Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಗಿ ದೋಸೆ ಹೀಗೆ ಮಾಡಿದರೆ ಇದೆಯಲ್ಲಾ ಇದರ ರುಚಿ ಯಾವ ಮಸಾಲೆ ದೋಸೆಗೂ ಕಡಿಮೆ ಇರಲ್ಲ
ರಾಗಿ ದೋಸೆ ತುಂಬಾ ಜನ ಇಷ್ಟಪಡಲ್ಲ, ಆದರೆ ಅವರು ನಿಜವಾಗಲೂ ಟೇಸ್ಟಿ ರಾಗಿ ದೋಸೆ ತಿಂದಿರದ ಕಾರಣ ಅವರು ರಾಗಿ ದೋಸೆ ಎಂದರೆ ಬೇಡ ಅಂತಾರೆ, ಆದರೆ ರಾಗಿ ದೋಸೆ ಸರಿಯಾದ ಹದದಲ್ಲಿ ಮಾಡಿದರೆ ಇದೆಯಲ್ಲಾ ಮಸಾಲೆ ದೋಸೆಗಿಂತ ರುಚಿಯಾಗಿರುತ್ತೆ ಅಲ್ಲದೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮನೆಯಲ್ಲಿ ಮಧುಮೇಹಿಗಳಿದ್ದರೆ ಅವರು ಕೂಡ ಈ ರುಚಿ ರುಚಿ ದೋಸೆಯನ್ನು ಯಾವುದೇ ಆತಂಕವಿಲ್ಲದೆ ಸವಿಯಬಹುದು. ಇನ್ನು ಈ ರಾಗಿ ದೋಸೆ ಇಟ್ಟು ಕೂಡ ನೀವು ಇನ್‌ಸ್ಟಾಂಟ್ ಆಗಿ ತಯಾರಿಸಬಹುದು. ರಾತ್ರಿಯೇ ರುಬ್ಬಿ ಇಡಬೇಕು ಅಂತೇನೂ ಇಲ್ಲ ಯಾವಾಗ ತಿನ್ನಬೇಕು ಅನಿಸುತ್ತೋ ಆವಾಗ ರೆಡಿ ಮಾಡಬಹುದು.

ಈ ರಾಗಿದೋಸೆ ಈರುಳ್ಳಿಯನ್ನು ತುಂಬಾ ಚಿಕ್ಕದಾಗ ಹೆಚ್ಚಿ ಸೇರಿಸಬೇಕು. ಜೊತೆಗೆ ಇನ್ನು ಕೆಲವು ಸಾಮಗ್ರಿ ಸೇರಿಸಬೇಕು, ಅಷ್ಟು ಮಾಡಿದರೆ ರಾಗಿ ದೋಸೆ ಅಷ್ಟೊಂದು ರುಚಿಯಾಗಿರುತ್ತೆ, ಇದನ್ನು ಪ್ರತಿದಿನ ಮಾಡಿ ತಿಂದರೂ ಬೋರ್ ಆಗಲ್ಲ, ಹಾಗಾಗಿ ಮಧುಮೇಹಿಗಳಿಗಂತೂ ಸೂಪರ್ ಫುಡ್, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
1ಕಪ್ ರಾಗಿ ಹಿಟ್ಟು
1 ಕಪ್ ರವೆ
1/2 ಕಪ್‌ಅಕ್ಕಿ ಹಿಟ್ಟು
1/ 2 ಕಪ್ ಮೊಸರು
ಶುಂಠಿ ಪೇಸ್ಟ್ ( ನೀವೇ ಮಾಡಿರುವ ಪೇಸ್ಟ್, ಇಲ್ಲದಿದ್ದರೆ ಶುಂಠಿಯನ್ನು ತುರಿದು
ಹಾಕಬಹುದು)
ಹಸಿ ಮೆಣಸು 1-2
1 ಈರುಳ್ಳಿ
ಜೀರಿಗೆ
ಕಾಳು ಮೆಣಸಿನ ಪುಡಿ 1/2 ಚಮಚ(ತರಿತರಿ ಪುಡಿ)
ಸ್ವಲ್ಪ ಕೊತ್ತಂಬರಿ ಸೊಪ್ಪು
