Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಬ್ಬದ ಸಂಭ್ರಮ ಹೆಚ್ಚಿಸುವ ಸ್ವೀಟ್ ಕೊಬ್ಬರಿ ಮಿಠಾಯಿ! 5 ನಿಮಿಷದೊಳಗೆ ಮಾಡಬಹುದು!
ಹಬ್ಬಗಳ ಸಮಯದಲ್ಲಿ ಎಲ್ಲರ ಮನೆಯಲ್ಲೂ ಸಿಹಿ ತಿಂಡಿ ಮಾಡುವುದು ಕಾಮನ್, ಹಬ್ಬದ ಸಂಭ್ರಮದಲ್ಲಿ ಸಿಹಿ ತಿಂಡಿ ಇದ್ದರೆ ಹಬ್ಬಕ್ಕೆ ಮತ್ತಷ್ಟು ಕಳೆ ಬರಲಿದೆ. ಹಬ್ಬದಲ್ಲಿ ಬಹಳಷ್ಟು ತಿಂಡಿಗಳು ಖಾದ್ಯಗಳು ಮಾಡಿದ್ರೆ ಮನೆಯಲ್ಲಿ ಸಂಭ್ರಮ ಇರಲಿದೆ. ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಕೆಲವೇ ಕೆಲವು ತಿಂಡಿಗಳಲ್ಲಿ ಈ ಕಾಯಿ ಮಿಠಾಯಿ ಅಥವಾ ಕೊಬ್ಬರಿ ಮಿಠಾಯಿ ಕೂಡ ಒಂದು.
ರುಚಿ ರುಚಿಯ ಕೊಬ್ಬರಿ ಮಿಠಾಯಿ ಅಂದ್ರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ಅದ್ರಲ್ಲೂ ಮಕ್ಕಳಿಗೆ ಇದು ಬಹಳ ರುಚಿ ನೀಡುವಂತಹ ವಿಶೇಷ ರುಚಿಯ ತಿಂಡಿ. ನೀವು ಹಲವು ಬೇಕರಿಗಳಲ್ಲಿ ಅಥವಾ ಅಂಗಡಿಯಲ್ಲಿಯೂ ಕೂಡ ಖರೀದಿಸಿ ತಂದು ಸವಿದಿರುತ್ತೀರಿ. ಹಾಗೆ ಎಲ್ಲಾ ಹಬ್ಬಕ್ಕೂ ಈ ಕೊಬ್ಬರಿ ಮಿಠಾಯಿ ಹೇಳಿ ಮಾಡಿಸಿದ ಸಿಹಿ ತಿಂಡಿ.

ಈ ಕೊಬ್ಬರಿ ಮಿಠಾಯಿ ಎಲ್ಲರ ಬಾಯಲ್ಲಿ ನೀರು ತರಿಸುವ ಸಿಹಿ ತಿಂಡಿ. ಹಾಗಾದ್ರೆ ಈ ಹಬ್ಬದ ಸೀಸನ್‌ನಲ್ಲಿ ನಾವು ಮನೆಯಲ್ಲೇ ಈ ಕೊಬ್ಬರಿ ಮಿಠಾಯಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಕೊಬ್ಬರಿ ಮಿಠಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಬ್ಬಕ್ಕಾಗಿ ಸಿಹಿ ಕೊಬ್ಬರಿ ಮಿಠಾಯಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಒಣ ಕೊಬ್ಬರಿ
- ಸಕ್ಕರೆ
- ಏಲಕ್ಕಿ ಪುಡಿ
- ತುಪ್ಪ
ಹಬ್ಬಕ್ಕಾಗಿ ಸಿಹಿ ಕೊಬ್ಬರಿ ಮಿಠಾಯಿ ಮಾಡುವುದು ಹೇಗೆ?
