Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣೇಶನಿಗೆ ಪ್ರಿಯವಾದ ಸಿಹಿ ಮೋದಕ ಮಾಡುವ ಸರಿಯಾದ ವಿಧಾನ
ಗಣೇಶನ ಹಬ್ಬದಲ್ಲಿ ಪೂಜೆ, ನಿಮಜ್ಜನ ಮಾತ್ರವೇ ಪ್ರಮುಖವಲ್ಲ ಬದಲಿಗೆ ಆ ದಿನ ಮಾಡುವಂತಹ ರುಚಿ ರುಚಿಯ ಖಾದ್ಯಗಳು ಕೂಡ ಅಷ್ಟೇ ಮುಖ್ಯ. ಅದ್ರಲ್ಲೂ ಗಣೇಶನಿಗೆ ಪ್ರಿಯವಾದ ಮೋದಕ ಮಾಡುವುದು ಎಲ್ಲರಿಗೂ ಇಷ್ಟವಾಗುತ್ತೆ. ಮೋದಕ ಪ್ರಿಯ ಗಣೇಶನಿಗೆ ಹಬ್ಬದಂದು ಈ ಸಿಹಿ ತಿಂಡಿ ಮಾಡಿ ಅರ್ಪಿಸುವುದು ಸಾಮಾನ್ಯ. ಆದ್ರೆ ಇದನ್ನು ಮಾಡುವ ಸರಿಯಾದ ವಿಧಾನ ಹೇಗೆ ಅನ್ನೋದು ನಿಮಗೆ ಗೊತ್ತಾ?
ಎಲ್ಲರು ಈ ದಿನಕ್ಕಾಗಿ ಮೋದಕ ಮತ್ತು ಸಿಹಿ ಕಡುಬು ಮಾಡಲು ಮುಂದಾಗುತ್ತಾರೆ. ಆದರೆ ಸರಿಯಾದ ವಿಧಾನದಲ್ಲಿ ಮಾಡದಿದ್ದರೆ ಅದು ರುಚಿಯಾಗಿರುವುದಿಲ್ಲ, ಹಾಗೆ ಕೆಲವೊಮ್ಮೆ ಗಟ್ಟಿಯಾಗಿರುವುದು, ಉಂಟೆ ಕಟ್ಟಲು ಆಗದೆ ಇರುವುದು ಸಹ ನಾವು ನೋಡಬಹುದು. ಇನ್ನು ಮೋದಕವನ್ನು ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.

ಸುಲಭವದ ವಿಧಾನದಲ್ಲಿ ಮೋದಕ ಮಾಡುವುದು ಹೇಗೆ? ಈ ಮೋದಕ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೋದಕ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ ಹಿಟ್ಟು
- ತುಪ್ಪ
- ಏಲಕ್ಕಿ
- ಬೆಲ್ಲ
- ತೆಂಗಿನಕಾಯಿ
- ಉಪ್ಪು
- ಎಣ್ಣೆ
- ಗೋಡಂಬಿ
- ಬಾದಾಮಿ
- ಗಸೆಗಸೆ
ಮೋದಕ ಮಾಡುವ ಸರಿಯಾದ ವಿಧಾನವೇನು?
ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು 2 ಗ್ಲಾಸ್ ನೀರು ಹಾಕಿ 1 ಸ್ಪೂನ್ ತುಪ್ಪ, ಚಿಟಿಕೆ ಉಪ್ಪು ಹಾಕಿ ಹಾಕಿ. ನಂತರ ಒಂದು ಕಪ್‌ನಲ್ಲಿ ಅಳತೆ ಮಾಡಿ ಅಕ್ಕಿ ಹಿಟ್ಟು ಹಾಕಿಕೊಂಡು ನಿಧಾನವಾಗಿ ತಿರುಗಿಸುತ್ತಾ ಇರಬೇಕು. ಈ ಹಿಟ್ಟು ನಿಧಾನವಾಗಿ ಗಟ್ಟಿಯಾಗಲು ಬಿಡಬೇಕು. ನಂತರ ಒಲೆ ಆಫ್ ಮಾಡಿ ಹಾಗೆ ಮುಚ್ಚ ಮುಚ್ಚಿ ಇಡಿ.
