Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಟೊಮೆಟೊ-ಬೆಳ್ಳುಳ್ಳಿ ರಸಂ ಘಂ ಎಂಬ ಸುವಾಸನೆ ಜೊತೆಗೆ ಸೂಪರ್ ರುಚಿಯಾಗಿರುತ್ತದೆ
Recipes
oi-Reena TK
Posted By: Reena TK
ಈ ಟೊಮೆಟೊ ರಸಂನ ಘಂ ಎನ್ನುವ ಸುವಾಸನೆಯೇ ನಿಮ್ಮ ಹಸಿವು ಹೆಚ್ಚಿಸುತ್ತದೆ, ಇನ್ನು ಸ್ವಲ್ಪ ರುಚಿ ನೋಡಿದರೆ ಆಹಾ! ಎಂದು ಅನ್ನ ತಟ್ಟೆಯಲ್ಲಿ ಹಾಕಿರುವ ಅನ್ನ ಮುಳುಗುವಷ್ಟು ಈ ಟೊಮೆಟೊ ರಸಂ ಹಾಕಿಕೊಳ್ಳುತ್ತೀರಿ, ಅಷ್ಟೊಂದು ರುಚಿಯಾಗಿರುತ್ತದೆ. ಈ ಟೊಮೆಟೊ ಬೆಳ್ಳುಳ್ಳು ರಸಂ ಮಾಡಲು ರಸಂ ಪೌಡರ್ ಸೀಕ್ರೆಟ್ ಕೂಡ ನೀಡಿದ್ದೇವೆ, ಬನ್ನಿ ಟೊಮೆಟೊ ಬೆಳ್ಳುಳ್ಳಿ ರಸಂ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
3-4 ಟೊಮೆಟೊ
1/2 ಚಮಚ ಅರಿಶೀಣ ಪುಡಿ
2 ಬೆಳ್ಳುಳ್ಳಿ (10-15 ಎಸಳು)
ರುಚಿಗೆ ತಕ್ಕ ಉಪ್ಪು
2-3 ಕಪ್ ನೀರು
1/2 ಚಮಚ ಹುಣಸೆ ರಸ
ಚಿಕ್ಕ ತುಂಡು ಬೆಲ್ಲ
ಒಗ್ಗರಣೆಗೆ
ಎಣ್ಣೆ 1 ಚಮಚ
ಸ್ವಲ್ಪ ಸಾಸಿವೆ
1/4 ಚಮಚ ಜೀರಿಗೆ
2 ಒಣ ಮೆಣಸು (ಖಾರ ಕಡಿಮೆ ಇರುವ ಮೆಣಸು ಬಳಸಿ)
ಸ್ವಲ್ಪ ಕರಿಬೇವು
ಚಿಟಿಕೆಯಷ್ಟು ಇಂಗು
ರಸಂ ಪೌಡರ್‌ಗೆ
1/4 ಚಮಚ ಸೋಂಪು
8-10 ಕಾಳು ಮೆಣಸು (ಖಾರ ಕಮ್ಮಿ ಬೇಕೆಂದರೆ ಕಡಿಮೆ ಬಳಸಬಹುದು)
1/2 ಚಮಚ ಜೀರಿಗೆ
ಒಂದು ಒಣ ಮೆಣಸು
ಈ ಸಾಮಗ್ರಿ ಹುರಿದು ಪೌಡರ್ ಮಾಡಿ.
