Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಿಷದಲ್ಲಿ ಮಾಡಿ ಟೊಮೆಟೋ ಸಂಡಿಗೆ: 3 ಟೊಮೆಟೋ ಸಾಕಾಗುತ್ತೆ..!
ನೀವು ಊಟದ ಜೊತೆಗೆ ಉಪ್ಪಿನಕಾಯಿ, ಪಲ್ಯ, ಚಟ್ನಿ, ಹೀಗೆ ಯಾವುದಾದರು ಸೈಡ್ ಡಿಶ್ ಸವಿಯಲು ಮುಂದಾಗುತ್ತೀರಿ. ಅದೇ ರೀತಿ ಹಪ್ಪಳ, ಸಂಡಿಗೆ ಕೂಡ ಸವಿಯಲು ಇಷ್ಟಪಡುತ್ತೀರಿ. ಮಾರುಕಟ್ಟೆಯಲ್ಲಿ ಹಲವು ಬಗೆಯ ಸಂಡಿಗೆ ಹಪ್ಪಳಗಳು ಈಗ ಸಿಗುತ್ತವೆ. ಊಟದ ಸಮಯಕ್ಕೆ ಸರಿಯಾಗಿ ಎಣ್ಣೆಯಲ್ಲಿ ಕರಿದರೆ ಊಟದ ರುಚಿ ಹೆಚ್ಚಾಗುವಂತೆ ಮಾಡುತ್ತೆ.
ಮನೆಯಲ್ಲಿ ಕೂಡ ನಾವು ಹಲವು ಬಗೆಯಲ್ಲಿ ಸಂಡಿಗೆ ಮಾಡಿಕೊಳ್ಳಬಹುದು. ಅಕ್ಕಿಯಿಂದ ನಿಮಿಷದಲ್ಲಿ ಸಂಡಿಗೆ ಮಾಡುವುದು ನಿಮಗೆಲ್ಲಾ ತಿಳಿದಿರುತ್ತೆ. ಬೇಸಿಗೆಯಲ್ಲಿ ಈ ಸಂಡಿಗೆ ಮಾಡಿ ಬಿಸಿಲಿನಲ್ಲಿ ಒಣಗಿಸಿ ಇಡೀ ಮಳೆಗಾಲದಲ್ಲಿ ಬಳಸುವುದು ನೋಡಬಹುದು. ಮನೆಯ ಮುಂದೆ, ಟೆರೆಸ್ ಮೇಲೆ ಎಲ್ಲಿ ನೋಡಿದರು ಈ ಸಂಡಿಗೆಯನ್ನು ಒಣಗಿಸಿ ತೆಗೆಯುವ ಚಿತ್ರಣ ಸಾಮಾನ್ಯವಾಗಿ ಎಲ್ಲಾ ಕಡೆ ನೋಡುತ್ತೇವೆ.

ಹಾಗೆ ಬಗೆ ಬಗೆಯ ಸಂಡಿಗೆಯಲ್ಲಿ ರುಚಿ ಹೆಚ್ಚಿಸುವಂತಹ ಟೊಮೆಟೋ ಸಂಡಿಗೆ ನೀವು ಮಾಡಿದ್ದೀರಾ? ಕೆಲವೇ ಹಣ್ಣು ಟೊಮೆಟೋಗಳ ಬಳಸಿಕೊಂಡು ಈ ಟೊಮೆಟೋ ಸಂಡಿಗೆ ಮಾಡಬಹುದು. ಇದರ ರುಚಿಗೆ ನೀವು ನಿತ್ಯವೂ ಊಟದ ಜೊತೆಗೆ ಇದನ್ನು ಸವಿಯಲು ಮುಂದಾಗುತ್ತೀರಿ. ಮಜ್ಜಿಗೆ, ಮೊಸರು ಇದ್ದರೂ ಕೂಡ ಈ ಒಂದು ಸಂಡಿಗೆ ಇದ್ದರೆ ಹೊಟ್ಟೆ ತುಂಬಾ ಊಟ ಮಾಡುತ್ತೀರಿ.
