Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ತಿಂಗಳು ಇಟ್ಟು ಯಾವುದೇ ತಿಂಡಿಗೆ ಸವಿಯಿರಿ ಈ ಟೊಮೆಟೋ ಗೊಜ್ಜು..! ಮಾಡೋದು ಹೇಗೆ?
ಬೆಳಗ್ಗೆ ತಿಂಡಿಗೆ ಚಪಾತಿ, ದೋಸೆ, ಇಡ್ಲಿ ಹೀಗೆ ಹಲವು ಬಗೆಯ ತಿಂಡಿಯನ್ನು ನೀವು ಮಾಡಿ ಸವಿದಿರುತ್ತೀರಿ. ಹಾಗೆ ಎಲ್ಲಾ ತಿಂಡಿಯನ್ನು ಸವಿಯಲು ಚಟ್ನಿ, ಪಲ್ಯ ಹೀಗೆ ಒಂದಲ್ಲಾ ಒಂದು ಖಾದ್ಯ ಮಾಡಿಯೇ ಮಾಡುತ್ತೀರಿ. ಹೀಗಾಗಿ ತಿಂಡಿಯ ಸಮಯದಲ್ಲಿ ನೀವು ಅದ್ಭುತ ರುಚಿಯಲ್ಲಿ ಚಟ್ನಿ ಮಾಡಿ ಸವಿಯುವುದು ನೋಡಬಹುದು. ಅದರಲ್ಲೂ ವಿಶೇಷ ರುಚಿಯ ಕೆಲವು ಚಟ್ನಿಯನ್ನು ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ.
ಅದರಲ್ಲೂ ನಾವು ಟೊಮೆಟೋದಿಂದ ಮಾಡುವ ಗೊಜ್ಜು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನೋಡೋಣ. ಈ ಟೊಮೆಟೋ ಗೊಜ್ಜು ಎಲ್ಲಾ ರೀತಿಯ ತಿಂಡಿಗೂ ಅದ್ಭುತವಾದ ರುಚಿ ನೀಡಲಿದೆ. ಈ ಗೊಜ್ಜು ಊಟದ ಜೊತೆಗೂ ಅದ್ಭುತವಾದ ರುಚಿಗೆ ಕಾರಣವಾಗಲಿದೆ, ಹಾಗೆ ಎಲ್ಲಾ ತಿಂಡಿಗಳ ಜೊತೆಗೂ ಸವಿಯಲು ಇದು ಬಹಳ ರುಚಿ ನೀಡಲಿದೆ.

ಹಾಗಾದ್ರೆ ಈ ಟೊಮೆಟೋ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಈ ಟೊಮೆಟೋ ಗೊಜ್ಜು ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಟೊಮೆಟೋ - 10
- ಬ್ಯಾಡಗಿ ಮೆಣಸಿನಕಾಯಿ
- ಒಣ ಮೆಣಸಿನಕಾಯಿ
- ಮೆಂತ್ಯ
- ಜೀರಿಗೆ
- ಸಾಸಿವೆ
- ಇಂಗು
- ರುಚಿಗೆ ತಕ್ಕಷ್ಟು ಉಪ್ಪು
- ಅರಿಶಿನ ಪುಡಿ
- ಎಣ್ಣೆ
- ಉಪ್ಪು
- ಕರಿಬೇವು
ಟೊಮೆಟೋ ಗೊಜ್ಜು ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆಯಲ್ಲಿ ನೀರು ಹಾಕಿ ಅದನ್ನು ಕುದಿಯಲು ಬಿಡಿ. ನಂತರ ಕುದಿಯುತ್ತಿರುವ ನೀರಿಗೆ ಬ್ಯಾಡಗಿ ಮೆಣಸು ಹಾಕಿ 15ರಿಂದ 20 ಮೆಣಸು ಹಾಕಿ. ಹಾಗೆ ಒಣ ಮೆಣಸು 10 ಇದಕ್ಕೆ ಹಾಕಿಕೊಳ್ಳಿ. ನೀರಿನಲ್ಲಿ ಚೆನ್ನಾಗಿ ಮುಳುಗಬೇಕು. 5 ನಿಮಿಷ ಚೆನ್ನಾಗಿ ಬಿಸಿ ನೀರಿನಲ್ಲಿ ಕುದಿಸಿದ ಬಳಿಕ ತೆಗೆದು ಬದಿಗೆ ಇಟ್ಟುಕೊಳ್ಳಿ.