ಎಣ್ಣೆ ಅಥವಾ ತುಪ್ಪ
ಮಾಡುವ ವಿಧಾನ:
- ಒಂದು ಬೌಲ್‌ಗೆ ರಾಗಿ, 1ಕಪ್ ರವೆ, ಅಕ್ಕಿ ಹಿಟ್ಟು ಎಲ್ಲಾ ಹಾಕಿ ಮಿಕ್ಸ್ ಮಾಡಿ
- ಈಗ ಮೊಸರು,ಶುಂಠಿ, ಹಸಿ ಮೆಣಸು, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಈರುಳ್ಳಿ, 1ಚಮಚ ಜೀರಿಗೆ, ಸ್ವಲ್ಪ ಕರಿ ಮೆಣಸಿನ ಪುಡಿ, ಸ್ವಲ್ಪ ಉಪ್ಪು ಸೇರಿಸಿ
- ಈಗ ದೋಸೆ ಹಿಟ್ಟು ಹದಕ್ಕೆ ಎಷ್ಟು ನೀರು ಬೇಕೋ ಅಷ್ಟು ನೀರು ಸೇರಿಸಿ
- ಈಗ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ
- ದೋಸೆ ಹಿಟ್ಟು ಗಟ್ಟಿಯಾಗಿದ್ದರೆ ಇನ್ನು ಸ್ವಲ್ಪ ನೀರು ಸೇರಿಸಬಹುದು
- ಈಗ ದೋಸೆಗೆ ಎಣ್ಣೆ ಸವರಿ ದೋಸೆ ಹಿಟ್ಟು ಹಾಕಿ , ಅದರ ಮೇಲ್ಭಾಗದಲ್ಲಿ ತುಪ್ಪ ಹಾಕಿ ತವಾ ಬಾಯಿ ಮುಚ್ಚಿ
- ನಂತರ ದೋಸೆ ಮಗುಚಿ ಹಾಕಿ.
ರುಚಿ ರುಚಿಯಾದ ಖಾರ ಚಟ್ನಿ ಜೊತೆ ಸವಿಯಿರಿ.
ಸಲಹೆ: ಬರಿ ರಾಗಿ ಹಿಟ್ಟಿನಿಂದ ದೋಸೆ ಮಾಡಿದರೆ ರುಚಿ ಅನಿಸಲ್ಲ, ಆದರೆ ಈ ರೀತಿ ನೀವು ಮಾಡಿ ತಿಂದರೆ ಇದೆಯಲ್ಲಾ ಒಂದು ದೋಸೆ ಹೆಚ್ಚೇ ತಿನ್ನುತ್ತೇವೆ, ಅಲ್ಲದೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇನ್ನು ನೀವು ಹೆಚ್ಚು ಜನರಿಗೆ ಮಾಡುವುದಾರೆ ಸಾಮಗ್ರಿ ಸ್ವಲ್ಪ ಅಧಿಕ ಹಾಕಿ,
ಕಡಿಮೆ ಬೇಕಿದ್ದರೆ ಕಡಿಮೆ ಹಾಕಿ
ಅಲ್ಲದೆ ಈ ದೋಸೆ ಹಿಟ್ಟು ತವಾಗೆ ಅಂಟಿಕೊಳ್ಳುವುದಿಲ್ಲ, ಹಾಗಾಗಿ ದೋಸೆ ಮಾಡುವುದು
ಸುಲಭ ತಿನ್ನುವುದು ಕೂಡ ರುಚಿ.
ಇನ್ನು ಇದಕ್ಕೆ ಈರುಳ್ಳಿ, ಜೀರಗೆ , ಶುಂಠಿ, ಕಾಳು ಮೆಣಸು ಎಲ್ಲಾ ಹಾಕಿರುವುದರಿಂದ ದೋಸೆ ರುಚಿ ತುಂಬಾ ಚೆನ್ನಾಗಿ ಬರುತ್ತದೆ. ಇದನ್ನು ಕ್ರಿಸ್ಪಿಯಾಗಿಕೂಡ ಮಾಡಬಹುದು.



Click it and Unblock the Notifications