Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಾಲಯದಲ್ಲಿ ನೀಡುವ ಸಿಹಿ ಪೊಂಗಲ್ ಪ್ರಸಾದ: ಮನೆಯಲ್ಲೇ ಸವಿದು ನೋಡಿ!
ನೀವು ಯಾವುದಾದ್ರು ದೇವಾಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ ನಿಮಗೆ ನೀಡುವ ಪ್ರಸಾದದ ರುಚಿ ಒಂದಿಷ್ಟು ಸಮಯ ನಿಮಗೆ ಕಾಡುತ್ತದೆ. ಅದ್ರಲ್ಲೂ ಕೆಲವೊಂದು ದೇವಾಲಯದಲ್ಲಿ ನೀಡುವ ಪ್ರಸಾದದ ರುಚಿ ನಿಮ್ಮ ನೆನಪಿನಲ್ಲಿ ಹಾಗೆ ಉಳಿದುಬಿಡುತ್ತದೆ. ಬಹುತೇಕ ದೇವಾಲಯದಲ್ಲಿ ರುಚಿ ರುಚಿಯ ಪುಳಿಯೋಗರೆ, ಪೊಂಗಲ್, ಕೇಸರಿಬಾತ್, ಅವಲಕ್ಕಿ, ಚಿತ್ರಾನ್ನ ಹೀಗೆ ಹಲವು ರುಚಿ ರುಚಿಯ ಪ್ರಸಾದ ನೀಡುತ್ತಾರೆ.
ಇಂತಹ ಪ್ರಸಾದಗಳ ಪೈಕಿ ಹಲವು ಎಲ್ಲರಿಗೂ ಇಷ್ಟವಾಗುವ ತಿಂಡಿಗಳಿವೆ. ಕೆಲವರು ದೇವಾಲಯಗಳಿಗೆ ತೆರಳುವುದೇ ಈ ಪ್ರಸಾದ ಸವಿಯಲು. ಅದ್ರಲ್ಲೂ ಬಹುತೇಕರಿಗೆ ದೇವಾಲಯದಲ್ಲಿ ನೀಡುವಂತಹ ಪೊಂಗಲ್ ಅಂದರೆ ಬಹಳ ಇಷ್ಟವಾಗುತ್ತೆ. ನಾವಿಂದು ಈ ವಿಶೇಷ ಪೊಂಗಲ್ ಮಾಡುವ ಕುರಿತು ತಿಳಿದುಕೊಳ್ಳೋಣ.

ನೀವು ಸಹ ಪೊಂಗಲ್ ಸವಿಯೋಕೆ ಬಹಳ ಇಷ್ಟಪಡುವ ಮಂದಿ ಆಗಿರಬಹುದು. ಹಾಗೆ ಈ ಪೊಂಗಲ್ ವಿವಿಧ ರುಚಿಯಲ್ಲಿ ಮಾಡಿ ಸವಿಯಬಹುದು. ಇಂತಹ ಹಲವು ರುಚಿಯ ಹಾಗೆ ಬಗೆಯ ಪೊಂಗಲ್ ಬಾಯಲ್ಲಿ ನೀರು ತರಿಸಬಹುದು. ಸದ್ಯ ನಾವಿಂದು ದೇವಾಲಯದಲ್ಲಿ ನೀವು ಸವಿದಿರುವ ಸಿಹಿ ಪೊಂಗಲ್ ಮನೆಯಲ್ಲಿ ಮಾಡುವ ಕುರಿತು ತಿಳಿದುಕೊಳ್ಳೋಣ.
