Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಸ್ಥಾನದ ಪ್ರಸಾದದಂತೆ ರುಚಿ ರುಚಿಯ ಪುಳಿಯೋಗರೆ ಮಾಡಿ..!
ಬೆಳಗ್ಗೆಯ ತಿಂಡಿಗೆ ನೀವು ಹತ್ತು ಹಲವು ರೀತಿಯ ಖಾದ್ಯ ಸವಿದಿರುತ್ತೀರಿ. ಅದರಲ್ಲೂ ಚಿತ್ರಾನ್ನ, ಪುಳಿಯೋಗರೆ, ಪಲಾವ್ ವಾಂಗಿಬಾತ್ ಸವಿಯುತ್ತೀರಿ. ಆದ್ರೆ ನಿತ್ಯವೂ ಒಂದೇ ರೀತಿ ಅಡುಗೆ ಸವಿಯಲು ನಿಮಗೂ ಇಷ್ಟವಿರುವುದಿಲ್ಲ.
ಇನ್ನು ನೀವು ಕೆಲವು ಬಾರಿ ಹೋಟೆಲ್ನಲ್ಲಿ ಸವಿದ ಖಾದ್ಯ ಮನೆಯಲ್ಲೇ ಮಾಡಿ ತಿನ್ನುವ ಪ್ರಯತ್ನವಂತೂ ಮಾಡಿರುತ್ತಿರಿ. ಇಷ್ಟೇ ಅಲ್ಲ ಕೆಲವು ಬಾರಿ ದೇವಸ್ಥಾನದಲ್ಲಿ ನೀಡಿದ್ದ ಪ್ರಸಾದವನ್ನು ಸಹ ಮನೆಯಲ್ಲಿ ಮಾಡಿ ಸವಿಯಲು ಮುಂದಾಗಿರುತ್ತೀರಿ. ಅಂತಹ ಪ್ರಸಾದದಲ್ಲಿ ಪುಳಿಯೋಗರೆ ಸಹ ಒಂದು.

ಬಹುತೇಕ ದೇವಾಲಯದಲ್ಲಿ ಪುಳಿಯೋಗರೆಯನ್ನ ಪ್ರಸಾದವಾಗಿ ನೀಡಲಾಗುತ್ತದೆ. ತುಪ್ಪದಿಂದ ಮಾಡಿದ್ದ ಪುಳಿಯೋಗರೆ ಅದೆಷ್ಟು ರುಚಿಯಾಗಿರುತ್ತೆ ಅಂದ್ರೆ ನೀವು ಮತ್ತೆ ಮತ್ತೆ ಆ ದೇವಾಲಯಕ್ಕೆ ತೆರಳುತ್ತೀರಿ. ಪ್ರಸಾದ ಎಂಬುದನ್ನೂ ನೋಡದೆ ಮತ್ತೆ ಮತ್ತೆ ಅದನ್ನು ಸವಿದಿರುತ್ತೀರಿ.
ಹಾಗಾದ್ರೆ ಈ ದೇವಸ್ಥಾನದಲ್ಲಿ ನೀಡುವ ರುಚಿಯಂತೆ ನಾವು ಮನೆಯಲ್ಲೇ ಪುಳಿಯೋಗರೆ ಮಾಡೋದು ಹೇಗೆ? ಈ ಪುಳಿಯಯೋಗರೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವುದು ಹೇಗೆ? ಪಾಕ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ
ಪುಳಿಯೋಗರೆ ಮಾಡಲು ಬೇಕಾಗುವ ವಸ್ತುಗಳು
- ಅನ್ನ ಬೌಲ್- 1 ಬೌಲ್
- ಬೇಳೆ - 1 ಟೀಸ್ಪೂನ್
- ಉದ್ದಿನ ಬೇಳೆ - 1 ಟೀಸ್ಪೂನ್
- ಕರಿ ಮೆಣಸಿನ ಪುಡಿ - 1 ಟೀಸ್ಪೂನ್
- ಜೀರಿಗೆ - 1 ಟೀಸ್ಪೂನ್
- ಕೊತ್ತಂಬರಿ - 1 ಟೀಸ್ಪೂನ್
- ಮೆಂತ್ಯ - 1/4 ಟೀಸ್ಪೂನ್
- ಸಾಸಿವೆ - 1 ಟೀಸ್ಪೂನ್
- ಕರಿಬೇವಿನ ಎಲೆಗಳು - 3 ಚಮಚ
- ಕೆಂಪು ಮೆಣಸಿನಕಾಯಿ-6
- ಕಪ್ಪು ಎಳ್ಳು - 1 ಟೀಸ್ಪೂನ್
- ಬಿಳಿ ಎಳ್ಳು - 1 ಟೀಸ್ಪೂನ್
ಗೊಜ್ಜು ಮಾಡಲು ಬೇಕಾಗುವ ವಸ್ತುಗಳು
- ಹುಣಸೆಹಣ್ಣು 1 1/2 ಕಪ್ ನೀರು - 50 ಗ್ರಾಂ
- ಬೇಳೆ - 1 tbs
- ಉದ್ದಿನಬೇಳೆ - 1 tbs
- ಕೆಂಪು ಮೆಣಸಿನಕಾಯಿ - 5
- ಇಂಗು - 1/2 ಟೀಸ್ಪೂನ್
- ಅರಿಶಿನ ಪುಡಿ - 1/2 ಟೀಸ್ಪೂನ್