ಈಗ ಒಂದು ಮಿಕ್ಸಿ ಜಾರ್‌ಗೆ ಸ್ವಲ್ಪ ತೆಂಗಿನಕಾಯಿ ತುರಿ, ಗೋಡಂಬಿ, ಬಾದಾಮಿ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 1 ಸ್ಪೂನ್ ತುಪ್ಪ ಹಾಕಿ. ನಂತರ ಮಿಕ್ಸಿಯಲ್ಲಿ ರುಬ್ಬಿದ್ದ ಮಿಶ್ರವನ್ನು ಅದಕ್ಕೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. 2 ನಿಮಿಷದ ಬಳಿಕ ಇದಕ್ಕೆ ಪುಡಿ ಮಾಡಿಕೊಂಡಿರುವ ಬೆಲ್ಲದ ಪುಡಿಯನ್ನು ಹಾಕಿಕೊಳ್ಳಿ.
ನಂತರ ಸ್ಪೂನ್ ಗಸೆ ಗಸೆ, ಏಲಕ್ಕಿ ಸಹ ಹಾಕಿ ಮಿಕ್ಸ್ ಮಾಡುತ್ತಾ ಇರಿ. 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಈಗ ಮೊದಲೇ ಮಾಡಿದ್ದ ಹಿಟ್ಟನ್ನು ಮತ್ತೆ ಕೈಯಿಂದ ನಾದುಕೊಳ್ಳಬೇಕು. ಈ ಹಿಟ್ಟು ಮೃದುವಾಗಿ ಬರುವವರೆಗೂ ಹದ ಮಾಡುತ್ತಾ ಇರಬೇಕು. ಈಗ ಮೋದಕ ಮಾಡುವ ಅಚ್ಚನ್ನು ತೆಗೆದುಕೊಂಡು ಒಳಗೆ ತುಪ್ಪ ಸವರಿಕೊಂಡು ಹಿಟ್ಟನ್ನು ಅದರೊಳೆ ಹಾಕಿ ಮಧ್ಯದಲ್ಲಿ ಹೂರ್ಣವನ್ನು ಹಾಕಿ ಸುತ್ತಲೂ ಹಿಟ್ಟನ್ನು ಹಾಕಿ ಬಂದ್ ಮಾಡಬೇಕು. ನಂತರ ಅಚ್ಚಿನಿಂದ ಮೋದಕವನ್ನು ತೆಗೆದಿಟ್ಟುಕೊಳ್ಳಿ.
ಹೀಗೆ ಎಲ್ಲಾ ಹಿಟ್ಟನ್ನು ಮಾಡಿಕೊಂಡ ಬಳಿಕ ಇಡ್ಲಿ ಅಥವಾ ಕಡುಬು ಕುಕ್ಕರ್‌ನಲ್ಲಿ ಹಾಕಿ 2ರಿಂದ 3 ನಿಮಿಷ ಬೇಯಿಸಿಕೊಂಡರೆ ಆಯಿತು. ನಿಮ್ಮ ಮುಂದೆ ರುಚಿ ರುಚಿಯ ಈ ಮೋದಕ ರೆಡಿಯಾಗುತ್ತದೆ. ಇದು ಮೋದಕ ಮಾಡುವ ಅತ್ಯಂತ ಸುಲಭದ ವಿಧಾನವಾಗಿದೆ. ಗಣೇಶನ ಹಬ್ಬದಲ್ಲಿ ಈ ಮೋದಕವನ್ನಂತು ಮಾಡಿಯೇ ಮಾಡುತ್ತಾರೆ. ನೀವು ಕೂಡ ಇದನ್ನು ಮಾಡಿ ಸವಿದು ನೋಡಿ. ಹಾಗೆ ನೈವೇದ್ಯಕ್ಕೂ ಕೂಡ ಇದನ್ನು ಬಳಸಬಹುದು. ಕೆಲವರು ಈ ಮೋದಕವನ್ನು ಎಣ್ಣೆಯಲ್ಲಿ ಕರಿಯುತ್ತಾರೆ ಕೂಡ



Click it and Unblock the Notifications