, ತಿಂಡಿ ಎಲ್ಲಾ ಸಮಯದಲ್ಲೂ ಬಳಕೆಯಾಗುವ ಹಾಗೆ ನಾಲಿಗೆ ರುಚಿ ಹೆಚ್ಚಿಸುವುದು ಕೆಲವೇ ಕೆಲವು ಖಾದ್ಯ ಮಾತ್ರ. ಹಾಗಾದ್ರೆ ಇಂತಹ ಖಾದ್ಯದಲ್ಲಿ ನಾವಿಂದು ಖಾರ ಖಾರವಾಗಿ ಮಾಡುವಂತಹ ಟೊಮೆಟೋ ಪಚಡಿ ಕುರಿತಂತೆ ತಿಳಿದುಕೊಳ್ಳೋಣ.

ನೀವು ಸೌತೆಕಾಯಿ, ಬೆಳ್ಳುಳ್ಳಿ ಪಚಡಿ ಮಾಡಿ ಸವಿದಿರುತ್ತೀರಿ. ಆದ್ರೆ ಎಂದಾದ್ರು ಟೊಮೆಟೋ ಪಚಡಿ ಮಾಡಿ ಸವಿದಿದ್ದೀರಾ? ಇದರ ರುಚಿ ನೀವು ಒಮ್ಮೆ ಸವಿದರೆ ಪದೇ ಪದೇ ಮಾಡಲು ಮುಂದಾಗುತ್ತೀರಿ. ಈ ಪಚಡಿ ಮಾಡೋದು ಕೂಡ ತುಂಬಾನೆ ಸುಲಭ. ಕೆಲವೇ ನಿಮಿಷದಲ್ಲಿ ನಾವು ಈ ಖಾರ ಖಾರದ ಪಚಡಿ ಮಾಡಬಹುದು. ಹಾಗಾದ್ರೆ ಇಂದು ನಾವು ಈ ಪಚಡಿ ಮಾಡುವ ವಿಧಾನಗಳ ತಿಳಿದುಕೊಳ್ಳೋಣ.
ಟೊಮೆಟೋ ಪಚಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸರಿಯಾದ ವಿಧಾನವೇನು ಎಂಬುದನ್ನ ನಾವಿಲ್ಲಿ ತಿಳಿಯೋಣ.
ಟೊಮೆಟೋ ಪಚಡಿ ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ- 7
- ಹಸಿ ಮೆಣಸು - 7
- ಈರುಳ್ಳಿ
- ಕರಿಬೇವು
- ಎಣ್ಣೆ
- ಜೀರಿಗೆ
- ಕರಿಬೇವು
- ಕೊತ್ತಂಬರಿ
- ಬೆಳ್ಳುಳ್ಳಿ
- ಉಪ್ಪು
ಟೊಮೆಟೋ ಪಚಡಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 7 ಹಸಿ ಮೆಣಸು ಹಾಕಿಕೊಳ್ಳಿ. ಹಾಗೆ ಇದಕ್ಕೆ ಕರಿಬೇವು, ಎಣ್ಣೆ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಜೀರಿಗೆ ಕೂಡ ಹಾಕಿ ಫ್ರೈ ಮಾಡಿ. 30 ಸೆಕೆಂಡ್ ಬಳಿಕ ಬೆಳ್ಳುಳ್ಳಿ ಹಾಗೂ 6 ಹಣ್ಣಾಗಿರುವ ಟೊಮೆಟೋವನ್ನು ಸಾಂಬಾರ್‌ಗೆ ಹೆಚ್ಚಿಕೊಳ್ಳುವಂತೆ ಹೆಚ್ಚಿ ಇದಕ್ಕೆ ಹಾಕಿಕೊಳ್ಳಿ.
ನಂತರ ಉಪ್ಪು ಸೇರಿಸಿಕೊಂಡು 3 ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. ಇದರ ಹಸಿ ವಾಸನೆ ಹೋಗುವವರಗೂ ಪ್ರೈ ಮಾಡಿ. ಮುಚ್ಚಳ ಮುಚ್ಚಿ 3 ನಿಮಿಷ ಬೇಯಿಸಿಕೊಳ್ಳಿ. ಈಗ ಮುಚ್ಚಳ ತೆಗೆದು ಒಲೆ ಆಫ್ ಮಾಡಿಕೊಂಡು ಮಸಾಲೆ ತಣ್ಣಗಾಗಲು ಬಿಡಿ. ಈ ಮಸಾಲೆ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎಲ್ಲಾ ಮಸಾಲೆ ಅದಕ್ಕೆ ಹಾಕಿ.
ಅನಂತರ ಉಪ್ಪು ಹಾಕಿ ತರಿ ತರಿಯಾಗಿ ಮೊದಲು ರುಬ್ಬಿಕೊಳ್ಳಿ. ಹಾಗೆ ಒಂದು ಸುತ್ತು ರುಬ್ಬಿಕೊಂಡ ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಗೂ ಈರುಳ್ಳಿಯನ್ನು ದೊಡ್ಡದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿ. ಈಗ ಮತ್ತೆ ಎರಡರಿಂದ ಮೂರು ಸುತ್ತು ರುಬ್ಬಿಕೊಳ್ಳಿ. ನೀವು ಖಾರ ಇಷ್ಟಪಡುತ್ತೀರಿ ಅಂದರೆ ಎರಡು ಒಣ ಮೆಣಸು ಕೂಡ ಇದಕ್ಕೆ ಹಾಕಿ ರುಬ್ಬಿಕೊಳ್ಳಬಹುದು.
ಇಷ್ಟಾದರೆ ನಿಮ್ಮ ಮುಂದೆ ಟೊಮೆಟೋ ಪಚಡಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ. ಊಟದ ಜೊತೆಗೆ ಈ ಖಾದ್ಯ ಸವಿಯಲು ಬಹಳ ರುಚಿ ನೀಡಲಿದೆ.



Click it and Unblock the Notifications