ಹಾಗಾದ್ರೆ ನಾವಿಂದು ಮನೆಯಲ್ಲಿ ಸುಲಭವಾಗಿ ಈ ಟೊಮೆಟೋ ಸಂಡಿಗೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಅದರಲ್ಲೂ ಕಡಿಮೆ ವಸ್ತುಗಳ ಬಳಸಿಕೊಂಡು ಅತ್ಯಂತ ಸುಲಭವಾಗಿ ಈ ಟೊಮೆಟೋ ಸಂಡಿಗೆ ಮಾಡುವ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ. ಟೊಮೆಟೋ ಸಂಡಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಸಂಡಿಗೆ ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ
- ಕುಚ್ಚಲಕ್ಕಿ
- ಕಪ್ಪು ಎಳ್ಳು
- ಉಪ್ಪು
- ಖಾರದ ಪುಡಿ
ಟೊಮೆಟೋ ಸಂಡಿಗೆ ಮಾಡುವ ವಿಧಾನವೇನು?
ಮೊದಲು ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಒಂದು ಅಳತೆ ಕಪ್‌ನಲ್ಲಿ ಕುಚಲಕ್ಕಿ ತೆಗೆದುಕೊಳ್ಳಿ. ನಂತರ ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಹಾಕಿಕೊಂಡು 1 ಗ್ಲಾಸ್ ಅಳತೆಗೆ 8 ಗ್ಲಾಸ್ ನೀರು ಹಾಕಿಕೊಳ್ಳಬೇಕು. ಅನಂತರ ಮೂರು ಟೊಮೆಟೋವನ್ನು ದೊಡ್ಡದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿ ಸ್ವಲ್ಪ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ, 3 ಸೀಟಿ ಹೊಡೆಯಲು ಬಿಡಿ.
ಕುಕ್ಕರ್ ಮೂರು ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತಣ್ಣಗಾಗಲು ಬಿಡಿ. ಈಗ ತಣ್ಣಗಾದ ಅನ್ನ ಹಾಗೂ ಟೊಮೆಟೋವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದಕ್ಕೆ ನೀರು ಹಾಕಿಕೊಂಡು ರುಬ್ಬುವ ಅಗತ್ಯವಿರುವುದಿಲ್ಲ ಹಾಗೆಯೇ ಎಷ್ಟು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಬೇಕು.
ಹೀಗೆ ರುಬ್ಬಿಕೊಂಡ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ನಂತರ ಈ ಹಿಟ್ಟಿಗೆ ಖಾರದ ಪುಡಿ, ಕಪ್ಪು ಎಳ್ಳು, ಹಿಟ್ಟು ಸಪ್ಪೆಯಾಗಿದ್ದರೆ ಮತ್ತೆ ಸ್ವಲ್ಪ ಪುಡಿ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಪ್ಲಾಸ್ಟಿಕ್ ಅಥವಾ ಕಾಟನ್ ಬಟ್ಟೆಯ ಮೇಲೆ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಸಂಡಿಗೆಯನ್ನು ಹಾಕಿಕೊಳ್ಳಿ. ಮಧ್ಯಾಹ್ನದ ಬಿಸಿಲಿನಲ್ಲಿ ಒಣಗಿಸುವ ಬದಲಾಗಿ, ಸ್ವಲ್ಪ ನೆರಳು ಹಾಗು ಸ್ವಲ್ಪ ಬಿಸಿಲಿನಲ್ಲಿ ಒಣಗಿಸಿಕೊಳ್ಳಿ. ನಂತರ ಈ ಸಂಡಿಗೆಯನ್ನು ತೆಗೆದು ಗಾಳಿ ಆಡದ ಡಬ್ಬದಲ್ಲಿ ಹಾಕಿ ಇಟ್ಟುಕೊಂಡರೆ ನಿಮಗೆ ಬೇಕಾದ ಎಣ್ಣೆಗೆ ಬಿಟ್ಟು ಸವಿಯಬಹುದು. ಇದಕ್ಕೆ ಸಾಮಾನ್ಯ ಅಕ್ಕಿಯನ್ನು ಕೂಡ ಬಳಸಬಹುದು. ಕುಚಲಕ್ಕಿಯಲ್ಲಿ ರುಚಿ ದುಪ್ಪಟ್ಟಾಗುತ್ತೆ.



Click it and Unblock the Notifications