ಮಳೆಗಾಲಕ್ಕೆ ಬೆಸ್ಟ್ ಚಿಕನ್ ಗಸಿ ಮಾಡೋದು ಹೇಗೆ? ಬಾಯಲ್ಲಿ ನೀರು ತರಿಸುವ ರೆಸಿಪಿ!

Posted By:

ನಾನ್‌ವೆಜ್ ಪ್ರಿಯರಿಗೆ ಮಾಂಸದೂಟ ಅಂದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಅದ್ರಲ್ಲೂ ಚಿಕನ್‌ನಿಂದ ಮಾಡುವಂತಹ ವಿಶೇಷ ಬಗೆಯ ಖಾದ್ಯಗಳ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಚಿಕನ್‌ನಿಂದ ಮಾಡುವ ಹಲವು ಬಗೆಯ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಚಿಕನ್ ಸಾರು, ಚಿಕನ್ ಸುಕ್ಕ, ಚಿಕನ್ ಬಿರಿಯಾನಿ, ಚಿಕನ್ ಗ್ರೇವಿ, ಚಿಕನ್ ಫ್ರೈ, ಸೇರಿ ಹೋಟೆಲ್‌ಗಳಲ್ಲಿ ಮಾಡುವ ಹತ್ತು ಹಲವು ಬಗೆಯ ಚಿಕನ್ ಖಾದ್ಯಗಳು ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಚಿತ.

ಚಿಕನ್ ಪ್ರಿಯರು ಮನೆಯಲ್ಲಿ ಹೆಚ್ಚಾಗಿ ಫ್ರೈ ಇಲ್ಲವೆ ಸಾರು ಮಾಡಿ ಸವಿಯುವುದು ನೋಡಬಹುದು. ಊಟದ ಜೊತೆಗೆ ಹಾಗೆ ಯಾವುದೇ ತಿಂಡಿಗೆ ಚಿಕನ್‌ನಿಂದ ಮಾಡುವ ಎಲ್ಲಾ ಖಾದ್ಯಗಳು ರುಚಿ ನೀಡಲಿವೆ. ಹಾಗಾದ್ರೆ ನಾನ್‌ ವೆಜ್ ಪ್ರಿಯರಿಗೆ ಇಷ್ಟವಾಗುವಂತಹ ಚಿಕಬ್ ಗಸಿ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ.

How To Make tasty Chicken Gasi Recipe In Kannada

ಚಿಕನ್ ಗಸಿ ಊಟದ ಜೊತೆಗೆ ಹಾಗೆ ತಿಂಡಿಯೊಂದಿಗೆ ಅದ್ಭುತ ರುಚಿ ನೀಡಲಿದೆ. ಈ ಗಸಿ ಸುವಾಸನೆಯು ಬಾಯಲ್ಲಿ ನೀರು ತರಿಸಲಿದೆ. ಹಾಗಾದ್ರೆ ಈ ಚಿಕನ್ ಗಸಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಚಿಕನ್ ಗಸಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?

  • ಚಿಕನ್- 1 ಕೆ.ಜಿ
  • ಅರಶಿಣ
  • ತೆಂಗಿನಕಾಯಿ
  • ಕೊತ್ತಂಬರಿ ಕಾಳು
  • ಕಾಳು ಮೆಣಸು
  • ಎಣ್ಣೆ
  • ತುಪ್ಪ
  • ಚಕ್ಕೆ
  • ಏಲಕ್ಕಿ
  • ಬೆಳ್ಳುಳ್ಳಿ
  • ಈರುಳ್ಳಿ
  • ಕರಿಬೇವು
  • ಸಾಸಿವೆ
  • ಉಪ್ಪು

ಚಿಕನ್ ಗಸಿ ಮಾಡುವ ವಿಧಾನ ಇಲ್ಲಿದೆ

ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಒಣ ಮೆಣಸು ಹಾಕಿ ಹುರಿದುಕೊಳ್ಳಿ. ಮೆಣಸು ಹುರಿದು ತೆಗೆದಿಟ್ಟುಕೊಂಡು ಮತ್ತೆ ಬಾಣಲೆಗೆ ಎಣ್ಣೆ ಹಾಕಿ, ಕಾಳು ಮೆಣಸು, ಕೊತ್ತಂಬರಿ ಕಾಳು, ಚಕ್ಕೆ, ಏಲಕ್ಕಿ ಹಾಕಿಕೊಂಡು ಹುರಿದುಕೊಳ್ಳಿ. ನಂತರ ಈ ವಸ್ತುಗಳನ್ನು ಕೂಡ ಎತ್ತಿಟ್ಟುಕೊಳ್ಳಿ.

