Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಂಬಾ ರುಚಿಯಾಗಿರುತ್ತೆ ಎಳ ನೀರಿನ ಪಾಯಸ: ಮಾಡುವುದು ಬಲು ಸುಲಭ, ಮಧುಮೇಹಿಗಳೂ ಸವಿಯಬಹುದು
ನೀವು ಎಳನೀರಿನ ಪಾಯಸ ಇದುವರೆಗೆ ಟ್ರೈ ಮಾಡಿಲ್ಲ ಎಂದರೆ ಒಮ್ಮೆ ಟ್ರೈ ಮಾಡಿ ನೋಡಿ, ಸೂಪರ್ ಆಗಿರುತ್ತದೆ, ಟೇಸ್ಟ್ ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಾಡುವುದು ತುಂಬಾ ಸುಲಭ, ಅಲ್ಲದೆ ಇದನ್ನು ಮಧುಮೇಹ ಇರುವವರು ಕೂಡ ಸೇವಿಸಬಹುದು. ಆರೋಗ್ಯಕ್ಕೆ ಈ ಪಾಯಸ ತುಂಬಾ ಒಳ್ಳೆಯದು, ಬನ್ನಿ ಎಳನೀರಿನ ಪಾಯಸ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಎಳನೀರು 2
ಎಳನೀರಿ ಗಂಜಿ 1 ಕಪ್
ಹಾಲು ಅರ್ಧ ಲೀಟರ್
ಕಂಡೆನ್ಸ್ಡ್ ಮಿಲ್ಕ್ 3/4 ಕಪ್
ಏಲಕ್ಕಿ ಪುಡಿ 1 ಚಮಚ
ಬೆಲ್ಲ 1 ಕಪ್ (ಮಿಲ್ಕ್‌ಮೇಡ್ ಅಥವಾ ಕಂಡೆನ್ಸ್ಡ್ ಮಿಲ್ಕ್‌ನಲ್ಲಿ ಸಿಹಿ
ಇರುವುದರಿಂದ ಬೆಲ್ಲ ಹಾಕಲೇಬೇಕೆಂದಿಲ್ಲ)
ತೆಂಗಿನಕಾಯಿ ಹಾಲು 1/2 ಕಪ್
1 ಚಮಚ ತುಪ್ಪ
ಗೋಡಂಬಿ, ದ್ರಾಕ್ಷಿ
ಮಾಡುವ ವಿಧಾನ
- ಎಳನೀರು ತೆಳುಗಂಜಿ ಆಯ್ಕೆ ಮಾಡಬೇಡಿ, ಸ್ವಲ್ಪ ದಪ್ಪ ಗಂಜಿ ಇರುವ ಎಳನಿರು ಒಳ್ಳೆಯದು.
- ನೀವು ಎಳನೀರನ್ನು ಒಂದು ಬೌಲ್‌ನಲ್ಲಿ ಹಾಕಿಡಿ
- ನಂತರ ಎಳನೀರಿನ ಗಂಜಿಯನ್ನು(ಸ್ವಲ್ಪ ತೆಗೆದು ಇಡಿ)ಗ್ರೈಂಡ್ ಮಾಡಿ, ಗ್ರೈಂಡ್ ಮಾಡುವಾಗ ಸ್ವಲ್ಪ ಎಳನೀರು ಕೂಡ ಸೇರಿಸಿ ಗ್ರೈಂಡ್ ಮಾಡಿ
- ಕಂಡೆನ್ಸ್ಡ್ ಮಿಲ್ಕ್ ಸೂಪರ್ ಮಾರ್ಕೆಟ್‌ನಲ್ಲಿ ದೊರೆಯುತ್ತದೆ.
- ನೀವು ಹಾಲನ್ನು ಕುದಿಸಿ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ, ಏಲಕ್ಕಿ ಪುಡಿ ಸೇರಿಸಿ, ಎಳನೀರು ಸೇರಿಸಿ
- ಈಗ ಗ್ರೈಂಡ್ ಮಾಡಿದ ಎಳನೀರಿನ ಗಂಜಿ ಸೇರಿಸಿ ಮಿಕ್ಸ್ ಮಾಡಿ.
- ಈಗ ಸ್ಟೌವ್ ಆಫ್ ಮಾಡಿ ತೆಗೆದಿಟ್ಟ ಎಳನೀರಿನ ಗಂಜಿ ಹಾಕಿ, ತೆಂಗಿನಕಾಯಿ ಹಾಲು ಸೇರಿಸಿ ಮಿಕ್ಸ್ ಮಾಡಿ, ತುಪ್ಪದಲ್ಲಿ ಕರಿದ ಗೋಡಂಬಿ ದ್ರಾಕ್ಷಿ ಸೇರಿಸಿದರೆ ಸೂಪರ್ ರುಚಿಯ ಎಳನೀರಿನ ಪಾಯಸ ರೆಡಿ.
