Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೆರೈಟಿಯಾಗಿ ಟೊಮೆಟೋ ದೋಸೆ ಮಾಡಿ..! 5 ನಿಮಿಷದಲ್ಲಿ ಹಿಟ್ಟು ರೆಡಿ
ದಕ್ಷಿಣ ಭಾರತೀಯರ ಅಚ್ಚು ಮೆಚ್ಚಿನ ಖಾದ್ಯದಲ್ಲಿ ಈ ದೋಸೆಯು ಸಹ ಒಂದಾಗಿದೆ. ಎಲ್ಲರ ಮನೆಯಲ್ಲೂ ವಾರದಲ್ಲಿ ಎರಡು ಇಲ್ಲವೆ ಮೂರು ದಿನ ಈ ದೋಸೆ ಮಾಡುವುದು ಫಿಕ್. ಇದಿಷ್ಟೆ ಅಲ್ಲ ಮನೆಯಿಂದ ಹೊರಬಂದು ಹೋಟೆಲ್‌ಗೆ ಹೋದರು ಅಲ್ಲಿಯೂ ಬಹುಪಾಲು ಮಂದಿ ದೋಸೆಯನ್ನೇ ಆರ್ಡರ್ ಮಾಡುತ್ತಾರೆ.
ಇನ್ನು ಈ ದೋಸೆಯಲ್ಲಿ ಹತ್ತಾರು ವಿಧಗಳಿವೆ. ಮಸಾಲೆ ದೋಸೆ, ಈರುಳ್ಳಿ ದೋಸೆ, ಬೆಣ್ಣೆ ದೋಸೆ, ಮೆದು ದೋಸೆ, ಖಾಲಿ ದೋಸೆ ಹೀಗೆ ಹೇಳುತ್ತಾ ಹೋದಷ್ಟು ಈ ಪಟ್ಟಿ ಬೆಳೆಯುತ್ತದೆ. ಇತ್ತ ಈ ದೋಸೆಗಳನ್ನು ನಾವು ಮನೆಯಲ್ಲೇ ಮಾಡಿ ಸವಿಯುತ್ತೇವೆ. ಆದ್ರೆ ಇತ್ತೀಚಿಗೆ ವೆರೈಟಿ ದೋಸೆಗಳ ಟ್ರೆಂಡ್ ಹೆಚ್ಚಾಗುತ್ತಿದೆ. ನೀವು ಕೇಳಿರದ ನೋಡಿಲ್ಲದ ದೋಸೆಗಳು ಸಹ ಈಗ ಸವಿಯಲು ಸಿಗುತ್ತವೆ.

ಇಂತಹ ವಿಶೇಷ ರುಚಿಯ ವಿಭಿನ್ನ ದೋಸೆಯಲ್ಲಿ ಟೊಮೆಟೋ ದೋಸೆ ಸಹ ಒಂದಾಗಿದೆ. ಟೊಮೆಟೋ ಬಳಸಿ ಮಾಡುವ ಈ ದೋಸೆ ಸವಿಯಲು ಸಿಕ್ಕಾಪಟ್ಟೆ ರುಚಿ ನೀಡುತ್ತದೆ. ಮಾಡುವುದು ಸಹ ಬೇರೆ ದೋಸೆಗಳಂತೆಯೇ ಸುಲಭವಾಗಿದೆ.
ಹಾಗಾದ್ರೆ ನಾವಿಂದು ಈ ಟೊಮೆಟೋ ದೋಸೆ ಮಾಡಲು ಬೇಕಾಗುವ ಪದಾರ್ಥವೇನು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ವಿವರಣಾತ್ಮಕವಾಗಿ ತಿಳಿದುಕೊಳ್ಳೋಣ.
ಟೊಮೆಟೋ ದೋಸೆ ಮಾಡಲು ಬೇಕಾಗುವ ವಸ್ತುಗಳು
- ಟೊಮೆಟೋ - 3
- ಖಾರದ ಪುಡಿ
- ಸೋಡಾ
- ಶುಂಠಿ
- ರವೆ (ಬಾಂಬೆ ರವೆ)
- ಉಪ್ಪು
- ಎಣ್ಣೆ
ಟೊಮೆಟೋ ದೋಸೆ ಮಾಡುವ ವಿಧಾನ
ಮೊದಲು ಒಂದು ಸಣ್ಣ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೂರು ಟೊಮೆಟೋ, ಖಾರದ ಪುಡಿ, ಇಲ್ಲವೆ ಒಣ ಮೆಣಸು ಸಹ ಹಾಕಿಕೊಳ್ಳಬಹುದು, ಜೊತೆಗೆ ಶುಂಠಿ ಹಾಕಿಕೊಂಡು ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿಕೊಂಡಿರುವುದು ನುಣ್ಣಗೆ ಆಗಿದ್ಯಾ ನೋಡಿಕೊಂಡು ಮತ್ತೆ ಅದೇ ಮಿಕ್ಸಿ ಜಾರ್‌ಗೆ ರವೆ ಹಾಕಿ, ನೀರು ಸಹ ಹಾಕಿ ಮತ್ತೆ ರುಬ್ಬಿಕೊಳ್ಳಿ. ಬಳಿಕ ಈ ರುಬ್ಬಿಕೊಂಡ ಹಿಟ್ಟನ್ನು ಪಾತ್ರೆಯೊಂದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಈ ಹಿಟ್ಟನ್ನು ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. 10 ನಿಮಿಷ ಬಿಟ್ಟರೆ ಸಾಕು.
ಬಳಿಕ ಇದಕ್ಕೆ ಸೋಡಾ ಪುಡಿ ಹಾಗೂ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನೀವು ಸಾಮಾನ್ಯವಾಗಿ ದೋಸೆ ಮಾಡುವಾಗ ರೆಡಿ ಮಾಡಿಕೊಳ್ಳುವ ಹಿಟ್ಟಿನಂತೆಯೇ ಈ ಹಿಟ್ಟನ್ನೂ ಸಹ ರೆಡಿ ಮಾಡಿಕೊಳ್ಳಿ.
ಇಷ್ಟಾದ ಬಳಿಕ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಚ್ಚಿ ಬಳಿಕ ಕಲಸಿಕೊಂಡಿರುವ ಹಿಟ್ಟನ್ನು ಹಾಕಿಕೊಳ್ಳಿ. ಉಳಿದಂತೆ ಸಾಮಾನ್ಯ ದೋಸೆ ಮಾಡಿದಂತೆಯೇ ಎರಡೂ ಬದಿಯೂ ಚೆನ್ನಾಗಿ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಟೊಮೆಟೋ ದೋಸೆ ರೆಡಿಯಾಗಿರುತ್ತದೆ.
ಈ ದೋಸೆಗೆ ಕಾಯಿ, ಕಡಲೆ ಬೀಜದ ಚಟ್ನಿ ಮಾಡಿದರೆ ರುಚಿ ದುಪ್ಪಟ್ಟಾಗುತ್ತದೆ. ನಿಮಗೆ ಎಷ್ಟು ಪ್ರಮಾಣದಲ್ಲಿ ಹಿಟ್ಟು ಬೇಕೋ ಅಷ್ಟು ಮಾಡಿಕೊಳ್ಳಿ. ಒಂದು ವೇಳೆ ದೋಸೆ ಹರಿಯುತ್ತಿದ್ದರೆ ಹಿಟ್ಟಿಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಇಲ್ಲವೆ ಅಕ್ಕಿ ಹಿಟ್ಟು ಇದ್ದರೆ ಮಿಕ್ಸ್ ಮಾಡಿಕೊಳ್ಳಿ.



Click it and Unblock the Notifications