ರಾಗಿ ಹಲ್ವಾ ಮಾಡಿ ಸವಿದಿದ್ದೀರಾ? ಎಷ್ಟು ಸುಲಭ ಗೊತ್ತಾ?

Posted By:

ರಾಗಿಯಿಂದ ನೀವು ಹಲವು ಬಗೆಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ರಾಗಿಯಿಂದ ಮಾಡುವ ಮುದ್ದೆ, ಗಂಜಿ, ದೋಸೆ, ಇಡ್ಲಿ, ರೊಟ್ಟಿ ಹೀಗೆ ಹತ್ತು ಹಲವು ರೀತಿಯ ಖಾದ್ಯಗಳ ಸವಿದು ನೋಡಿರುತ್ತೀರಿ. ಹಾಗೆ ರಾಗಿ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಅಂಶವಾಗಿದೆ. ರಾಗಿಯಲ್ಲಿನ ಫೈಬರ್ ಅಂಶವು ಜೀರ್ಣಕ್ರಿಯೆ ಹಾಗೆ ತೂಕ ಇಳಿಸಲು ಸಹಕಾರಿಯಾಗಲಿದೆ.

ಇನ್ನು ಹಲವು ರೀತಿಯಲ್ಲಿ ನೀವು ರಾಗಿಯ ರುಚಿ ರುಚಿ ಖಾದ್ಯ ಸವಿದಿರುತ್ತೀರಿ. ನಾವಿಂದು ರಾಗಿಯಿಂದ ಮಾಡುವಂತಹ ರುಚಿ ರುಚಿಯ ಹಲ್ವಾ ಕುರಿತಾಗಿ ತಿಳಿದುಕೊಳ್ಳೋಣ. ಈ ರುಚಿಕರ ಹಲ್ವಾವನ್ನು ಮಾಡಿ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇದು ಬಹಳ ಇಷ್ಟಪಟ್ಟು ಸವಿಯುವುದು ನೋಡಬಹುದು.

How To Make Sweet Ragi Halwa At Home In Kannada

ನೀವು ಸಹ ಹಲವು ವಸ್ತುಗಳಿಂದ ಹಲ್ವಾ ಮಾಡಿ ಸವಿದಿರುತ್ತೀರಿ. ಹಲ್ವ ಎಂದರೆ ಹಲವರ ಬಾಯಲ್ಲಿ ನೀರು ಬರಲಿದೆ. ಆದರೆ ಎಂದಾದ್ರು ಈ ರವೆ ಹಲ್ವಾ ಮಾಡಿ ಸವಿದಿದ್ದೀರಾ? ರವೆ ಹಲ್ವಾ ಬಾಯಲ್ಲಿ ಇಟ್ಟರೆ ಕರಗುವಂತೆ ಇರಲಿದೆ. ಹಾಗೆ ವಿಶೇಷವಾಗಿಯೂ ಕಾಣಲಿದೆ. ಇನ್ನು ಅತಿಥಿಗಳು ಬಂದಾಗ, ಶುಭ ಕಾರ್ಯವಿದ್ದಾಗ ಈ ಸಿಹಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗೋದು ಖಚಿತ.

ಹಾಗಾದ್ರೆ ಈ ರಾಗಿ ಹಲ್ವಾ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ರಾಗಿ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?

  • ರಾಗಿ
  • ಬೆಲ್ಲ
  • ತುಪ್ಪ
  • ಏಲಕ್ಕಿ ಪುಡಿ
  • ಉಪ್ಪು
  • ಎಣ್ಣೆ

ರಾಗಿ ಹಲ್ವಾ ಮಾಡುವುದು ಹೇಗೆ?

ಮೊದಲು ರಾಗಿಯನ್ನು ತೊಳೆದು ನೆನೆಸಿಡಬೇಕು. ಒಂದು ರಾತ್ರಿ ಪೂರ್ತಿ ನೆನೆಸಿಡಬೇಕು. ಈಗ ಮಾರನೆ ದಿನ ರಾಗಿಯಿಂದ ನೀರು ಬೇರ್ಪಡಿಸಿ ಬರೀ ರಾಗಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಪೇಸ್ಟ್ ಅನ್ನು ಒಂದು ಪಾತ್ರೆಯ ಬಾಯಿಗೆ ಕಾಟನ್ ಬಟ್ಟೆ ಕಟ್ಟಿ ಅದರ ಮೇಲೆ ಹಾಕಬೇಕು.

