Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ನಿಮಿಷದಲ್ಲಿ ಮಾಡಿ ಈ ತಾಳಿಪಟ್ಟು..! ಈ ರುಚಿ ಖಾದ್ಯ ಮತ್ತೊಂದಿಲ್ಲಾ!
ಬೆಳಗ್ಗೆ ತಿಂಡಿಗೆ ನೀವು ಹೊಸ ರೀತಿಯ ಖಾದ್ಯಗಳ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗಬಹುದು. ಹಾಗೆ ಬಹಳ ರುಚಿ ರುಚಿಯಾಗಿ ಯಾವುದಾದರು ತಿಂಡಿ ಸವಿದು ನಿತ್ಯದ ಕೆಲಸದಲ್ಲಿ ಭಾಗಿಯಾಗುವುದು ಬಹಳ ನೆಮ್ಮದಿ ನೀಡಬಹುದು. ಅದ್ರಲ್ಲೂ ಬೆಳಗ್ಗೆ ಎಲ್ಲರಿಗೂ ಪ್ರಿಯವಾಗುವಂತಹ ತಿಂಡಿಗಳನ್ನು ಮಾಡಿ ಸವಿಯುವುದು ಎಲ್ಲರ ಆಲೋಚನೆಯಾಗಿರಲಿದೆ. ಹಾಗೆ ವಿಶೇಷ ರುಚಿಯ ಹಾಗೆ ವಿಶೇಷ ಬಗೆ ತಿಂಡಿ ಮಾಡಿದ್ರೆ ಮನೆ ಮಂದಿಯಲ್ಲ ಕುಳಿತು ಸವಿಯಲು ಮುಂದಾಗುತ್ತಾರೆ.
ಇನ್ನು ನಾವು ವಿಶೇಷ ಖಾದ್ಯವಾಗಿ ತಾಳಿಪಟ್ಟು ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಈ ತಾಳಿಪಟ್ಟು ನಿಮಗೆ ಬಹಳ ರುಚಿ ನೀಡಲಿದೆ. ಮಸಾಲೆ ಭರಿತ ತಾಳಿಪಟ್ಟು ಎಲ್ಲರಿಗೂ ಇಷ್ಟವಾಗುವ ಖಾದ್ಯ. ನೀವು ವಿಶೇಷ ದಿನಗಳಲ್ಲಿ ಅಥವಾ ಶುಭ ಸಮಾರಂಭದ ಸಮಯದಲ್ಲಿ ಈ ತಾಳಿ ಪಟ್ಟು ಸವಿದಿರಬಹುದು. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಇದು ಬಹಳ ರುಚಿ ನೀಡಲಿದೆ.

ಹಾಗಾದ್ರೆ ನೀವು ಮನೆಯಲ್ಲಿ ಈ ತಾಳಿಪಟ್ಟು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಾಳಿಪಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಜೋಳದ ಹಿಟ್ಟು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಕಡಲೆ ಹಿಟ್ಟು
- ಗೋಧಿ ಹಿಟ್ಟು
- ಬಿಳಿ ಎಳ್ಳು
- ಈರುಳ್ಳಿ
- ಟೊಮೆಟೋ
- ಕ್ಯಾರೆಟ್
- ಇಂಗು
- ಮೆಣಸಿನ ಕಾಯಿ
- ಬೆಳ್ಳುಳ್ಳಿ
- ಜೀರಿಗೆ
- ಅಜ್ವೈನ
- ಖಾರದ ಪುಡಿ
- ಅರಶಿಣ
- ಮೊಸರು
- ಉಪ್ಪು
ತಾಳಿಪಟ್ಟು ಮಾಡುವುದು ಹೇಗೆ?
