Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿ ಸ್ಪೆಷಲ್: ರುಚಿ ರುಚಿ ಕಾಯಿ ಹೋಳಿಗೆ ಥಟ್ ಅಂತ ಮಾಡಬಹುದು! ಇಲ್ಲಿದೆ ಸುಲಭ ವಿಧಾನ!
ದೀಪಾವಳಿ ಹಿಂದೂಗಳ ಪಾಲಿಗೆ ಅತ್ಯಂತ ಶುಭ ಹಾಗೂ ಸಂಭ್ರಮದ ಹಬ್ಬ. ದೀಪಗಳ ಹಬ್ಬ ಅಂದ್ರೆ ಅಲ್ಲಿ ಸಿಹಿ ತಿಂಡಿ, ಪಟಾಕಿಯ ಸಿಡಿಸಿ ಸಂಭ್ರಮಿಸುವ ಹಬ್ಬವಾಗಿದೆ. ಬಹುತೇಕರ ಮನೆಯಲ್ಲಿ ಸಿಹಿ ತಿಂಡಿ ಸಂಭಮ್ರ ಸಾಮಾನ್ಯ. ಹಾಗೆ ದೀಪಾವಳಿಯಲ್ಲಿ ಸ್ವಚ್ಛತೆ ಹಾಗೆ ಸಿಹಿ ಮಾಡೋದು ಕೂಡ ಸಾಮಾನ್ಯ. ದೀಪಾವಳಿ ಸಿಹಿ ಅಂದ್ರೆ ಎಲ್ಲರಿಗೂ ನೆನಪಾಗೋದು ಹೋಳಿಗೆ.
ದೀಪಾವಳಿಯಲ್ಲಿ ಬಹುತೇಕರು ಹೋಳಿಗೆ ಮಾಡಿಯೇ ಮಾಡುತ್ತಾರೆ. ಹೋಳಿಗೆ ಮಾಡಿ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಅಂಗಡಿ, ಬೇಕರಿಗಳಲ್ಲಿ ಸಿಗುವಂತಹ ಹೋಳಿಗೆಗಿಂತ ಮನೆಯಲ್ಲೇ ಮಾಡಿ ಸವಿಯುವ ಹೋಳಿಗೆ ಬಹಳ ಇಷ್ಟವಾಗುತ್ತೆ. ಹೋಳಿಗೆಯಲ್ಲಿ ಹತ್ತಾರು ಬಗೆಗಳಿವೆ. ಕಾಯಿ ಹೋಳಿಗೆ ಬೇಳೆ ಹೋಳಿಗೆ, ಕ್ಯಾರೆಟ್ ಹೋಳಿಗೆ, ಹೂರ್ಣದ ಹೋಳಿಗೆ ಸೇರಿ ಹಲವು ರೀತಿಯ ರುಚಿ ರುಚಿಯ ಹೋಳಿಗೆ ಮಾಡಬಹುದು.

ನಾವಿಂದು ದೀಪಾವಳಿ ಹಬ್ಬಕ್ಕಾಗಿ ಕಾಯಿ ಹೋಳಿಗೆ ಮಾಡುವ ಕುರಿತು ತಿಳಿದುಕೊಳ್ಳೋಣ. ಕಾಯಿ ಹೋಳಿಗೆ ಮಾಡೋಕೆ ಬಹಳ ಕಷ್ಟ ಎಂದು ಬಾವಿಸುತ್ತಾರೆ. ಆದ್ರೆ ನಾವಿಂದು ಸುಲಭವಾಗಿ ಕಾಯಿ ಹೋಳಿಗೆ ಮಾಡುವ ಕುರಿತು ತಿಳಿದುಕೊಳ್ಳೋಣ.
ಕಾಯಿ ಹೋಳಿಗೆ ಮಾಡುವುದು ಹೇಗೆ?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕಾಯಿ ಹೋಳಿಗೆ ಮಾಡಲು ಬೇಕಾಗುವ ವಸ್ತುಗಳು
- ತೆಂಗಿನಕಾಯಿ
- ಬೆಲ್ಲ
- ತುಪ್ಪ
- ಗಸೆ ಗಸೆ
- ಅರಶಿಣ ಪುಡಿ
- ಚಿರೋಟಿ ರವೆ
- ಮೈದಾ ಹಿಟ್ಟು
ಕಾಯಿ ಹೋಳಿಗೆ ಮಾಡುವ ಸುಲಭವ ವಿಧಾನವೇನು?
ಮೊದಲು ಒಂದು ಪಾತ್ರೆಯಲ್ಲಿ 1 ಕಪ್ ಚಿರೋಟಿ ರವೆ, ಮುಕ್ಕಾಲು ಕಪ್ ಮೈದಾ ಹಿಟ್ಟು, ಅರಶಿಣ ಪುಡಿ, ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಸಲ್ಪ ಸ್ವಲ್ಪವೆ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ. ಈ ಹಿಟ್ಟು ಗಟ್ಟಿಯಾಗಿ ಬರಬೇಕು. ಚಪಾತಿ ಹಿಟ್ಟಿನ ಹದಕ್ಕೆ ಬರಲಿ. ಆಗಾಗ ಎಣ್ಣೆ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ. ನಂತರ ಮೇಲೆ ಎಣ್ಣೆ ಸವರಿ ಒಂದು ಪಾತ್ರೆಯಲ್ಲಿ ಮುಚ್ಚಿ ಇಡಿ.
