Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
3 ಟೊಮೆಟೋದಿಂದ 15 ದೋಸೆ ಮಾಡಿ..! ಗರಿ ಗರಿ ರುಚಿ ಸವಿದಿದ್ದೀರಾ?
ನೀವು ಬೆಳಗ್ಗೆ ತಿಂಡಿಗೆ ಹಲವು ವಿಧವಾದ ದೋಸೆ ಮಾಡಿ ಸವಿಯುವುದು ಸಾಮಾನ್ಯ. ದೋಸೆ ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ದಕ್ಷಿಣ ಭಾರತದಲ್ಲಿ ದೋಸೆ ಎಲ್ಲರ ಮನೆಯ ತಿಂಡಿ. ಮಕ್ಕಳಿಗೆ ದೋಸೆ ಅಂದರೆ ಬಾಯಿ ಚಪ್ಪರಿಸಿ ಸವಿಯುತ್ತಾರೆ. ದೋಸೆಯನ್ನು ಎಷ್ಟು ಬಗೆಯಲ್ಲಿ ಮಾಡಬಹುದು ಎಂಬುದು ಕೂಡ ನಿಮಗೆ ತಿಳಿದಿರಬಹುದು.
ಅದರಲ್ಲೂ ನಾವಿಂದು ತರಕಾರಿ ಬಳಸಿಕೊಂಡು ಮಾಡುವ ದೋಸೆ ಕುರಿತು ತಿಳಿದುಕೊಳ್ಳೋಣ. ಟೊಮೆಟೋ ಬಳಸಿಕೊಂಡು ಅದ್ಭುತ ರುಚಿಯ ದೋಸೆ ಮಾಡಬಹುದು. ಕೇವಲ ಮೂರು ಟೊಮೆಟೋ ಇದ್ದರೆ 15ಕ್ಕೂ ಹೆಚ್ಚು ದೋಸೆ ಮಾಡಬಹುದು. ಹಾಗಾದ್ರೆ ಈ ದೋಸೆ ಮಾಡೋದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಈ ಟೊಮೆಟೋ ದೋಸೆ, ರೋಸ್ಟ್ ಮಾಡಿ ಸವಿದರೆ ಬಾಯಲ್ಲಿ ನೀರು ಬರುತ್ತೆ. ಟೊಮೆಟೋ ರೋಸ್ಟ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳಿ ಬೇಕು?, ಟೊಮೆಟೋ ದೋಸೆ ಮಾಡುವುದು ಹೇಗೆ?, ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಟೊಮೆಟೋ - 3
- ಅಕ್ಕಿ ಹಿಟ್ಟು - 1 ಕಪ್
- ಚಿರೋಟಿ ರವೆ - 1 ಕಪ್
- ಗೋಧಿ ಹಿಟ್ಟು - 1/2 ಕಪ್
- ಈರುಳ್ಳಿ - 1
- ಕೊತ್ತಂಬರಿ ಸೊಪ್ಪು - 1 ಕಪ್
- ಕೆಂಪು ಮೆಣಸಿನಕಾಯಿ - 1 ಚಮಚ
- ಜೀರಿಗೆ - 1 ಚಮಚ
- ಉಪ್ಪು - 1 ಚಮಚ
ಟೊಮೆಟೋ ದೋಸೆ ಮಾಡುವ ವಿಧಾನವೇನು?
ಮೊದಲು ಟೊಮೆಟೋಗಳನ್ನು ತೊಳೆದುಕೊಂಡು ಸಾಂಬಾರ್‌ಗೆ ಹೆಚ್ಚಿಕೊಳ್ಳುವಂತೆ ಹೆಚ್ಚಿಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಟೊಮೆಟೋ ಪೇಸ್ಟ್ ಅನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಚಿರೋಟಿ ರವೆ, ಅಕ್ಕಿ ಹಿಟ್ಟು, ಉಪ್ಪು, ಗೋಧಿ ಹಿಟ್ಟು ಹಾಕಿ.
ಹಾಗೆ ಇದಕ್ಕೆ ಚಿಕ್ಕದಾಗಿ ಹೆಚ್ಚಿರುವ ಈರುಳ್ಳಿ, ಜೀರಿಗೆ, ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಗಂಟಾಗದಂತೆ ಚೆನ್ನಾಗಿ ನುಣ್ಣಗೆ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ನೀರಾಗಿರುವಂತೆ ಮಾಡಿಕೊಳ್ಳಿ. ನೀರು ದೋಸೆ ಮಾಡಲು ಮಾಡುವ ಹಿಟ್ಟಿನ ಹದಕ್ಕೆ ಇದನ್ನು ಮಾಡಿಕೊಳ್ಳಿ.
ಈಗ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಒಂದೊಂದೇ ದೋಸೆ ಹಾಕಿಕೊಳ್ಳಿ. ಚೆನ್ನಾಗಿ ಎರಡು ಕಡೆಯೂ ಕರಿದುಕೊಳ್ಳಿ. ಹೀಗೆ ಎಲ್ಲಾ ಹಿಟ್ಟನ್ನು ರೋಸ್ಟ್ ಮಾಡಿಕೊಳ್ಳಿ. ಇಷ್ಟಾದರೆ ಟೊಮೆಟೋ ದೋಸೆ ರೆಡಿಯಾಗುತ್ತದೆ. ಅದ್ಭುತ ರುಚಿಯಲ್ಲಿ 5ರಿಂದ 6 ದೋಸೆ ಸವಿಯುವುದು ಪಕ್ಕ. ನೀವು ಕೂಡ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಈ ರೀತಿಯ ದೋಸೆ ನೀವು ಬೆಳಗ್ಗೆ ತಿಂಡಿಗಾಗಿ ಮಾಡಿದರೆ ಮನೆ ಮಂದಿಯಲ್ಲ ಕುಳಿತು ಸವಿಯುವುದು ಪಕ್ಕ. ಹಾಗೆ ಈ ದೋಸೆ ಮಾಡುವುದು ಬಹಳ ಸುಲಭ. ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ಹಾಗೆ ಹಿಂದಿನ ದಿನ ಹಿಟ್ಟು ರೆಡಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ದೋಸೆ ಮಾಡುವ ದಿನವೇ ಹಿಟ್ಟು ರೆಡಿ ಮಾಡಿಕೊಂಡು ಮಾಡಬಹುದು. ಹಾಗಾದ್ರೆ ಇಷ್ಟೊಂದು ಸುಲಭದ ದೋಸೆ ರೆಸಿಪಿಯನ್ನು ನೀವು ಕೂಡ ಮಾಡಿ ನೊಡಿ.



Click it and Unblock the Notifications