ಕೊತ್ತಂಬರಿ ಸೊಪ್ಪನ್ನು ತೊಳೆದು ಸಣ್ಣಗಾಗಿ ಹೆಚ್ಚಿಕೊಳ್ಳಬೇಕು. ಕರಿಬೇವು ಕೂಡ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಈ ಎರಡು ಸೊಪ್ಪನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋ, ಈರುಳ್ಳಿ ಸಹ ಹಾಕಿಕೊಳ್ಳಿ. ಹಾಗೆ ತುರಿದ ಕ್ಯಾರೆಟ್, ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಎಳ್ಳು ಹಾಕಿ ಇಟ್ಟುಕೊಳ್ಳಿ.
ಈಗ ಸಣ್ಣ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಸಿ ಮೆಣಸು, ಬೆಳ್ಳುಳ್ಳಿ, ಅಜ್ವೈನಾ, ಜೀರಿಗೆ ಹಾಕಿ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಪಾತ್ರೆಯಲ್ಲಿ ಇರುವ ಮಸಾಲೆಗಳಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ಇಂಗು, ಖಾರದ ಪುಡಿ, ಅರಶಿಣ, ಕಾರ್ನ್ ಫ್ಲೋರ್, ಕಡಲೆ ಹಿಟ್ಟು, ಗೋಧಿ ಹಿಟ್ಟು ಹಾಕಿಕೊಳ್ಳಿ. ಈ ಎಲ್ಲಾ ಹಿಟ್ಟುಗಳು ಒಂದೇ ಅಳತೆಯಲ್ಲಿ ಹಾಕಿಕೊಳ್ಳಿ.
ಈಗ ಈ ಎಲ್ಲಾ ಪದಾರ್ಥಗಳು ಮಿಕ್ಸ್ ಆಗುವಂತೆ ಕೈಯಿಂದ ಕಲಸಿಕೊಳ್ಳಿ. ಮೊದಲು ಡ್ರೈ ಮಿಕ್ಸ್ ಮಾಡಿಕೊಂಡ ಬಳಿಕ ಸ್ವಲ್ಪ ಮೊಸರು ಹಾಕಿಕೊಂಡು ಸಹ ಮಿಕ್ಸ್ ಮಾಡಿ. ನಂತರ ನೀರು ಹಾಕಿಕೊಳ್ಳುತ್ತಾ ಹಿಟ್ಟು ಹದ ಮಾಡಿಕೊಳ್ಳಿ. ಇದು ರೊಟ್ಟಿಗೆ ಮಾಡುವಂತಹ ಹಿಟ್ಟಿನಂತೆ ಹದ ಆಗಬೇಕು. ಬಹಳ ತೆಳುವಾಗಿ ಹಿಟ್ಟು ರೆಡಿ ಮಾಡಬೇಡಿ. ದಪ್ಪವಾಗಿರಲಿದೆ. ಹಾಗೆ ಗಟ್ಟಿಯಾಗಿರಲಿ.
ಈಗ ಒಂದು ಪ್ಲಾಸ್ಟಿಕ್‌ನ ಮೇಲೆ ನೀರು ಸವರಿಕೊಂಡು ಅದಕ್ಕೆ ಈ ಹಿಟ್ಟು ಹಾಕಿ ತಟ್ಟಿಕೊಳ್ಳಬೇಕು, ಬಹಳ ತೆಳಿವಾಗಿಯೂ ಹಾಗೆ ದಪ್ಪವಾಗಿಯೂ ತಟ್ಟಿಕೊಳ್ಳಬೇಡಿ. ಹದವಾಗಿ ತಟ್ಟಿಕೊಂಡ ಬಳಿಕ ಕಾವಲಿಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಚ್ಚಿಕೊಂಡು ನಂತರ ಅದರ ಮೇಲೆ ತಾಳಿ ಪಟ್ಟು ಹಾಕಿಕೊಂಡು ಕಾಯಿಸಿಕೊಳ್ಳಿ. ಎರಡೂ ಕಡೆ ಚೆನ್ನಾಗಿ ಕರಿದುಕೊಂಡು ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ತಾಳಿ ಪಟ್ಟು ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications