Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ಕಪ್ ರವೆಯಿಂದ 5 ನಿಮಿಷದಲ್ಲಿ ಮಾಡಿ ಈ ಸಿಹಿ ತಿಂಡಿ..! ಹೇಗೆ ಮಾಡೋದು ನೋಡಿ!
ಹಬ್ಬದಲ್ಲಿ ಸಿಹಿ ತಿಂಡಿ ಮಾಡುವುದು ಎಲ್ಲರ ಮನೆಯಲ್ಲೂ ಒಂದು ರೀತಿ ಸಂಪ್ರದಾಯದಂತೆ. ಸಿಹಿ ತಿಂಡಿ ಮಾಡದೆ ಮನೆ ನೀವು ಹುಡುಕಿದರು ಸಹ ಸಿಗುವುದು ಕಷ್ಟವೇ. ಹೀಗಾಗಿ ಹಬ್ಬದಲ್ಲಿ ಸಿಹಿ ತಿಂಡಿಗಳ ಮಾಡಿ ಒಂದಿಷ್ಟ ದಿನಗಳ ಕಾಲ ಇಟ್ಟು ಸವಿಯುವುದನ್ನು ನಾವು ನೋಡಿರುತ್ತೇವೆ. ಹಾಗೆ ಸಿಹಿ ತಿಂಡಿಗಳ ಮಾಡುವುದು ಅಂದ್ರೆ ಅದಕ್ಕೆ ವಿಶೇಷ ಸಾಮಗ್ರಿಗಳು, ಗಂಟೆಗಳ ಕಾಲ ಸಮಯ ಬೇಕು ಎಂದೇನು ಇಲ್ಲ. ಕಡಿಮೆ ಸಮಯದಲ್ಲಿ ಅತ್ಯಂತ ಸುಲವಾಗಿ ಮಾಡುವಂತಹ ಹಲವು ಸಿಹಿ ತಿಂಡಿಗಳಿವೆ.
ನಾವಿಂದು ಇಂತಹ ಸುಲಭದ ನಿಮಿಷದಲ್ಲಿ ಮಾಡಬಹುದಾದ ತಿಂಡಿಯ ಕುರಿತು ತಿಳಿದುಕೊಳ್ಳೋಣ. ಹೌದು ಒಂದು ಕಪ್ ರವೆ ಬಳಸಿಕೊಂಡು ಅತ್ಯಂತ ರುಚಿಯ ಸಿಹಿ ತಿಂಡಿ ಮಾಡಬಹುದು. ಈ ಸಿಹಿ ತಿಂಡಿ ಮಾಡಲು ಕೇವಲ 5 ನಿಮಿಷ ಸಾಕಾಗುತ್ತೆ. ರುಚಿಯೂ ಕೂಡ ಎಲ್ಲರು ಬಾಯಿ ಚಪ್ಪರಿಸಿ ಸವಿಯಬಹುದಾಗಿದೆ. ಹಾಗಾದ್ರೆ ಈ ಸಿಹಿ ತಿಂಡಿ ಮಾಡುವುದಾದರು ಹೇಗೆ?

ರವೆ ಬಳಸಿ ಮಾಡುವ ಈ ಸಿಹಿ ತಿಂಡಿಯನ್ನು ಮಾಡುವುದು ಹೇಗೆ? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ಪದಾರ್ಥಗಳ ಬಳಸಬೇಕು ಎಂಬುದ್ನು ನಾವಿಂದು ತಿಳಿದುಕೊಳ್ಳೋಣ.
ರವೆ ಸಿಹಿ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು
- ರವೆ- 1 ಕಪ್
- ಸಕ್ಕರೆ- 1 ಕಪ್
- ಏಲಕ್ಕಿ
- ಎಣ್ಣೆ
ರವೆ ಸಿಹಿ ತಿಂಡಿ ಮಾಡುವ ವಿಧಾನವೇನು?
ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ರವೆ ಹಾಕಿಕೊಂಡು ಬಳಿಕ ಅದಕ್ಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ನೀವು ರವೆ ತೆಗೆದುಕೊಂಡ ಕಪ್‌ನಲ್ಲಿಯೇ ಒಂದು ಕಪ್ ನೀರು ಹಾಕಿ ಅದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ ಕುದಿಯಲು ಬಿಡಿ. 2 ನಿಮಿಷದ ಬಳಿಕ ಪುಡಿ ಮಾಡಿಕೊಂಡಿರುವ ಏಳಕ್ಕಿಯನ್ನು ಹಾಕಿ ಕುದಿಯಲು ಬಿಡಿ.
ನೀರು ಚೆನ್ನಾಗಿ ಕುದಿ ಬರುತ್ತಿರುವಾಗ ರವೆ ಮತ್ತು ಸಕ್ಕರೆಯನ್ನು ನಿಧಾನವಾಗಿ ಹಾಕುತ್ತಾ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕೈ ಆಡಿಸುತ್ತಾ ಇರಬೇಕು. ಇದು ಕೇಸರಿ ಬಾತ್ ಅಳತೆಯಂತೆ ಕಾಣಿಸುತ್ತದೆ. ಸ್ವಲ್ಪ ಗಟ್ಟಿಯಾಗಿ ನೀರು ಆವಿಯಾದ ಬಳಿಕ ಗ್ಯಾಸ್ ಆಫ್ ಮಾಡಿ ಮುಚ್ಚಳ ಮುಚ್ಚಿ 2 ನಿಮಿಷ ಬಿಡಿ. ನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.
ಮಿಶ್ರಣ ತಣ್ಣಗಾದ ಬಳಿಕ ಕೈಗೆ ಸ್ವಲ್ಪ ತುಪ್ಪ ಹಚ್ಚಿಕೊಂಡು ಸ್ವಲ್ಪ ಸ್ವಲ್ಪ ಮಿಶ್ರಣ ತೆಗೆದುಕೊಂಡು ಅದನ್ನು ಉಂಡೆ ಮಾಡಿ ಇಟ್ಟುಕೊಳ್ಳಬೇಕು. ತುಪ್ಪದ ಬದಲು ಎಣ್ಣೆ ಇದ್ದರೂ ನಡೆಯುತ್ತದೆ. ಉಂಡೆ ಮಾಡುವುದಕ್ಕಿಂತ ಕಜ್ಜಾಯದ ರೀತಿ ಸಣ್ಣದಾಗಿ ಒತ್ತಿಕೊಂಡು ಇಟ್ಟುಕೊಳ್ಳಬೇಕು. ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾಗಲು ಬಿಡಿ.
ಎಣ್ಣೆ ಬಿಸಿಯಾದ ಬಳಿಕ 5ರಿಂದ 6 ತಿಂಡಿಯನ್ನು ಈ ಎಣ್ಣೆಯೊಳಗೆ ಬಿಡಿ. ನಿಧಾನವಾಗಿ ಕರಿದುಕೊಳ್ಳಿ. ಎರಡೂ ಬದಿಯೂ ಕರಿದುಕೊಳ್ಳಬೇಕು. ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ. ಎಣ್ಣೆಯಿಂದ ತೆಗೆದು ಜರಡಿಯಲ್ಲಿ ಇಟ್ಟು ಎಣ್ಣೆ ಇಳಿಯಲು ಬಿಡಿ. ಹೀಗೆ ಎಲ್ಲಾ ತಿಂಡಿಯನ್ನು ಎಣ್ಣೆಗೆ ಬಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರವೆಯಿಂದ ಮಾಡುವ ಸಿಹಿ ತಿಂಡಿ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ಕೇವಲ 10 ನಿಮಿಷದ ಒಳಗೆ ಇದನ್ಉ ಮಾಡಬಹುದು. ಹಾಗೆ ಕಡಿಮೆ ವಸ್ತುಗಳ ಸಾಕಾಗುತ್ತದೆ. ಹಬ್ಬದಲ್ಲಿ ಇದನ್ನು ವಿಶೇಷವಾಗಿ ಮಾಡಿ ನೋಡಿ ಎಲ್ಲರಿಗೂ ಇಷ್ಟವಾಗುತ್ತದೆ.



Click it and Unblock the Notifications