ದೋಸೆ-ಇಡ್ಲಿ ಸವಿಯೋಕೆ ಟೊಮೆಟೋ ಕುರ್ಮಾ! ಹೋಟೆಲ್‌ನಲ್ಲೂ ಇದೇ ರುಚಿ!

Posted By:

ನೀವು ಮನೆಯಲ್ಲಿ ತಿಂಡಿಗೆ ಇಡ್ಲಿ ದೋಸೆ ಮಾಡಿ ಸವಿಯೋದು ಕಾಮನ್. ಆದ್ರೆ ಇಡ್ಲಿ, ದೋಸೆ ಮಾಡಿ ಸವಿಯುವುದು ಎಲ್ಲರ ಮನೆಯ ನಿತ್ಯದ ಕೆಲಸವೂ ಆಗಿರಬಹುದು. ಹಾಗೆ ದೋಸೆ, ಇಡ್ಲಿ ಮಾಡಿದಾಗ ಅದನ್ನು ಸವಿಯಲು ಚಟ್ನಿ, ಸಾಂಬಾರ್ ಅಥವಾ ಪಲ್ಯ ಯಾವುದಾದರೊಂದು ಖಾದ್ಯ ಇರಲೇಬೇಕು. ಹೀಗಿದ್ದಾಗ ಮಾತ್ರವೇ ರುಚಿ ಹೆಚ್ಚಾಗುತ್ತೆ. ಹಾಗೆ ಎಲ್ಲರ ಮನೆಯಲ್ಲೂ ಚಟ್ನಿ, ಸಾಂಬಾರ್ ಮಾಡಿಯೇ ಮಾಡುತ್ತಾರೆ.

ಆದ್ರೆ ಹೋಟೆಲ್‌ನಲ್ಲಿ ನೀವು ಇಡ್ಲಿ ದೋಸೆ ಕೇಳಿ ಪಡೆದಾಗ ಅಲ್ಲಿ ಚಟ್ನಿಯೊಂದಿಗೆ ಸಾಂಬಾರ್ ಅಥವಾ ಕುರ್ಮಾ ನೀಡುವುದು ನೋಡಿರಬಹುದು. ಈ ರುಚಿ ಇದ್ದರೆ ಸಾಕು ನೀವು ಚಟ್ನಿ ಬಳಸದೆಯೇ ಇಡ್ಲಿ, ದೋಸೆ ಸವಿಯುತ್ತೀರಿ. ಇಡ್ಲಿ, ದೋಸೆಗೆ ಇದಕ್ಕಿಂತ ರುಚಿಕರ ಸೈಡ್ಸ್ ಮತ್ತೊಂದಿಲ್ಲ. ಹಾಗಾದ್ರೆ ಈ ದೋಸೆಗೆ ನೀಡುವ ಕುರ್ಮಾ ಹೇಗೆ ಮಾಡುತ್ತಾರೆ ಗೊತ್ತಾ?

Tomato Kurma Recipe For Idli And Dosa At Home In Kannada

ದೋಸೆ ಸವಿಯಲು ನೀಡುವ ಟೊಮೆಟೋ ಕುರ್ಮಾದ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ. ಮನೆಯಲ್ಲಿ ದೋಸೆ, ಇಡ್ಲಿ ಮಾಡಿದ ದಿನದಂದು ಚಟ್ನಿ ಮಾಡುವ ಬದಲಾಗಿ ಈ ಟೊಮೆಟೋ ಕುರ್ಮಾ ಮಾಡಿ ಸವಿಯಲು ನೀಡಿದರೆ ಎಲ್ಲರು ಬಾಯಿ ಚಪ್ಪರಿಸಿ ಸವಿಯೋದು ಖಚಿತ.

ಹಾಗಾದ್ರೆ ಈ ಟೊಮೆಟೋ ಕುರ್ಮಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಹೋಟೆಲ್ ಶೈಲಿಯ ಟೊಮೆಟೋ ಕುರ್ಮಾ ಮಾಡಲು ಬೇಕಾಗುವ ವಸ್ತುಗಳು

  • ಟೊಮೆಟೋ
  • ಗೋಡಂಬಿ
  • ತೆಂಗಿನಕಾಯಿ ತುರಿ
  • ಹಸಿ ಮೆಣಸಿನಕಾಯಿ
  • ಚಕ್ಕೆ
  • ಏಲಕ್ಕಿ - 1
  • ಲವಂಗ - 3
  • ಗಸಗಸೆ - 1 ಟೀಚಮಚ
  • ಸೋಂಪು ಕಾಳು
  • ಎಣ್ಣೆ
  • ಈರುಳ್ಳಿ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ಕೊತ್ತಂಬರಿ ಸೊಪ್ಪು
  • ಪುದೀನ
  • ಮೆಣಸಿನ ಪುಡಿ
  • ಧನಿಯಾ ಪುಡಿ
  • ಗರಂ ಮಸಾಲ
  • ಉಪ್ಪು


ಹೋಟೆಲ್ ಶೈಲಿಯ ಟೊಮೆಟೋ ಕುರ್ಮಾ ಮಾಡುವ ವಿಧಾನವಿದು

ಮೊದಲು ಒಂದು ಮಿಕ್ಸರ್ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಗೋಡಂಬಿ, ಹಸಿ ಮೆಣಸು, ಚಕ್ಕೆ, ಏಲಕ್ಕಿ, ಲವಂಗ, ಗಸೆಗಸೆ, ಸೋಂಪು ಕಾಳು, ಕತ್ತರಿಸಿದ ಟೊಮೆಟೋವನ್ನು ಹಾಕಿಕೊಳ್ಳಿ ಹಾಗೆ ಸ್ವಲ್ಪ ನೀರು ಸಹ ಹಾಕಿಕೊಂಡು ರುಬ್ಬಿಕೊಳ್ಳಿ.

ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಸಹ ಹಾಕಿಕೊಂಡು ಗೋಲ್ಡನ್ ಬ್ರೌನ್ ಕಲರ್‌ಗೆ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿ ಮಿಕ್ಸ್ ಮಾಡಿ.

ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು, ಪುದಿನ ಸೇರಿಸಿ ಚೆನ್ನಾಗಿ ಹುರಿಯಿರಿ. ಈಗ ಮಿಕ್ಸಿಯಲ್ಲಿ ಮೊದಲು ರುಬ್ಬಿಕೊಂಡಿದ್ದ ಮಸಾಲೆಗಳನ್ನು ಈ ಕುಕ್ಕರ್ ಗೆ ಹಾಕಿ. ಹಾಗೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು, ನಿಮಗೆ ಎಷ್ಟು ನೀರು ಬೇಕೋ ಅಷ್ಟು ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ.

ಈಗ ಕುಕ್ಕರ್ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ. ನಂತರ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯಾದ ಟೊಮೆಟೋ ಕುರ್ಮಾ ಸಿದ್ದವಾಗುತ್ತೆ. ಇದು ದೋಸೆ ಹಾಗೂ ಇಡ್ಲಿಯೊಂದಿಗೆ ಅದ್ಭುತ ರುಚಿ ನೀಡಲಿದೆ.

[ of 5 - Users]
Story first published: Friday, November 7, 2025, 11:37 [IST]
X
Desktop Bottom Promotion