- ಖಾರದ ಪುಡಿ - 1 ಟೀಸ್ಪೂನ್
- ನೆಲಗಡಲೆ - 1/4 ಕಪ್
- ಕರಿಬೇವಿನ ಎಲೆಗಳು - 3 ಚಮಚ
- ಅಡುಗೆ ಎಣ್ಣೆ - 3 ಚಮಚ
- ರುಚಿಗೆ ಉಪ್ಪು
ಪುಳಿಯೋಗರೆ ಮಾಡುವ ವಿಧಾನ
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಒಂದು ಸ್ಪೂನ್ ಕಡಲೆ ಬೇಳೆ, ಉದ್ದಿನ ಬೇಳೆ, ಕರಿಮೆಣಸು, ಜೀರಿಗೆ, ಕೊತ್ತಂಬರಿ ಕಾಳು, ಮೆಂತ್ಯ, ಸಾಸಿವೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ ಹಾಕಿಕೊಳ್ಳಬೇಡಿ. ಬಳಿಕ ಇದಕ್ಕೆ ಕರಿಬೇವು, ಒಣಮೆಣಸು, ಬಿಳಿ ಎಳ್ಳು ಹಾಕಿಕೊಂಡಿ ಫ್ರೈ ಮಾಡಿಕೊಳ್ಳಿ.
ಫ್ರೈ ಮಾಡಿಕೊಂಡ ಬಳಿಕ ತಣ್ಣಗಾದ ಮೇಲೆ ಅದನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
ಇನ್ನೊಂದೆಡೆ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಡಲೆ ಬೀಜ, ಕರಿಬೇವು ಹಾಕಿ ಹುರಿದು ಎತ್ತಿಟ್ಟುಕೊಳ್ಳಿ. ಬಳಿಕ ಅದೇ ಎಣ್ಣೆಗೆ ಸಾಸಿವೆ, ಉದ್ದಿನ ಬೇಳೆ, ಕಡಲೇ ಬೇಳೆ ಹಾಕಿಕೊಂಡು ಮಿಕ್ಸ್ ಮಾಡಿ. ಬಳಿಕ 5 ಒಣ ಮೆಣಸು ಕತ್ತರಿಸಿ ಹಾಕಿ ಫ್ರೈ ಮಾಡಿ. ಇದಕ್ಕೆ ಇಂಗು ಹಾಕಿ ಬಳಿಕ ಕೊನೆಯಲ್ಲಿ ಒಂದು ದೊಡ್ಡ ಗೋಲಿ ಗಾತ್ರದ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿಟ್ಟು ಅದನ್ನು ತೆಗೆದು ಹುಳಿಯನ್ನು ಹಾಕಿಕೊಳ್ಳಿ.
ಬಳಿಕ ಇದಕ್ಕೆ ಅರಶಿನ, ಖಾರದ ಪುಡಿ ಹಾಕಿಕೊಂಡು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ. ಇದಕ್ಕೆ ಈಗ ಫ್ರೈ ಮಾಡಿಕೊಂಡ ಕಡಲೆ ಬೀಜ ಹಾಗೂ ಕರಬೇವು ಹಾಕಿಕೊಂಡು ಮಿಕ್ಸ್ ಮಾಡಿ ಇಳಿಸಿಕೊಳ್ಳಿ.
ಈಗ ಅನ್ನ ತೆಗೆದುಕೊಂಡು ಅದನ್ನು ಹುಡಿ ಹುಡಿಯಾಗಿ ಮಾಡಿಕೊಳ್ಳಿ. ಬಳಿಕ ಅನ್ನಕ್ಕೆ ಎಷ್ಟು ಬೇಕೋ ಅಷ್ಟು ಗೊಜ್ಜು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೀವು ಎಣ್ಣೆಯ ಬದಲು ತುಪ್ಪ ಹಾಕಿಕೊಳ್ಳಬಹುದು. ಗೊಜ್ಜನ್ನು ಅನ್ನಕ್ಕೆ ಮಿಕ್ಸ್ ಮಾಡುವಾಗ ನೇರವಾಗಿ ತುಪ್ಪ ಹಾಗೂ ಉಪ್ಪು ಸೇರಿಸಿಕೊಳ್ಳಿ. ಇಷ್ಟಾದರೆ ದೇವಸ್ಥಾನದಲ್ಲಿ ನೀಡುವ ಪುಳಿಯೋಗರೆಯಂತೆಯೇ ರುಚಿ ನೀಡುವ ಪುಳಿಯೋಗರೆ ಸವಿಯಬಹುದು.



Click it and Unblock the Notifications