Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ಕಪ್ ಹಾಲಿನ ಪುಡಿ ಇದ್ರೆ ಸಾಕು..! ಈ ಪೇಡ 5 ನಿಮಿಷದಲ್ಲಿ ರೆಡಿಯಾಗುತ್ತೆ..!
ಮನೆಯಲ್ಲಿ ಸುಲಭವಾಗಿ ಸಿಹಿ ತಿಂಡಿಗಳ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುವ ವಿಚಾರ. ಅದ್ರಲ್ಲೂ ಸುಲಭವಾಗಿ ಮಾಡುವಂತಹ ಸಿಹಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಕಡಿಮೆ ವಸ್ತುಗಳ ಬಳಸಿಕೊಂಡು ರೆಡಿಮಾಡಿಕೊಂಡು ಮನೆ ಮಂದಿಯಲ್ಲ ಕುಳಿತು ಸುಲಭವಾಗಿ ಸವಿಯಬಹುದು. ಹಾಗೆ ಹಾಲಿನಿಂದ ಮಾಡುವಂತಹ ಸಿಹಿಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತದೆ.
ನಾವಿಂದು ಹಾಲಿನ ಬದಲಾಗಿ ಹಾಲಿನ ಪುಡಿ ಬಳಸಿಕೊಂಡು ಮಾಡುವಂತಹ ಸಿಹಿ ತಿಂಡಿ ಕುರಿತಾಗಿ ತಿಳಿದುಕೊಳ್ಳೋಣ. ಈ ಸಿಹಿ ಮಾಡಲು ಸ್ವಲ್ಪವೇ ಸ್ವಲ್ಪ ಹಾಲಿನ ಪುಡಿ ಇದ್ದರೂ ಸಾಕಾಗುತ್ತದೆ. ಹಾಲಿನ ಪುಡಿ ಬಳಸಿಕೊಂಡು ಬಾಯಲ್ಲಿ ಇಟ್ಟರೆ ಕರಗುವಂತಹ ಪೇಡ ಮಾಡಬಹುದು. ನೀವು ಬೇಕರಿಯಲ್ಲಿ ಕಾಣಸಿಗುವಂತಹ ಸಿಹಿ ತಿಂಡಿಗಳನ್ನು ಮನೆಯಲ್ಲಿ ಮಾಡಬಹುದು.

ನಾವಿಂದು ಹಾಲಿನ ಪುಡಿಯಿಂದ ಮಾಡುವಂತಹ ರುಚಿ ರುಚಿಯ ಸಿಹಿ ತಿಂಡಿಯಾಗಿರುವ ಪೇಡವನ್ನು ಸವಿದು ನೋಡೋಣ. ಮಕ್ಕಳಿಗಂತು ಈ ಹಾಲಿನ ಪುಡಿಯ ಪೇಡ ಅಂದರೆ ಬಹಳ ಇಷ್ಟವಾಗುತ್ತೆ. ಹಾಗೆ ಒಂದಿಷ್ಟು ದಿನ ಇಟ್ಟು ಕೂಡ ಸವಿಯಬಹುದು.
ಹಾಲಿನ ಪೇಡ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಹಾಲಿನ ಪುಡಿಯಿಂದ ಮಾಡುವ ಪೇಡ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹಾಲಿನ ಪುಡಿ
- ಸಕ್ಕರೆ
- ತುಪ್ಪ
- ಹಾಲು
ಹಾಲಿನ ಪುಡಿಯಿಂದ ಮಾಡುವ ಪೇಡ ಮಾಡುವುದು ಹೇಗೆ?
ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು 2 ಸ್ಪೂನ್ ತುಪ್ಪ ಹಾಕಿಕೊಂಡು ಬಳಿಕ 2 ಕಪ್ ಹಾಲಿನ ಪೌಡರ್ ಅನ್ನು ಹಾಕಿ ಸಣ್ಣ ಉರಿಯಲ್ಲಿ ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಬೇಕು. ಕೈ ಬಿಡದೆ ನಿಧಾನವಾಗಿ ಹುರಿದುಕೊಳ್ಳಿ. ಇದು ಘಮ ಘಮ ಎನ್ನುವಂತಹ ಸುವಾಸನೆ ಬರಬೇಕು.
ಈಗ ಅದಕ್ಕೆ ಒಂದು ಗ್ಲಾಸ್ ಹಾಲು ಸಹ ಹಾಕಿಕೊಳ್ಳಿ. ನಂತರ ಮತ್ತೆ ಮಿಕ್ಸ್ ಮಾಡುತ್ತಾ ಇರಿ. ಹಾಲು ಚೆನ್ನಾಗಿ ಪುಡಿಯೊಂದಿಗೆ ಬೆರೆತು ಪೇಸ್ಟ್ ರೀತಿಯಲ್ಲಿ ಆಗಬೇಕು. ಹೀಗೆ ಆದ ಬಳಿಕ ಅದಕ್ಕೆ ಅರ್ಧ ಕಪ್ ಸಕ್ಕರೆ, ಒಂದು ಸ್ಪೂನ್ ತುಪ್ಪ ಕೂಡ ಹಾಕಿಕೊಂಡು ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಹಿಟ್ಟು ಗಟ್ಟಿಯಾಗದಂತೆ ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಹಿಟ್ಟು ಸ್ವಲ್ಪ ಗಟ್ಟಿಯಾಗುತ್ತದೆ. ಈಗ ಜಜ್ಜಿ ಪುಡಿ ಮಾಡಿಕೊಂಡಿರುವ ಏಲಕ್ಕಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಬಾಣಲೆಯಲ್ಲಿ ಹಿಟ್ಟು ಉಂಡೆ ರೀತಿ ಬರಬೇಕು. ಹಿಟ್ಟು ಪಾತ್ರೆಗೆ ಅಂಟಿಕೊಳ್ಳುತ್ತಿದ್ದರೆ ಮತ್ತೆ ತುಪ್ಪ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಇದು ಚಪಾತಿ ಹಿಟ್ಟಿನಂತೆ ಮದುವಾಗಿ ಅದೇ ಹದವಾಗಿ ಬರಬೇಕು.
ಈಗ ಒಲೆ ಆಫ್ ಮಾಡಿ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ತಣ್ಣಗಾದ ಬಳಿಕ ಕೈಯಿಂದ ಒತ್ತಿ ಹದ ಮಾಡಿಕೊಳ್ಳಿ. ಹಿಟ್ಟು ಬಹಳ ಮೆತ್ತಗಾಗಬೇಕು. ಬಳಿಕ ಈಗ ಹಿಟ್ಟನ್ನು ದೊಡ್ಡ ಉಂಡೆ ಮಾಡಿ ಪಾತ್ರೆಯಲ್ಲಿ ಇಟ್ಟುಕೊಳ್ಳಿ. ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಹಾಗೆ ಉಂಡೆ ಕಟ್ಟಿಕೊಂಡು ಮಧ್ಯದಲ್ಲಿ ಪಿಸ್ತಾ, ಗೋಡಂಬಿ ಇಟ್ಟು ಸವಿಯಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಹಾಲಿನ ಪುಡಿ ಪೇಡ ರೆಡಿಯಾಗುತ್ತೆ.
ಇದು ಸುಲಭವಾಗಿ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಥಟ್ ಎಂದು ಮಾಡಬಹುದು ಹೀಗಾಗಿ ಎಲ್ಲರಿಗೂ ಇದು ಇಷ್ಟವಾಗುತ್ತೆ. ನೀವು ಕೂಡ ಇದನ್ನು ಮಾಡಿ ನೋಡಿ.



Click it and Unblock the Notifications