ಮಾಡುವ ವಿಧಾನ
- ಎಣ್ಣೆ ಕಾಯಿಸಿ, ಎಣ್ಣೆ ಬಿಸಿಯಾದಾಗ ಇಂಗು ಹಾಕಿ, ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ ನಂತರ ಕರಿಬೇವು ಹಾಕಿ, ಒಣ ಮೆಣಸು ಮುರಿದು ಹಾಕಿ, ಬಳಿಕ ಬೆಳ್ಳುಳ್ಳಿ ಹಾಕಿ, ಬೆಳ್ಳುಳ್ಳಿ ಫ್ರೈಯಾದಗ ಅದರಿಂದ ಸುವಾಸನೆ ಬರುತ್ತದೆ, ಆವಾಗ ಟೊಮೆಟೊ ಹಾಕಿ
- ಟೊಮೆಟೊ ಮೆತ್ತಗಾದ ಮೇಲೆ, ಅರಿಶಿಣ ಪುಡಿ, ಹುಣಸೆ ರಸ, ರುಚಿಗೆ ತಕ್ಕ ಉಪ್ಪು ಸೇರಿಸಿ
- ಬೆಲ್ಲ ಸೇರಿಸಿ, ರಸಂ ಪುಡಿ ಹಾಕಿ ಮಿಕ್ಸ್ ಮಾಡಿ
- ನಂತರ ನಿಮಗೆ ರಸಂ ಎಷ್ಟು ಬೇಕೋ ಅಷ್ಟು ನೀರು ಸೇರಿಸಿ (3-4 ಜನರಿಗೆ 2 ಕಪ್ ನೀರು ಹಾಕಿದರೆ ಸಾಕು)
- ಈಗ ಟೊಮೆಟೊ ರಸಂ 5-7 ನಿಮಿಷ ಕುದಿಸಿ, ಉಪ್ಪು ಖಾರ ಎಲ್ಲಾ ಸರಿಯಾಗಿ ಇದೆಯೇ ಎಂದು ನೋಡಿ
- ನಂತರ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ ಉರಿಯಿಂದ ಇಳಿಸಿದರೆ ಟೊಮೆಟೊ-ಬೆಳ್ಳುಳ್ಳಿ ರಸಂ ರೆಡಿ.
ಇತರ ಸಲಹೆ:
- ನೀವು ಬೇಕಿದ್ದರೆ ಈರುಳ್ಳಿ ಸೇರಿಸಬಹುದು, ಆದರೆ ಈರುಳ್ಳಿ ಸೇರಿಸದೆ ಈ ರಸಂ ಮಾಡಿದರೆ 2-3 ದಿನ ಇಡಬಹುದು.
- ಬೆಳ್ಳುಳ್ಳಿ-ಟೊಮೆಟೊ, ಕಾಳು ಮೆಣಸು ಇತರ ಮಸಾಲೆ ಸಾಮಗ್ರಿ ಇವೆಲ್ಲಾ ಗಂಟಲು ಕೆರೆತ, ಕೆಮ್ಮು ಈ ಬಗೆಯ ಸಮಸ್ಯೆ ಇದ್ದರೆ ಹೋಗಲಾಡಿಸಲು ಸಹಕಾರಿ.
- ಕೆಲ ದೇವಾಲಯದಲ್ಲಿ ನೀಡುವ ರಸಂ ಕೈ ತೊಳೆದರೂ ಅದರ ಘಂ ಎನ್ನುವ ಸುವಾಸನೆ ಹೋಗುವುದಿಲ್ಲ, ಅದರಂತೆ ಈ ರಸಂ ತಿಂದ ಮೇಲೆ ಕೈ ತೊಳೆದರೂ ಅದರ ಸುವಾಸನೆ ಹಾಗೆಯೇ ಇರುತ್ತದೆ, ಅಷ್ಟೊಂದು ಚೆನ್ನಾಗಿ ಇರುತ್ತದೆ.
- ನಿಮಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕೆಂದರೆ ಸಾಮಗ್ರಿ ಪ್ರಮಾಣ ಹೆಚ್ಚಿಸಿದರೆ ಸಾಕು, ಎಷ್ಟು ಜನರಿಗೆ ಬೇಕಾದರೂ ಈ ರಸಂ ರೆಡಿ ಮಾಡಬಹುದು.
- ನೀವು ಹಬ್ಬದ ಅಡುಗೆ ಮಾಡಿದಾಗ ಸ್ವಲ್ಪ ಇಂಗು ಕೂಡ ಸೇರಿಸಿರುವುದರಿಂದ ಅಜೀರ್ಣ ಈ ಬಗೆಯ ಸಮಸ್ಯೆಯೂ ಇರಲ್ಲ.
Comments
[ of 5 - Users]
Story first published: Tuesday, December 3, 2024, 11:38 [IST]
Other articles published on Dec 3, 2024



Click it and Unblock the Notifications