ಸಿಹಿ ಪೊಂಗಲ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸಿಹಿ ಪೊಂಗಲ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ - 1 ಕಪ್, ಹೆಸರು ಬೇಳೆ - 1/2 ಕಪ್
- ಹಾಲು - 1/2 ಕಪ್
- ನೀರು - 4 ಕಪ್
- ತುಪ್ಪ - 1 ಟೀಸ್ಪೂನ್
- ಬೆಲ್ಲ ಪುಡಿ - 1 1/2 ಕಪ್
- ಏಲಕ್ಕಿ ಪುಡಿ - 1/2 ಟೀಸ್ಪೂನ್
- ತುಪ್ಪ - 2 ಟೀಸ್ಪೂನ್
- ಗೋಡಂಬಿ - 10
- ಒಣ ದ್ರಾಕ್ಷಿ - 2 ಟೀಸ್ಪೂನ್
- ತೆಂಗಿನಕಾಯಿ (ಕತ್ತರಿಸಿದ) - 1 ಟೀಸ್ಪೂನ್
ಸಿಹಿ ಪೊಂಗಲ್ ಮಾಡುವ ವಿಧಾನವೇನು?
ಮೊದಲು ಅಳತೆ ಕಪ್‌ನಲ್ಲಿ 1 ಕಪ್ ಅಕ್ಕಿ ಹಾಗೂ ಅರ್ಧ ಕಪ್ ಹೆಸರು ಬೇಳೆ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಅಕ್ಕಿ ಹೆಸರು ಬೇಳೆ ಹಾಕಿಕೊಂಡು ಅಳತೆ ಕಪ್‌ನಲ್ಲಿ ಅರ್ಧ ಕಪ್ ಹಾಲು ಹಾಕಿಕೊಂಡು 4 ಕಪ್ ನೀರು ಹಾಕಿಕೊಳ್ಳಿ. ಹಾಗೆ 2 ಸ್ಪೂನ್ ತುಪ್ಪ ಸಹ ಹಾಕಿಕೊಳ್ಳಿ.
ಈಗ ಮುಚ್ಚಳ ಮುಚ್ಚಿ 3 ರಿಂದ4 ಸೀಟಿ ಹೊಡೆಯಲು ಬಿಡಿ. ಗ್ಯಾಸ್ ಸಂಪೂರ್ಣ ಹೋದ ಬಳಿಕ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ಅಳತೆ ಕಪ್‌ನಲ್ಲಿ ಒಂದೂವರೆ ಕಪ್ ಬೆಲ್ಲದ ಪುಡಿ ಹಾಕಿ. ಇದಕ್ಕೆ 1 ಕಪ್ ನೀರು ಹಾಕಿ ಬೆಲ್ಲ ಕರಗಲು ಬಿಡಿ.
ಬೆಲ್ಲ ಕರಗಿದ ಬಳಿಕ ಬೆಲ್ಲದ ನೀರನ್ನು ಕುಕ್ಕರ್‌ನಲ್ಲಿನ ಅನ್ನ ಬೇಳೆಯೊಂದಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಇಟ್ಟು ಈ ರೀತಿ ಮಾಡಿ. ಈಗ ಅರ್ಧ ಸ್ಪೂನ್ ಏಲಕ್ಕಿ ಪುಡಿ ಹಾಕಿ ಬೆರೆಸಿಕೊಳ್ಳಿ. ಹಾಗೆ ಒಲೆ ಆಫ್ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ದ್ರಾಕ್ಷಿ, ಲವಂಗ ಹಾಕಿ ಫ್ರೈ ಮಾಡಿಕೊಳ್ಳಿ. ಹಾಗೆ ಹಸಿ ತೆಂಗಿನಕಾಯಿ ತುರಿ ಸಹ ಹಾಕಿ ಒಲೆ ಆಫ್ ಮಾಡಿಕೊಳ್ಳಿ. ನಂತರ ಇದನ್ನು ಪೊಂಗಲ್‌ಗೆ ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಇಡಿ. ನಂತರ ಇದನ್ನು ಸವಿಯಲು ನೀಡಬಹುದು. ಇದರ ರುಚಿ ಒಮ್ಮೆ ಸವಿದರೆ ಮತ್ತ ಮತ್ತೆ ಮಾಡಿ ಸವಿಯುತ್ತೀರಿ.



Click it and Unblock the Notifications