ಎಳನೀರಿನ ಪಾಯಸ ತುಂಬಾ ತುಂಬಾ ರುಚಿಯಾಗಿರುತ್ತದೆ, ಇದನ್ನು ಒಮ್ಮೆ ಮಾಡಿದರೆ
ಮತ್ತೆ-ಮತ್ತೆ ತಿನ್ನಬೇಕೆನಿಸುವುದು.
ಈ ಪಾಯಸವನ್ನು ಬಿಸಿ ಬಿಸಿಯಾಗಿ ತಿನ್ನಬಹುದು ಅಥವಾ ಫ್ರಿಡ್ಜ್‌ನಲ್ಲಿಟ್ಟು
ತಿನ್ನಬಹುದು, ಈ ಪಾಯಸ ತುಂಬಾನೇ ರುಚಿಯಾಗಿರುತ್ತದೆ.
ಈ ಪಾಯಸ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲಿಯೂ ಬೆಲ್ಲ ಹಾಕದೆ ಬರಿ ಕಂಡೆನ್ಸ್ಡ್ ಮಿಲ್ಕ್ ಮಾತ್ರ ಸೇರಿಸಿ ಮಾಡಿದರೆ ಮಧುಮೇಹಿಗಳು ತಿನ್ನಬಹುದು.
ಎಳನೀರಿನ ಪ್ರಯೋಜನಗಳು
ಖನಿಜಾಂಶಗಳು ಅಧಿಕವಿದೆ
ಎಳನೀರಿನಲ್ಲಿ ಖನಿಜಾಂಶ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ಕ್ಯಾಲ್ಸಿಯಂ, ಸೋಡಿಯಂ ಈ
ಖನಿಜಾಂಶಗಳು ಅಧಿಕವಿದೆ. ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಳನೀರು
ದೇಹಕ್ಕೆ ಅಗ್ಯತವಾದ ಪೋಷಕಾಂಶಗಳನ್ನು ನೀಡುತ್ತದೆ.
ಆಂಟಿಆಕ್ಸಿಡೆಂಟ್ ಅಧಿಕವಿದೆ
ಈ ಎಳನೀರಿನಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಿದೆ. ಇದರಿಂದ ಆರೋಗ್ಯಕ್ಕೆ ತುಂಬಾನೇ
ಒಳ್ಳೆಯದು. ಈ ಪಾಯಸ ಲಿವರ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಲಿವರ್ ಸಮಸ್ಯೆ
ಇರುವವರು ಎಳನೀರು ಸೇವನೆ ಮಾಡಿದರೆ ಒಳ್ಳೆಯದು.
ಕಿಡ್ನಿ ಸ್ಟೋನ್ ತಡೆಗಟ್ಟಲು ಸಹಕಾರಿ
ಕಿಡ್ನಿ ಸ್ಟೋನ್ ಇರುವವರು ಎಳ ನೀರನ್ನು ಸೇವಿಸುವುದು ತುಂಬಾನೇ ಒಳ್ಳೆಯದು.
ಎಳನೀರನ್ನು ಪ್ರತಿನಿತ್ಯ ಸೇವಿಸಿದರೆ ಕಿಡ್ನಿ ಸ್ಟೋನ್ ಹೋಗಲಾಡಿಸಲು ಸಹಕಾರಿ. ಈ
ಪಾಯಸ ಕೂಡ ಕಿಡ್ನಿಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಎಳನೀರಿನ ಪಾಯಸ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ:
ಎಷ್ಟೇ ಹಸಿವಿನಿಂದ ಇದ್ದರೂ ಈ ಪಾಯಸ ಕುಡಿದರೆ ಸಾಕು ಹೊಟ್ಟೆ ಹಸಿವು ದೂರಾಗುವುದು, ದೇಹಕ್ಕೆ ಶಕ್ತಿ ದೊರೆಯುತ್ತದೆ.
ಈ ಪಾಯಸವನ್ನು ಎಲ್ಲರೂ ಸವಿಯಬಹುದಾ?
ಇದು ಎಳನೀರಿನ ಪಾಯಸ ಆದ ಕಾರಣ ಎಲ್ಲರ ಆರೋಗ್ಯಕ್ಕೂ ಒಳ್ಳೆಯದು,
ಎಳನೀರಿನಿಂದ ಅಲರ್ಜಿ ಸಮಸ್ಯೆ ಉಂಟಾಗುವುದು ತುಂಬಾ ಕಡಿಮೆ. ಈ ಎಳನೀರು
ಒಟ್ಟುಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹಾಗಾಗಿ ಈ ಎಳನೀರಿನ ಪಾಯಸ ಟ್ರೈ ಮಾಡಿ, ನಿಮಗಿಷ್ಟವಾದ ಪಾಯಸ ರೆಸಿಪಿಯನ್ನು ಕಮೆಂಟ್‌ನಲ್ಲಿ ಹಾಕಿ.



Click it and Unblock the Notifications