Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ತಂದೂರಿ ಫ್ರೈಡ್ ರೈಸ್ ಎಂದಾದ್ರು ಸವಿದಿದ್ದೀರಾ? ಮಾಡೋದು ಹೇಗೆ?
ನೀವು ಬೆಳಗ್ಗೆ ತಿಂಡಿಗೆ ಹಾಗೆ ಊಟದ ಸಮಯಕ್ಕೆ ಯಾವುದಾದರು ಒಂದು ರೈಸ್‌ನಿಂದ ಮಾಡಿದ ಖಾದ್ಯ ಸವಿಯಲು ಮುಂದಾಗಬಹುದು. ಅದರಲ್ಲೂ ಬೆಳಗ್ಗೆ ತಿಂಡಿಯ ಸಮಯಕ್ಕೆ ಅದ್ಭುತ ರುಚಿಯ ಯಾವುದಾದರು ರೈಸ್‌ನಿಂದ ಮಾಡಿದ ಖಾದ್ಯ ಇಷ್ಟಪಟ್ಟು ಮಾಡಲು ಮುಂದಾಗುತ್ತೀರಿ. ಅಂತಹ ಹಲವು ಖಾದ್ಯಗಳು ನಿಮ್ಮ ನೆನಪಿಗೆ ಬರಬಹುದು. ಆದ್ರೆ ನಾವಿಂದು ಹೊಸ ರೀತಿಯಲ್ಲಿ ನೀವು ಎಂದಿಗೂ ಮಾಡಿದರದಂತಹ ಖಾದ್ಯ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಅದರಲ್ಲ ನಾವಿಂದು ತಂದೂರಿ ಫ್ರೈಡ್ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಬೆಳಗ್ಗೆ ಸಮಯದಲ್ಲಿ ಈ ತಂದೂರಿ ಫ್ರೈಡ್ ರೈಸ್ ಮಾಡಿ ಸವಿಯುವುದು ಬಹಳ ರುಚಿ ನೀಡಲಿದೆ. ಹಾಗಾದ್ರೆ ಈ ತಂದೂರಿ ಫ್ರೈಡ್ ರೈಸ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಹಾಗೆ ಈ ತಂದೂರಿ ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯದಲ್ಲಿ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ತಂದೂರಿ ಫ್ರೈಡ್ ರೈಸ್ ಒಮ್ಮೆ ಸವಿದರೆ ನೀವು ಪದೇ ಪದೇ ಸವಿಯಲು ಮುಂದಾಗುತ್ತೀರಿ. ಹಾಗಾದ್ರೆ ಈ ಫ್ರೈಡ್ ರೈಸ್ ಮಾಡುವುದು ಹೇಗೆ ನೋಡಿ.
ತಂದೂರಿ ಫ್ರೈಡ್ ರೈಸ್ ಮಾಡಲು ಬೇಕಾಗುವ ವಸ್ತುಗಳು ಬೇಕು?
- ಅನ್ನ
- ಎಲೆಕೋಸು
- ಕ್ಯಾರೆಟ್
- ಈರುಳ್ಳಿ
- ಕರಿಬೇವು
- ಹಸಿರು ಮೆಣಸು
- ಟೊಮೆಟೋ
- ಹಸಿರು ಬಟಾಣಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗರಂ ಮಸಾಲ ಪುಡಿ
- ಕರಿಮೆಣಸಿನ ಪುಡಿ
- ಖಾರದ ಪುಡಿ
- ಅರಿಶಿನ ಪುಡಿ
- ತಂದೂರಿ ಮಸಾಲ
- ಬೆಣ್ಣೆ
- ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ತಂದೂರಿ ಫ್ರೈಡ್ ರೈಸ್ ಮಾಡುವ ವಿಧಾನವೇನು?
ಮೊದಲು ಒಂದು ಟೊಮೆಟೋವನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪೇಸ್ಟ್ ಮಾಡಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ನಂತರ ಅದಕ್ಕೆ ಪಲಾವ್ ಎಲೆ, ಹಸಿ ಮೆಣಸು, ಈರುಳ್ಳಿ ಹಾಕಿಕೊಂಡು 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಸಿ ಬಟಾಣಿ ಕತ್ತರಿಸಿರುವ ಕೋಸು, ಕ್ಯಾರೆಟ್ ಸಹ ಹಾಕಿಕೊಂಡು ಫ್ರೈ ಮಾಡಿ.
ಚೆನ್ನಾಗಿ ಈ ತರಕಾರಿ ಜೊತೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ 2 ನಿಮಿಷ ಫ್ರೈ ಮಾಡಿ. ಇದಾದ ಬಳಿಕ ಮೊದಲು ಪೇಸ್ಟ್ ಮಾಡಿಕೊಂಡಿರುವ ಟೊಮೆಟೋ ಪೇಸ್ಟ್ ಅನ್ನು ಸಹ ಹಾಕಿಕೊಳ್ಳಿ. ಹಾಗೆ ಖಾರದ ಪುಡಿ, ತಂದೂರಿ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಫ್ರೈ ಮಾಡಿದ ಬಳಿಕ ಸ್ವಲ್ಪ ನೀರು ಹಾಕಿ ಮತ್ತೆ ಫ್ರೈ ಆಗಲು ಬಿಡಿ.
ಈಗ ಮೊದಲು ಮಾಡಿಟ್ಟಿರುವ ಅನ್ನವನ್ನು ಈ ಬಾಣಲೆಗೆ ಹಾಕಿಕೊಳ್ಳಿ. ಹಾಗೆ ಮಸಾಲೆಗಳು ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಒಟ್ಟು 3 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಇದಕ್ಕೆ ಮೆಣಸಿನ ಪುಡಿ ಬೇಕಿದ್ದರೆ ಹಾಕಿಕೊಳ್ಳಿ, ಹಾಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತಂದೂರಿ ಫ್ರೈಡ್ ರಸ್ ಸಿದ್ದವಾಗುತ್ತದೆ. ನೀವು ಸಹ ಇದನ್ನೊಮ್ಮೆ ಟ್ರೈ ಮಾಡಿ .
ನೀವು ಬೇಕಿದ್ದರೆ ಇದಕ್ಕೆ ಸಾಸ್‌ಗಳನ್ನು ಕೂಡ ಬಳಸಬಹುದು. ಸಾಸ್ ಇಲ್ಲದೆಯೂ ಮಾಡಬಹುದು. ಹಾಗೆ ಬೆಳಗ್ಗೆಯ ತಿಂಡಿಗೆ ಹಾಗೆ ಊಟದ ಜೊತೆಗೂ ಸಹ ಇದನ್ನು ಮಾಡಿ ಸವಿಯಬಹುದು.



Click it and Unblock the Notifications