Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಾಲಯ ಪ್ರಸಾದದಂತೆ ಮಾಡಿ ಖಾರ ಅವಲಕ್ಕಿ: 5 ನಿಮಿಷವೂ ಹಿಡಿಯೋದಿಲ್ಲ!
ನಿತ್ಯ ಬೆಳಗ್ಗೆ ಎದ್ದಾಗ ನೀವು ಈ ದಿನ ಯಾವ ತಿಂಡಿ ಮಾಡಬೇಕು ಎಂಬ ಗೊಂದಲದಿಂದ ದಿನ ಆರಂಭಿಸುತ್ತೀರಿ. ಕೆಲವೊಮ್ಮೆ ಹಿಂದಿನ ದಿನವೇ ಈ ಕುರಿತ ನಿರ್ಧಾರ ಮಾಡಿರಬಹುದು. ಹಾಗೆ ದಿನದ ಗಡಿಬಿಡಿಯ ಸಮಯದಲ್ಲಿ ನೀವು ಬಹುಬೇಗ ಮುಗಿಸಬಹುದಾದ ತಿಂಡಿಯನ್ನು ಮಾಡಲು ಮುಂದಾಗುತ್ತೀರಿ. ಹಾಗೆ ಇಂತಹ ಸಮಯದಲ್ಲಿ ನೀವು ಸುಲಭವಾಗಿ ಅವಲಕ್ಕಿಯಿಂದ ಮಾಡುವ ಹಲವು ಖಾದ್ಯಗಳ ಮಾಡಿ ಸವಿಯಲು ಮುಂದಾಗುವುದು ನೋಡಬಹುದು.
ಅವಲಕ್ಕಿಯಿಂದ ರುಚಿ ರುಚಿಯಾದ ತಿಂಡಿಗಳ ಮಾಡಬಹುದು, ಅದ್ರಲ್ಲೂ ಒಗ್ಗರಣೆ ಅವಲಕ್ಕಿ, ಹಾಗೆ ಗೊಜ್ಜವಲಕ್ಕಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ನೋಡಬಹುದು. ಸಾಮಾನ್ಯವಾಗಿ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದಾದ ತಿಂಡಿಗಳಲ್ಲಿ ಈ ಅವಲಕ್ಕಿ ರೆಸಿಪಿಗಳು ಸಹ ಇವೆ. ನಾವಿಂದು ಸುಲಭವಾಗಿ ಹಾಗೆ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವಂತಹ ಅವಲಕ್ಕಿ ತಿಂಡಿ ಕುರಿತು ತಿಳಿಯೋಣ.
ಅದ್ರಲ್ಲೂ ಸುಲಭವಾಗಿ ಮಾಡಬಹುದಾದ ಖಾರ ಅವಲಕ್ಕಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಹಜ. ಹಾಗೆ ಇದರ ರುಚಿ ಒಮ್ಮೆ ಸವಿದರೆ ಪದೇ ಪದೇ ಮಾಡಿ ಸವಿಯುತ್ತೀರಿ. ಹಲವು ಕಡೆಗಳಲ್ಲಿ ಶುಭ ಕಾರ್ಯದ ಸಂದರ್ಭದಲ್ಲಿ ಬೆಳಗ್ಗೆ ತಿಂಡಿಗೆ ಈ ರೀತಿಯ ಅವಲಕ್ಕಿ ಮಾಡಿ ಸವಿಯಲು ನೀಡುತ್ತಾರೆ. ಅಲ್ಲದೆ ಹಲವು ದೇವಾಲಯಗಳಲ್ಲೂ ಕೂಡ ಈ ರೀತಿ ವಿಶೇಷ ರುಚಿಯ ಅವಲಕ್ಕಿ ಪ್ರಸಾದ ನೀವು ಸವಿದಿರಬಹುದು.
ಹಾಗಾದ್ರೆ ಮನೆಯಲ್ಲಿಯೇ ಈ ಖಾರ ಅವಲಕ್ಕಿ ಮಾಡುವುದು ಹೇಗೆ? ಮಾಡಲು ಯಾವೆಲ್ಲ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನ ಇಲ್ಲಿ ತಿಳಿದುಕೊಳ್ಳೋಣ.
ಖಾರ ಅವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
- ಅವಲಕ್ಕಿ
- ಒಣ ಮೆಣಸು
- ಕೊತ್ತಂಬರಿ ಬೀಜ
- ಸಾಂಬಾರ್ ಪುಡಿ
- ಜೀರಿಗೆ
- ಸಾಸಿವೆ
- ಉದ್ದಿನ ಬೇಳೆ
- ಬೆಳ್ಳುಳ್ಳಿ
- ತೆಂಗಿನಕಾಯಿ ತುರಿ
- ಬೆಲ್ಲ
- ಅರಶಿಣ
- ಕರಿಬೇವು
- ಎಣ್ಣೆ
- ಉಪ್ಪು
- ಖಾರದ ಪುಡಿ
ಖಾರ ಅವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಒಡೆದ ಕೊತ್ತಂಬರಿ ಬೀಜ, ಉದ್ದಿನ ಬೇಳೆ, ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಒಂದಾದ ನಂತರ ಒಂದರಂತೆ ಹಾಕಿ ಪ್ರೈ ಮಾಡಿ. ಈಗ ಅರಶಿಣ, ಸಾಂಬಾರ್ ಪುಡಿ ಹಾಕಿ ಗ್ಯಾಸ್ ಆಫ್ ಮಾಡಿಕೊಂಡು ಮಿಕ್ಸ್ ಮಾಡುತ್ತಾ ಇರಿ.
ಈ ಮಸಾಲೆಗಳನ್ನು ಕಪ್ಪಾಗಲು ಬಿಡಬೇಡಿ. ಹೀಗಾಗಿ ಒಲೆ ಆಫ್ ಮಾಡಿಕೊಂಡು ಮಿಕ್ಸ್ ಮಾಡಿ. ಈಗ ಈ ಒಗ್ಗರಣೆಯನ್ನು ದೊಡ್ಡ ಬೌಲ್‌ಗೆ ಹಾಕಿಕೊಳ್ಳಿ. ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಇದಕ್ಕೆ ತೆಂಗಿನಕಾಯಿ ತುರಿ, ಚೂರು ಬೆಲ್ಲ, ಉಪ್ಪು ಹಾಕಿ ಮಿಕ್ಸ್ ಮಾಡಬೇಕು. ಈ ಸಮಯದಲ್ಲಿ ಖಾರ ಬೇಕಿದ್ದರೆ ಖಾರದ ಪುಡಿ ಸಹ ಮಿಕ್ಸ್ ಮಾಡಿಕೊಳ್ಳಿ.
ಈಗ ಇದಕ್ಕೆ ಜರಡಿ ಹಿಡಿದುಕೊಂಡಿರುವ ಅವಲಕ್ಕಿಯನ್ನು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಸಾಲೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದನ ಅವಲಕ್ಕಿ ಸಿದ್ದವಾಗುತ್ತೆ. ಬೆಳಗ್ಗೆ ತಿಂಡಿಗೆ ಸೇರಿ ಸಂಜೆ ಸ್ನ್ಯಾಕ್ಸ್‌ಗೂ ಸಹ ಇದನ್ನು ಸವಿಯಬಹುದು. ಹೀಗಾಗಿ ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
