Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಬ್