Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಕ್ರಾಂತಿ ಸ್ಪೆಷಲ್: ರುಚಿ ರುಚಿಯ ಎಳ್ಳು ಬೆಲ್ಲದ ಉಂಡೆ ಮಾಡಿ!
ಸಂಕ್ರಾಂತಿಯ ಈ ಹಬ್ಬದ ಸಮಯದಲ್ಲಿ ಹಲವು ಸ್ವೀಟ್ ರೆಸಿಪಿಗಳ ಮಾಡಿ ಸವಿಯೋದು ಕಾಮನ್. ಈ ಸಿಹಿ ತಿಂಡಿಗಳಲ್ಲಿ ಹಲವು ಬಗೆಯ ಸಿಹಿಗಳನ್ನು ನೀವು ಮನೆಯಲ್ಲಿ ಮಾಡಿ ಸವಿಯುವ ಆಲೋಚನೆಯಲ್ಲಿರಬಹುದು. ಸಂಕ್ರಾಂತಿ ಎಂದರೆ ಸಿಹಿ ತಿಂಡಿಗಳ ಸವಿಯುವ ಹಬ್ಬವಾಗಿದೆ. ಎಳ್ಳು ಬೆಲ್ಲ ಮಾಡಿಯೇ ಮಾಡಿರುತ್ತೀರಿ. ಅಷ್ಟೇ ಅಲ್ಲ. ಎಳ್ಳು ಬಳಸಿಕೊಂಡು ಮಾಡುವಂತಹ ಹಲವು ರೀತಿಯ ತಿಂಡಿಗಳು ಎಲ್ಲರಿಗೂ ಇಷ್ಟವಾಗುತ್ತೆ.
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಪೊಂಗಲ್ ಮಾಡಿಯೇ ಮಾಡುತ್ತಾರೆ. ಅದ್ರಲ್ಲೂ ಸಂಕ್ರಾಂತಿ ಹಬ್ಬದಲ್ಲ ಮಾಡುವಂತಹ ಪ್ರತಿಯೊಂದು ಸಿಹಿಯೂ ಕೂಡ ಬಹಳ ರುಚಿಕರವಾಗಿರಲಿದೆ. ಹೀಗಾಗಿ ನಾವಿಂದು ಸುಲಭವಾಗಿ ಮಾಡುವಂತಹ ಸಿಹಿಯಲ್ಲಿ ಎಳ್ಳು ಬೆಲ್ಲದ ಉಂಡೆಯನ್ನು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಚಳಿಗಾಲದಲ್ಲಿ ಆರೋಗ್ಯಕ್ಕೆ ಹೇಳಿ ಮಾಡಿಸಿದ ರೆಸಿಪಿ ಇದಾಗಿದೆ. ಈ ಎಳ್ಳು-ಬೆಲ್ಲದ ಉಂಡೆ ಮಾಡಿಟ್ಟು ದಿನಾ ಒಂದು ಸವಿದರೆ ಆರೋಗ್ಯಕ್ಕೆ, ತ್ವಚೆಗೆ ತುಂಬಾನೇ ಒಳ್ಳೆಯದು. ನೆಲಗಡಲೆ, ಎಳ್ಳಿನಲ್ಲಿರುವ ಎಣ್ಣೆಯಂಶ ತ್ವಚೆ ರಕ್ಷಣೆ ಮಾಡಿದರೆ ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಹಾಗಾದ್ರೆ ಈ ಎಳ್ಳು ಬೆಲ್ಲದ ಉಂಡೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಳ್ಳು ಬೆಲ್ಲದ ಉಂಡೆ ಮಾಡಲು ಬೇಕಾಗುವ ವಸ್ತುಗಳು
- ಬಿಳಿ ಎಳ್ಳು
- ಬೆಲ್ಲ
- ತುಪ್ಪ
- ಏಲಕ್ಕಿ ಪುಡಿ
ಎಳ್ಳು ಬೆಲ್ಲದ ಉಂಡೆ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಕಪ್ ಬಿಳಿ ಎಳ್ಳು ಹಾಕಿ ಹುರಿದುಕೊಳ್ಳಬೇಕು. ಅದು ಸಿಡಿಯುವವರೆಗೂ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಎಳ್ಳು ತೆಗೆದು ತಣ್ಣಗಾಗಲು ಒಂದು ಪ್ಲೇಟ್‌ಗೆ ಹಾಕಿ. ನಂತರ ಇದಕ್ಕೆ ಅರ್ಧ ಕಪ್ ಬೆಲ್ಲದ ಪುಡಿ ಹಾಗೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
ಹಾಗೆ ಈ ಎಲ್ಲಾ ಪದಾರ್ಥ ಮಿಕ್ಸ್ ಮಾಡುವ ಮುನ್ನ 4 ಸ್ಪೂನ್ ಹುರಿದ ಎಳ್ಳನ್ನು ತೆಗೆದು ಬದಿಗೆ ಇಟ್ಟುಕೊಳ್ಳಿ. ಈಗ ಎಲ್ಲಾ ವಸ್ತುವನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಬೇಕು.
ತರಿ ತರಿಯಾಗಿ ರುಬ್ಬಿದ ಬಳಿಕ ತೆಗೆದು ಒಂದು ಪ್ಲೇಟ್‌ಗೆ ಹಾಕಿಡಿ. ಈಗ ಮೊದಲು ತೆಗೆದಿಟ್ಟ 4 ಸ್ಪೂನ್ ಎಳ್ಳು ಸಹ ಇದಕ್ಕೆ ಹಾಕಿಕೊಳ್ಳಿ. ಅನಂತರ 2 ಸ್ಪೂನ್ ತುಪ್ಪವನ್ನು ಬಿಸಿ ಮಾಡಿಕೊಂಡು ಇದಕ್ಕೆ ಹಾಕಿ. ಹಾಗೆ 4 ಸ್ಪೂನ್ ನೀರು ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಬೇಕು.
ಇದು ಉಂಡೆ ಕಟ್ಟುವ ಹದಕ್ಕೆ ಬರಬೇಕು. ಈಗ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆಯನ್ನು ಕಟ್ಟಿಕೊಳ್ಳಬೇಕು. ಸುಲಭವಾಗಿ ಕಟ್ಟಿಕೊಂಡು ಉಂಡೆಗಳನ್ನು ಗಟ್ಟಿಯಾಗಲು ಬಿಡಿ. ಅನಂತರ ಸವಿಯಲು ನೀಡಬಹುದು. ಇದು ಅತ್ಯಂತ ಸುಲಭವಾಗಿ ಸಿಹಿ ತಿಂಡಿ ಮಾಡುವ ವಿಧಾನವಾಗಿದೆ.



Click it and Unblock the Notifications