ಈಗ 10 ಟೊಮೆಟೋವನ್ನು ಸಾಂಬಾರ್‌ಗೆ ಹೆಚ್ಚಿಕೊಳ್ಳುವಂತೆ ಭಾಗ ಮಾಡಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಟೊಮೆಟೋಗಳ ಹಾಕಿಕೊಂಡು ನೀರು ಹಾಕದೆ ರುಬ್ಬಿಕೊಳ್ಳಿ. ಟೊಮೆಟೋ ರುಬ್ಬಿದ ಬಳಿಕ ಇದಕ್ಕೆ ನೀರಿನಿಂದ ತೆಗೆದ ಒಣ ಮೆಣಸುಗಳನ್ನು ಕೂಡ ಇದಕ್ಕೆ ಹಾಕಿ ಮತ್ತೆ ರುಬ್ಬಿಕೊಳ್ಳಿ. ಎಷ್ಟು ನುಣ್ಣಗೆ ರುಬ್ಬಿಕೊಳ್ಳಲು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿ ಒಂದು ಬಾಣಲೆಗೆ ಹಾಕಿಟ್ಟುಕೊಳ್ಳಿ.
ಈ ಬಾಣಲೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಅರಶಿಣ ಪುಡಿ, ಉಪ್ಪು ಸೇರಿಸಿ ಉರಿ ಹೆಚ್ಚು ಇಟ್ಟು ಕುದಿಸಿಕೊಳ್ಳಬೇಕು. ಕುದಿಯಲು ಆರಂಭಿಸಿದಾಗ ಮುಚ್ಚಳ ಮುಚ್ಚಿ 3 ನಿಮಿಷ ಬೇಯಲು ಬಿಡಿ. ಆಗಾಗ ಕೈ ಆಡಿಸುತ್ತಾ ಇರಿ. ಇದು ದಪ್ಪವಾದಾಗ ಉರಿ ಸಣ್ಣದಾಗಿ ಮಾಡಿ 5 ನಿಮಿಷ ಬಿಡಿ, ಇಟ್ಟು 15 ನಿಮಿಷದಲ್ಲಿ ಇದು ಗಟ್ಟಿಯಾಗುತ್ತದೆ. ನೀರು ಇಂಗಿ ಖಾರದಂತೆ ಬರುತ್ತದೆ, ಈಗ ಒಲೆ ಆಫ್ ಮಾಡಿಕೊಳ್ಳಿ.
ನಂತರ ಒಂದು ಬಾಣಲೆ ಇಟ್ಟು ಅದಕ್ಕೆ ಮೆಂತ್ಯ, ಜೀರಿಗೆ, ಸಾಸಿವೆ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಕೂಡ ಮಿಕ್ಸಿ ಜಾರ್‌ಗೆ ಹಾಕಿ ಹುಡಿ ಮಾಡಿಕೊಂಡು ಒಲೆ ಮೇಲೆ ಇರುವ ಟೊಮೆಟೋ ಪೇಸ್ಟ್‌ಗೆ ಹಾಕಿ ಮತ್ತೆ ಒಲೆ ಹತ್ತಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಮತ್ತೆ ಆಫ್ ಮಾಡಿ. ಈಗ ಮತ್ತೊಂದು ಬಾಣಲೆಗೆ ಹೆಚ್ಚು ಎಣ್ಣೆ ಹಾಕಿ ಇದಕ್ಕೆ ಸಾಸಿವೆ, ಕರಿಬೇವು, ಇಂಗು ಹಾಕಿ ಈ ಒಗ್ಗರಣೆಯನ್ನು ಟೊಮೆಟೋ ಗೊಜ್ಜಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಟೊಮೆಟೋ ಗೊಜ್ಜು ರೆಡಿಯಾಗುತ್ತದೆ. ಇದನ್ನು ಒಂದು ತಿಂಗಳ ಕಾಲ ಇಟ್ಟು ಸವಿಯಬಹುದು. ನೀವು ಕೂಡ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications