Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ರುಚಿ ಬ್ರೇಕ್‌ಫಾಸ್ಟ್: ಸ್ವಾದಿಷ್ಟ ಮಸಾಲೆ ಇಡ್ಲಿ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಹಲವು ರೀತಿಯ ತಿಂಡಿ ಮಾಡಿ ಸವಿದಿರುತ್ತೀರಿ, ಅದರಲ್ಲೂ ಇಡ್ಲಿ, ದೋಸೆ ಎಲ್ಲರ ಮನೆಯ ಫೇವರಿಟ್ ತಿಂಡಿ ಆಗಿರುತ್ತೆ. ಇಡ್ಲಿ ಅಂದ್ರೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ಕಡಿಮೆ ಎಣ್ಣೆ, ಕಡಿಮೆ ವಸ್ತು, ಕಡಿಮೆ ಸಮಯ ಹಿಡಿಯುವುದರಿಂದ ಎಲ್ಲರ ಮನೆಯಲ್ಲೂ ಬೆಳಗ್ಗೆ ಈ ತಿಂಡಿ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಇಡ್ಲಿಯಲ್ಲಿ ಎಷ್ಟೋ ಬಗೆಯನ್ನು ನಾವು ಕೇಳಿದ್ದರೂ ಮನೆಯಲ್ಲಿ ಮಾತ್ರ ಒಂದೇ ಶೈಲಿಯಲ್ಲಿ ಮಾಡುತ್ತಿರುತ್ತೇವೆ.
ಇಡ್ಲಿಯಲ್ಲಿ ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ರವೆ ಇಡ್ಲಿ, ಹೀಗೆ ಹತ್ತಾರು ಬಗೆಯ ಇಡ್ಲಿ ನೀವು ಸವಿದಿರುತ್ತೀರಿ. ಇದರಲ್ಲೊಂದು ವಿಶೇಷ ಇಡ್ಲಿ ಬಗೆ ಅಂದ್ರೆ ಅದು ಮಸಾಲೆ ಇಡ್ಲಿ, ಹೌದು ಮಸಾಲೆ ದೋಸೆ ಅಂತೆಯೇ ಈ ಮಸಾಲೆ ಇಡ್ಲಿ ಕೂಡ ಅಷ್ಟೇ ರುಚಿಕರ ಹಾಗೂ ಫೇಮಸ್ ಖಾದ್ಯ. ಒಂದಿಷ್ಟು ಮಸಾಲೆಗಳ ಬೆರೆಸಿದಾಗ ಇಡ್ಲಿ ಕೂಡ ಬಾಯಲ್ಲಿ ನೀರು ತರಿಸುತ್ತೆ.

ಮಸಾಲೆ ಇಡ್ಲಿ ನಾವು ಹೋಟೆಲ್‌ನಲ್ಲಿ ಸವಿದಿರಬಹುದು. ಒಂದಿಷ್ಟು ಮಸಾಲೆ ವಸ್ತು ನಾಲಗೆ ಮೇಲೆ ಬಿದ್ದಾಗ ಅದರ ರುಚಿ ದುಪ್ಪಟ್ಟು ಮಾಡುತ್ತದೆ. ನಾವಿಂದು ಸುಲಭವಾಗಿ ಮನೆಯಲ್ಲಿ ಮಸಾಲೆ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮಸಾಲೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು? ಎಂಬ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಉದ್ದಿನ ಬೇಳೆ
- ಕ್ಯಾರೆಟ್
- ಈರುಳ್ಳಿ
- ಕೊತ್ತಂಬರಿ ಸೊಪ್ಪ
- ಜೀರಿಗೆ
- ಹಸಿ ಮೆಣಸು
- ಕರಿಬೇವು
- ಉಪ್ಪು
ಮಸಾಲೆ ಇಡ್ಲಿ ಮಾಡುವುದು ಹೇಗೆ?
ಮೊದಲಿಗೆ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. 4 ಗಂಟೆಯ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎರಡನ್ನೂ ಬೇರೆ ಬೇರೆಯಾಗಿ ರುಬ್ಬಿಕೊಳ್ಳಬೇಕು. ರುಬ್ಬುವಾಗ ಹೆಚ್ಚು ನೀರು ಹಾಕಿಕೊಳ್ಳಬೇಡಿ. ಕಡಿಮೆ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿ ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ನಂತರ ಒಂದು ಸುತ್ತು ಮಿಕ್ಸ್ ಮಾಡಿಕೊಂಡು ಮುಚ್ಚಿ ಇಟ್ಟುಕೊಳ್ಳಿ.
ಹಿಟ್ಟನ್ನು ಒಂದು ರಾತ್ರಿ ಪೂರ್ತಿ ಬಿಡಬೇಕು. ಮಾರನೆ ದಿನ ಬೆಳಗ್ಗೆ ಇದಕ್ಕೆ ತುರಿದಿರುವ ಕ್ಯಾರೆಟ್, ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಕೊತ್ತಂಬರಿ, ಜೀರಿಗೆ, ಹಸಿ ಮೆಣಸು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಕೈ ಯಿಂದಲೇ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ಮಸಾಲೆ ಇಡ್ಲಿಗೆ ಹಿಟ್ಟು ರೆಡಿಯಾಗುತ್ತದೆ, ಈಗ ಇಡ್ಲಿ ಅಚ್ಚು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಳ್ಳಿ, ನಂತರ ಎಲ್ಲಾ ಅಚ್ಚುಗಳಿಗೂ ಹಿಟ್ಟು ಹಾಕಿಕೊಂಡು ಇಡ್ಲಿ ಕುಕ್ಕರ್‌ನಲ್ಲಿ ಇಟ್ಟು ಬೇಯಲು ಬಿಡಿ. ಸುಮಾರು 20 ನಿಮಿಷ ಬೇಯಲು ಬಿಟ್ಟರೆ ಸಾಕಾಗುತ್ತದೆ. ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಈ ಇಡ್ಲಿಯನ್ನು ಬಿಡಿಸಿ ಒಂದು ಪಾತ್ರೆಗೆ ಹಾಕಿಕೊಂಡು ಸವಿಯಲು ನೀಡಿ.
ಇಡ್ಲಿ ಜೊತೆಗೆ ತೆಂಗಿನಕಾಯಿ ಚಟ್ನಿ ಬಹಳ ರುಚಿ ನೀಡುತ್ತೆ. ಹಾಗೆ ಪುದಿನ ಸೊಪ್ಪಿನ ಚಟ್ನಿ ಕೂಡ ಉತ್ತಮ ರುಚಿ ನೀಡಲಿದೆ. ನೀವು ಸಹ ಒಮ್ಮೆ ಈ ರೀತಿಯ ಮಸಾಲೆ ಇಡ್ಲಿ ಸವಿದು ನೋಡಿ.



Click it and Unblock the Notifications