Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಕ್ಕರ್‌ನಲ್ಲಿ ಮಾಡಿ ಟೊಮೆಟೋ ರೈಸ್: ಬಹಳ ಸುಲಭದ ರುಚಿಯಾದ ಅಡುಗೆ!
ನೀವು ಮನೆಯಲ್ಲಿ ಭಾನುವಾರದ ದಿನ ಅಥವಾ ವಿಶೇಷವಾಗಿ ಮನೆಯಲ್ಲಿ ಯಾವುದಾದರು ಖಾದ್ಯ ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ವಿಶೇಷವಾಗಿ ರೈಸ್‌ನಿಂದ ಮಾಡುವ ಹಲವು ಖಾದ್ಯ ಮಾಡಿರಬಹುದು. ರೈಸ್‌ನಿಂದ ವಿಶೇಷವಾದ ಖಾದ್ಯಗಳ ರೆಡಿ ಮಾಡಿ ಸವಿಯಬಹುದು. ಹಾಗೆ ಸುಲಭವಾಗಿ ಮಾಡಿ ಮುಗಿಸಬಹುದು. ಹೀಗಾಗಿ ನಾವಿಂದು ರೈಸ್‌ನಿಂದ ಮಾಡುವ ಹೊಸ ಖಾದ್ಯ ಕುರಿತಾಗಿ ಹೇಳಲಿದ್ದೇವೆ.
ಹೌದು ರೈಸ್‌ನಿಂದ ಮಾಡುವಂತಹ ರುಚಿ ರುಚಿಯ ಟೊಮೆಟೋ ರೈಸ್ ಕುರಿತು ತಿಳಿಯೋಣ. ನೀವು ಕೂಡ ಟೊಮೆಟೋ ಬಾತ್, ಟೊಮೆಟೋ ಬಿರಿಯಾನಿ ಅಂತಹ ಖಾದ್ಯವನ್ನು ಮಾಡಿ ಸವಿದಿರುತ್ತೀರಿ. ಆದ್ರೆ ಇಂದು ಹೊಸ ರೀತಿಯ ಟೊಮೆಟೋ ರೈಸ್ ಮಾಡುವ ಕುರಿತು ತಿಳಿಯೋಣ. ಈ ರೈಸ್ ಅನ್ನು ಸುಲಭವಾಗಿ ಹಾಗೆ ಕಡಿಮೆ ವಸ್ತುಗಳ ಮಾಡಿ ಮುಗಿಸಬಹುದು.

ಹಾಗಾದ್ರೆ ರುಚಿ ರುಚಿಯ ಟೊಮೆಟೋ ರೈಸ್ ಮಾಡಿ ಸವಿಯುವ ಕುರಿತು ತಿಳಿಯೋಣ. ಈ ಟೊಮೆಟೋ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಟೊಮೆಟೋ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ಬೆಳ್ಳುಳ್ಳಿ
- ಶುಂಠಿ
- ಟೊಮೆಟೊ
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ಹಸಿ ಮೆಣಸಿನಕಾಯಿ
- ಕರಿಬೇವು
- ಲವಂಗ
- ಏಲಕ್ಕಿ
- ದಾಲ್ಚಿನ್ನಿ
- ಕಲ್ಲು ಮೊಗ್ಗು
- ಜೀರಿಗೆ
- ಅರಿಶಿನ ಪುಡಿ
- ಖಾರದ ಪುಡಿ
- ಬಿರಿಯಾನಿ ಪುಡಿ
- ಮೊಸರು
- ಕಸುರಿ ಮೇಥಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಟೊಮೆಟೋ ರೈಸ್ ಮಾಡುವುದು ಹೇಗೆ
ಮೊದಲು ಅಳತೆ ಕಪ್‌ನಲ್ಲಿ ಒಂದು ಕಪ್ ಅಕ್ಕಿಯನ್ನು ಬೌಲ್‌ಗೆ ಹಾಕಿ ತೊಳೆದು ನೆನೆಸಿಡಿ.
ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಟೊಮೆಟೋ, ಈರುಳ್ಳಿ, ಕೊತ್ತಂಬರಿ, ಪುದಿನ, ಹಸಿ ಮೆಣಸು ಹಾಕಿಕೊಂಡು ನೀರು ಹಾಕಿ ರುಬ್ಬಿಕೊಳ್ಳಿ. ಅರ್ಧ ಜಾರ್ ಮಸಾಲೆ ಮಾಡಿಕೊಳ್ಳಿ. ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಚಕ್ಕೆ ಎಲೆ ಲವಂಗ, ಚಕ್ರ ಮೊಗ್ಗು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ.
ಎಣ್ಣೆ ಸ್ವಲ್ಪ ಹೆಚ್ಚಾಗಿ ಬಳಸಿಕೊಳ್ಳಿ. ಈಗ ಜೀರಿಗೆ ಹಾಕಿಕೊಂಡು ನಂತರ ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ರುಬ್ಬಿಕೊಂಡಿದ್ದ ಮಸಾಲೆಯನ್ನು, ಉಪ್ಪು ಇದಕ್ಕೆ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಅರಶಿಣ, ಖಾರದಪುಡಿ, ಬಿರಿಯಾನಿ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಗ್ರೇವಿ ದಪ್ಪವಾಗಿ ಬಂದಾಗ ಇದಕ್ಕೆ ಕಾಲು ಕಪ್ ಮೊಸರು ಸಹ ಹಾಕಿಕೊಳ್ಳಿ. ಬಳಿಕ ಒಂದು ಮೊಸರು ಹೆಚ್ಚಿಕೊಂಡು ಅದನ್ನು ಕೂಡ ಹಾಕಿಕೊಳ್ಳಿ. ಈಗ ಯಾವ ಅಳತೆಯಲ್ಲಿ ಅಕ್ಕಿ ತೆಗೆದುಕೊಂಡಿದ್ದೀರೋ ಆ ಅಳತೆಯಲ್ಲಿ ಎರಡರಷ್ಟು ನೀರು ಹಾಕಿಕೊಳ್ಳಿ. ಹಾಗೆ ಕುದಿಬರಲು ಬಿಡಿ. ಈ ನೀರು ಕುದಿಬರಲು ಆರಂಭಿಸಿದಾಗ ನೆನೆಸಿಟ್ಟಿದ್ದ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ನಂತರ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಟೊಮೆಟೋ ರೈಸ್ ರೆಡಿಯಾಗಿರಲಿದೆ. ನೀವು ಕೂಡ ಈ ರೈಸ್ ಅನ್ನು ಬೆಳಗ್ಗೆ ತಿಂಡಿಗೆ ಹಾಗೆ ಊಟಕ್ಕೆ ಮಾಡಬಹುದು. ಇದರ ರುಚಿ ಒಮ್ಮೆ ಸವಿದರೆ ನೀವು ಯಾವಾಗಲು ಇದನ್ನೇ ಮಾಡಿ ಸವಿಯಲು ಮುಂದಾಗುತ್ತೀರಿ. ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಸವಿದಿರುವಂತಹ ರುಚಿಯಲ್ಲೇ ಮನೆಯಲ್ಲಿ ಮಾಡಬಹುದು.



Click it and Unblock the Notifications