ಏಕೆಂದರೆ ರಾಗಿಯಿಂದ ಹಾಲನ್ನು ಮಾತ್ರ ನಾವು ಈ ಹಲ್ವಾ ಮಾಡಲು ಬಳಸಬೇಕು. ಹೀಗಾಗಿ ಬಟ್ಟೆ ಮೇಲೆ ಪೇಸ್ಟ್ ಹಾಕಿ ಇಡಿ. ಅದು ನಿಧಾನವಾಗಿ ಪಾತ್ರೆಗೆ ಇಳಿಯುತ್ತಿರಲಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತುರಿದ ತೆಂಗಿನಕಾಯಿಯನ್ನು ಸಹ ಹಾಕಿಕೊಳ್ಳಿ. ನಂತರ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಈಗ ರಾಗಿ ಜೊತೆಗೆ ಈ ಕಾಯಿ ಹಾಕಿ ಕೈಯಿಂದ ಹಾಲನ್ನು ಹಿಂಡಿಕೊಳ್ಳಬೇಕು. ಬಟ್ಟೆಯನ್ನು ಚೆನ್ನಾಗಿ ಹಿಂಡಿಕೊಂಡು ಹಾಲನ್ನು ಪಾತ್ರೆಗೆ ಇಳಿಯುವಂತೆ ಮಾಡಿ. ನೀರು ಸಹ ಹಾಕಿ ರಾಗಿಯಿಂದ ಹಾಲು ಹಿಂಡಿಕೊಳ್ಳಿ. ರಾಗಿಯ ಜಿಗುಟನ್ನು ಮತ್ತೆ ಮಿಕ್ಸಿ ಜಾರ್‌ಗೆ ಹಾಕಿ ಮತ್ತೆ ರುಬ್ಬಿ ಹಾಲು ತೆಗೆದುಕೊಳ್ಳಿ. ಈಗ ಹಾಲನ್ನು ಒಂದು ಬೌಲ್‌ನಲ್ಲಿ ಹಾಕಿಡಿ.

ಈಗ ಒಂದು ಕಡಾಯಿ ಒಲೆ ಮೇಲೆ ಒಟ್ಟು ಈಗ ರಾಗಿ ಹಾಲನ್ನು ಅದಕ್ಕೆ ಹಾಕಿಕೊಳ್ಳಿ. ಇನ್ನೊಂದು ಕಡೆ ಸ್ವಲ್ಪ ಬೆಲ್ಲ ಹಾಗೂ ನೀರನ್ನು ಸಹ ಹಾಕಿಕೊಂಡು ಕರಗಲು ಬಿಡಿ. ಈಗ ಕರಗಿದ ಬೆಲ್ಲದ ನೀರನ್ನು ಕಡಾಯಿಯಲ್ಲಿನ ರಾಗಿ ಹಾಲಿಗೆ ಹಾಕಿಕೊಳ್ಳಿ. ನಂತರ ಉರಿಯಲ್ಲಿ ಬಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಕೈ ಬಿಡದೆ ಈ ಹಾಲನ್ನು ತಿರುಗಿಸುತ್ತಾ ಇರಬೇಕು. ಚಿಟಿಕೆ ಉಪ್ಪು ಸಹ ಹಾಕಿ ಮಿಕ್ಸ್ ಮಾಡುತ್ತಾ ಇರಿ. ಇದು ಸ್ವಲ್ಪ ಗಟ್ಟಿಯಾಗಲು ಆರಂಭಿಸಿದಾಗ 1 ಸ್ಪೂನ್ ತುಪ್ಪ, ಏಲಕ್ಕಿ ಪುಡಿ ಹಾಕಿಕೊಂಡು ಗಟ್ಟಿಯಾಗಲು ಬಿಡಿ. ಗಟ್ಟಿಯಾಗಲು ಆರಂಭಿಸಿ ಅಂಟು ಅಂಟಾಗಿ ಭಾರವಾದಾಗ ಒಲೆ ಆಫ್ ಮಾಡಿಕೊಳ್ಳಿ. ಈಗ ಇಂದು ಬಟ್ಟಲಿಗೆ ತುಪ್ಪ ಹಚ್ಚಿಕೊಂಡು ಆ ತಟ್ಟೆಗೆ ಹಾಕಿಕೊಂಡು ಹರಡಿಕೊಳ್ಳಿ.

ನಂತರ ಹಲ್ವಾ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ರಾಗಿ ಹಲ್ವಾ ರೆಡಿಯಾಗುತ್ತದೆ.

[ of 5 - Users]
Story first published: Tuesday, July 8, 2025, 19:51 [IST]
X
Desktop Bottom Promotion