ಈಗ ಮತ್ತೆ ಬಾಣಲೆಗೆ ಈರುಳ್ಳಿ, ಬೆಳ್ಳುಳ್ಳಿ, ಕರಿಬೇವು ಸಹ ಹಾಕಿಕೊಂಡು ಎಣ್ಣೆಯ ಜೊತೆಗೆ ಫ್ರೈ ಮಾಡಿಕೊಳ್ಳಿ. ಈಗ ಎಲ್ಲಾ ಪದಾರ್ಥಗಳನ್ನು ಕೂಡ ಸ್ವಲ್ಪ ತಣ್ಣಗಾಗಲು ಬಿಟ್ಟು ಎಲ್ಲಾ ವಸ್ತುಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಹಾಗೆ ಬಾಣಲೆಯಲ್ಲಿ ಮತ್ತೆ ತೆಂಗಿನಕಾಯಿ ತುರಿ ಹಾಕಿ ಮತ್ತೆ ಹುರಿದುಕೊಳ್ಳಿ. 3 ನಿಮಿಷ ಹುರಿದುಕೊಂಡು ಅದನ್ನು ಕೂಡ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ.

ತೆಂಗಿನ ತುರಿಯನ್ನು ಅನಂತರ ರುಬ್ಬಿಕೊಂಡರೂ ನಡೆಯಲಿದೆ. ಮಿಕ್ಸಿ ಜಾರ್‌ಗೆ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಬೇಕು. ಎಲ್ಲಾ ಪದಾರ್ಥಗಳ ರುಬ್ಬಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈ ಒಲೆ ಮೇಲೆ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಹಾಗೆ ಇದಕ್ಕೆ 1 ಸ್ಪೂನ್ ತುಪ್ಪು ಸಹ ಹಾಕಿ. ಬಳಿಕ ಸಾಸಿವೆ, ಕರಿಬೇವು, ಹೆಚ್ಚಿರುವ ಈರುಳ್ಳಿ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.

2 ನಿಮಿಷಗಳ ಬಳಿಕ ಇದಕ್ಕೆ ತೊಳೆದುಕೊಂಡಿರುವ ಚಿಕನ್ ಅನ್ನು ಸಹ ಹಾಕಿಕೊಂಡು ಬೇಯಿಸಿಕೊಳ್ಳಿ. ಇದಕ್ಕೆ ಅರಶಿಣ ಪುಡಿ, ಉಪ್ಪು ಹಾಕಿ ಬೇಯಲು ಬಿಡಿ. 5 ನಿಮಿಷ ಬೇಯಲು ಬಿಟ್ಟು ಅನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಇದಕ್ಕೆ ಹಾಕಿ ಜಾರ್‌ಗೆ ನೀರು ಹಾಕಿ ತೊಳೆದು ಆ ನೀರನ್ನು ಕೂಡ ಇದಕ್ಕೆ ಹಾಕಿಕೊಳ್ಳಿ.

ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಬರಲು ಬಿಡಬೇಕು. ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡರೆ ನಿಮ್ಮ ಮುಂದೆ ಚಿಕನ್ ಗಸಿ ರೆಡಿಯಾಗುತ್ತದೆ. ಗಸಿ ದಪ್ಪವಾಗಿರಲಿ, ಬಹಳ ತೆಳುವಾಗಿ ಮಾಡಬೇಡಿ. ಇದನ್ನು ಊಟಕ್ಕೆ, ತಿಂಡಿಯ ಜೊತೆಗೆ ಸವಿಯಲು ಬಡಿಸಿದರೆ ರುಚಿಗೆ ಫಿದಾ ಆಗುತ್ತಾರೆ.

[ of 5 - Users]
Story first published: Thursday, June 26, 2025, 14:30 [IST]
X
Desktop Bottom Promotion