ಈಗ ತುರಿದುಕೊಂಡಿರುವ ಕಾಯಿ ತೆಗೆದುಕೊಳ್ಳಿ. ಮಿಕ್ಸಿ ಜಾರ್‌ಗೆ ಈ ತೆಂಗಿನಕಾಯಿ ತುರಿ ತೆಗೆದುಕೊಂಡು ಸಣ್ಣದಾಗಿ ರುಬ್ಬಬೇಕು. ಪುಡಿ ಪುಡಿಯಾಗಿ ಬರಬೇಕು. ನೀರು ಹಾಕದೆ ರುಬ್ಬಬೇಕು. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎರಡೂವರೆ ಕಪ್ ಬೆಲ್ಲ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಕರಗಲು ಬಿಡಿಬೇಕು. ಸಣ್ಣ ಉರಿಯಲ್ಲಿ ಪಾಕ ಮಾಡಿ. ಬೆಲ್ಲ ಕರಗಿದಾಗ ಅದನ್ನು ಜರಡಿ ಹಿಡಿದು ಮತ್ತೆ ಪಾತ್ರೆಗೆ ಹಾಕಿ ಕುದಿಯಲು ಬಿಡಿ. ಇದು ಚೆನ್ನಾಗಿ ಕುದಿಬಂದು ಪಾಕ ಆಗಬೇಕು.
ಈಗ ಪಾಕಕ್ಕೆ ರುಬ್ಬಿದ ಕಾಯಿಯನ್ನು ಹಾಕಿಕೊಂಡು ಗಂಟುಗಳಿಲ್ಲದಂತೆ ತಿರುಗಿಸುತ್ತಾ ಇರಿ. 10 ನಿಮಷಗಳ ಕಾಲ ಕಾಯಿ ಬೆಲ್ಲದ ಮಿಶ್ರಣ ಗಟ್ಟಿಯಾಗಲು ಬಿಡಬೇಕು. ಕೊನೆಯಲ್ಲಿ ಇದಕ್ಕೆ ಗಸೆ ಗಸೆ ಹಾಕಿಕೊಂಡು ಮಿಕ್ಸ್ ಮಾಡಿ ಇದು ಕೇಸರಿ ಬಾತ್‌ನಂತಹ ಹದಕ್ಕೆ ಬಂದಿರಬೇಕು. ಬಹಳ ಗಟ್ಟಿಯಾಗಬಾರದು. ಉಂಡೆ ಮಾಡಿದರೆ ಸುಲಭಕ್ಕೆ ಉಂಡೆಯಾಗಬೇಕು, ಮೃದುವಾಗಿರಲಿ. ಈಗ ಒಲೆ ಆಫ್ ಮಾಡಿ ಇಳಿಸಿಕೊಳ್ಳಿ.
ಈಗ ಕಣಕವನ್ನು ಒಮ್ಮೆ ಮಿಕ್ಸ್ ಮಾಡಿಕೊಂಡು ಬಳಿಕ ಉಂಡೆ ಕಟ್ಟಿಕೊಳ್ಳಬೇಕು. ನಿಂಬೆ ಗಾತ್ರಕ್ಕಿಂತ ಸ್ವಲ್ಪ ದೊಡ್ಡ ಉಂಡೆ ಮಾಡಿಕೊಳ್ಳಿ. ಹಾಗೆ ಹೂರ್ಣ ಕೂಡ ಉಂಡೆ ಮಾಡಿಟ್ಟುಕೊಳ್ಳಿ. ನಂತರ ಕಣಕ ಸ್ವಲ್ಪ ತಟ್ಟಿಕೊಂಡು ಮದ್ಯದಲ್ಲಿ ಹೂರ್ಣ ಇಟ್ಟು ಕಣಕ ಸುತ್ತಿ ಉಂಡೆ ಮಾಡಿ ನಂತರ ಹೋಳಿಗೆ ಎಲೆ ಮೇಲೆ ಎಣ್ಣೆ ಹಚ್ಚಿ ತಟ್ಟಿಕೊಳ್ಳಿ. ಹಾಗೆ ಕಾವಲಿಗೆ ಎಣ್ಣೆ ಹಚ್ಚಿಕೊಂಡು ಕಾಯಿಸಿಕೊಳ್ಳಿ. ಎರಡೂ ಕಡೆ ಕಾಯಿಸಿಕೊಂಡರೆ ನಿಮ್ಮ ಮುಂದೆ ಕಾಯಿ ಹೋಳಿಗೆ ಸಿದ್ದವಾಗುತ್ತೆ.



Click it and Unblock the Notifications