ಮೊದಲು ಕೊಬ್ಬರಿಯಲ್ಲಿ ಕೇವಲ ಬಿಳಿ ಭಾಗವನ್ನು ಮಾತ್ರವೇ ತುರಿದು ತೆಗೆದುಕೊಳ್ಳಬೇಕು. ಸುಮಾರು ಎರಡು ಕಾಯಿಗಳನ್ನು ಇದಕ್ಕೆ ಬಳಸಿ. ಈಗ ಒಂದು ಮಿಕ್ಸಿ ಜಾರ್‌ಗೆ ತುರಿದ ಕಾಯಿಗನ್ನು ಹಾಕಿಕೊಂಡು ನೀರು ಹಾಕದೆ ಪುಡಿ ಮಾಡಿಕೊಳ್ಳಬೇಕು. ಚೆನ್ನಾಗಿ ಒಣಗಿರುವ ಕೊಬ್ಬರಿ ತೆಗೆದುಕೊಂಡರೆ ಈ ಪುಡಿ ಹುಡಿ ಹುಡಿಯಾಗಿ ಬರಲಿದೆ.
ಈಗ ಇಂದು ತಟ್ಟೆಯಲ್ಲಿ ತುಪ್ಪವನ್ನು ಸವರಿಕೊಂಡು ಇಟ್ಟುಕೊಳ್ಳಿ. ಈಗ ಬಾಣಲೆ ಒಲೆ ಇಟ್ಟು ಒಂದು ಕಪ್ ಸಕ್ಕೆ ಹಾಕಿ ಅರ್ಧ ಕಪ್ ನೀರು ಹಾಕಿ ಆಗಾಗ ತಿರುಗಿಸುತ್ತಾ ಇರಿ. ಸಕ್ಕರೆ ಪಾಕ ಸ್ವಲ್ಪ ಮಂದ ಆಗಬೇಕು. ಅಂದರೆ ಒಂದೆಳೆ ಪಾಕ ಬರುವಂತೆ ಮಾಡಿಕೊಳ್ಳಬೇಕು. ಈಗ ಇದಕ್ಕೆ ಪುಡಿ ಮಾಡಿಕೊಂಡಿದ್ದ ಕೊಬ್ಬರಿ ಪುಡಿಯನ್ನು ಈ ಪಾಕಕ್ಕೆ ಹಾಕಿ ಕೈ ಬಿಡದೆ ಮಿಕ್ಸ್ ಮಾಡಿಕೊಳ್ಳಿ.
ಇದು ಪಾಕ ಸ್ವಲ್ಪ ಗಟ್ಟಿಯಾಗಬೇಕು. ನೀರು ಒಣಗಿ ಗಟ್ಟಿಯಾಗುವಾಗ ಏಲಕ್ಕಿ ಪುಡಿ, 1 ಸ್ಪೂನ್ ತುಪ್ಪ ಹಾಕಿ ಮತ್ತೆ ಮಿಕ್ಸ್ ಮಾಡಬೇಕು. ಇದು ಬಾಣಲೆಗೆ ಅಂಟದೆ ಚೆನ್ನಾಗಿ ಗಟ್ಟಿಯಾಗಬೇಕು. ಇದು ಗಟ್ಟಿಯಾಗುವಾಗ ತಪ್ಪ ಹಚ್ಚಿರುವ ತಟ್ಟೆಗೆ ಹಾಕಿ ಹರಡಿಕೊಳ್ಳಬೇಕು. ಹಾಗೆ ಹರಡಿಕೊಂಡು ತಣ್ಣಗಾಗುವ ಮುನ್ನವೇ ಕತ್ತರಿಸಿಕೊಂಡು ಪೂರ್ತಿ ಗಟ್ಟಿಯಾಗಲು ಬಿಡಿ.
ಸಂಪೂರ್ಣ ಗಟ್ಟಿಯಾದ ಬಳಿಕ ಒಂದೊಂದೇ ಮಿಠಾಯಿ ಬಾಕ್ಸ್ ಆಕಾರವಾಗಿ ತೆಗೆದು ಬೇರೆ ಬಾಕ್ಸ್‌ಗೆ ಜೊಡಿಸಿಕೊಳ್ಳಬಹುದು. ನೀವು ಸಹ ಈ ರೀತಿಯಾಗಿ ಮಿಠಾಯಿ ಮಾಡಿ ಹಬ್ಬದಲ್ಲಿ ಸವಿಯಬಹುದು. ಮಾಡೋದು ಬಹಳ ಸುಲಭ ಕಡಿಮೆ ವಸ್ತು ಕಡಿಮೆ ಸಮಯ ಹಿಡಿಯಲಿದೆ ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ.



Click it and Unblock the Notifications