Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಬ್ಬಕ್ಕೆ ಮಾಡಿ ಸಖತ್ ರುಚಿಯ ಸಿಹಿ ಪೊಂಗಲ್..! ಮಾಡೋದು ಹೇಗೆ?
ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ. ವರ್ಷದ ಮೊದಲ ಹಬ್ಬವನ್ನಾಗಿ ಸಂಕ್ರಾಂತಿ ಆಚರಿಸಲಾಗುತ್ತದೆ. ದೇಶದ ಬಹುತೇಕ ಹಲವು ರಾಜ್ಯಗಳಲ್ಲಿ ಒಂದೊಂದು ಹೆಸರಿನ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ವರ್ಷದ ಮೊದಲ ಹಬ್ಬದಂದು ಪ್ರಮುಖ ಆಕರ್ಷಣೆಯಾಗಿ ಪೊಂಗಲ್ ಮಾಡುವುದು ಸಾಮಾನ್ಯ. ಇಲ್ಲವೆ ಒಂದು ಸ್ವೀಟ್ ಮಾಡಿ ಸವಿಯುವುದು ಕಾಮನ್.
ಪೊಂಗಲ್ ತಮಿಳುನಾಡಿನಲ್ಲಿ ಅತ್ಯಂತ ಫೇಮಸ್ ಆಗಿರುವ ಹಬ್ಬ, ಹಾಗೆ ಸ್ವೀಟ್ ಪೊಂಗಲ್ ಅದ್ಭುತ ರುಚಿ ನೀಡುವಂತ ತಿಂಡಿಯಾಗಿದೆ. ಪೊಂಗಲ್ ಅನ್ನು ಎಲ್ಲರು ಇಷ್ಟ ಪಟ್ಟು ಸವಿಯುತ್ತಾರೆ. ಅದ್ರಲ್ಲೂ ತಮಿಳುನಾಡಿನಲ್ಲಿ ಹಬ್ಬದ ಹೆಸರೇ ಪೊಂಗಲ್ ಆಗಿದೆ. ಆದ್ರೆ ನಾವಿಂದು ಹಬ್ಬಕ್ಕೆ ಸಿಹಿ ಪೊಂಗಲ್ ಮಾಡುವ ಕುರಿತು ತಿಳಿದುಕೊಳ್ಳೋಣ.

ಕೆಲವು ದೇವಸ್ಥಾನದಲ್ಲಿ ಪ್ರವಾದವಾಗಿ ಈ ಸಿಹಿ ಪೊಂಗಲ್ ನೀಡುತ್ತಾರೆ. ಇಂತಹ ಅದ್ಭುತ ರುಚಿಯ ಪೊಂಗಲ್ ಅನ್ನು ನಾವಿಂದು ಮಾಡಿ ಸವಿದು ನೋಡೋಣ. ಹಾಗಾದ್ರೆ ಈ ಸಿಹಿ ಪೊಂಗಲ್ ಮಾಡುವುದು ಹೇಗೆ? ಹಬ್ಬದ ದಿನದಂದು ಸಂಭ್ರಮ ಹೆಚ್ಚಿಸಲಿರುವ ಈ ಪೊಂಗಲ್ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಈ ಸಿಹಿ ಪೊಂಗಲ್ ಮಾಡುವುದು ಹೇಗೆ? ಸಿಹಿ ಪೊಂಗಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಹಿ ಪೊಂಗಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹೆಸರು ಬೇಳೆ- ಅರ್ಧ ಕಪ್
- ಅಕ್ಕಿ - 1 ಕಪ್
- ಬೆಲ್ಲದ ಪುಡಿ
- ತುಪ್ಪ
- ಗೋಡಂಬಿ
- ಒಣ ದ್ರಾಕ್ಷಿ
- ಲವಂಗ-5
- ಕೊಬ್ಬರಿ ತುರಿ
- ಏಲಕ್ಕಿ ಪುಡಿ
- ಉಪ್ಪು
ಸಿಹಿ ಪೊಂಗಲ್ ಮಾಡುವ ವಿಧಾನವೇನು?
ಮೊದಲು ಹೆಸರು ಬೇಳೆ ಹಾಗೂ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಒಂದು ಕುಕ್ಕರ್ಗೆ ಹಾಕಿಟ್ಟುಕೊಳ್ಳಿ. ಹಾಗೆ ಅಳತೆಯ ಪ್ರಕಾರವಾಗಿ ನಾಲ್ಕು ಗ್ಲಾಸ್ ನೀರು ಹಾಕಿಕೊಂಡು ಉಪ್ಪು ಹಾಕಿ ಮುಚ್ಚಳ ಮುಚ್ಚಿ 2 ಸಿಟಿ ಹೊಡೆಯಲು ಬಿಡಬೇಕು.
ಈಗ ಇನ್ನೊಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಇದಕ್ಕೆ ಗೋಡಂಬಿ, ದ್ರಾಕ್ಷಿ, ಲವಂಗ ಹಾಕಿ ಫ್ರೈ ಮಾಡಿಕೊಳ್ಳಿ. ಪಾಯಸಕ್ಕೆ ಮಾಡುವಂತೆ ಇದನ್ನು ಫ್ರೈ ಮಾಡಿಕೊಳ್ಳಬೇಕು. ಈಗ 3ರಿಂದ 4 ಸ್ಪೂನ್ ಕೊಬ್ಬರಿ ಹಾಕಿ ಫ್ರೈ ಮಾಡಿಕೊಂಡು ಈ ಎಲ್ಲಾ ಪದಾರ್ಥವನ್ನು ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ 1 ಕಪ್ ಪುಡಿ ಬೆಲ್ಲ ಹಾಕಿಕೊಳ್ಳಿ. ಕಪ್ಪು ಬೆಲ್ಲ ಇದ್ದರೆ ಇದಕ್ಕೆ ಬಹಳ ರುಚಿ ನೀಡಲಿದೆ. ಹಾಗೆ 2 ಕಪ್ ನೀರು, ಏಲಕ್ಕಿ ಪುಡಿ ಹಾಕಿಕೊಂಡು ತಿರುಗಿಸುತ್ತಾ ಇರಿ. ಬೆಲ್ಲವೆಲ್ಲ ಕರಗಿ ನೀರಾಗಬೇಕು. ಈಗ 2 ಸೀಟಿ ಹೊಡೆಸಿಕೊಂಡಿರು ಅನ್ನ ಹಾಗು ಹೆಸರು ಬೇಳೆಯನ್ನು ಈ ಕುದಿಯುತ್ತಿರುವ ಬೆಲ್ಲದ ನೀರಿಗೆ ಹಾಕಿಕೊಳ್ಳಬೇಕು.
ಅನ್ನ ಹಾಗೂ ಹೆಸರು ಬೇಳೆ ಬೆಲ್ಲದ ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. 2 ನಿಮಿಷದ ಬಳಿಕ ಇದಕ್ಕೆ ಫ್ರೈ ಮಾಡಿರುವ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ನೀರು ಸ್ವಲ್ಪ ಆವಿಯಾಗುವವರೆಗೂ ಸಣ್ಣ ಉರಿ ಇಟ್ಟು ಮಿಕ್ಸ್ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಸುಲಭದ ಸಿಹಿ ರೆಡಿಯಾಗುತ್ತದೆ. ಈ ಪೊಂಗಲ್ ಹಬ್ಬದಂದು ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಕೂಡ ಸಂಕ್ರಾಂತಿ ಹಬ್ಬದಂದು ಈ ರೀತಿಯ ಸಿಹಿ ಪೊಂಗಲ್ ಅನ್ನು ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications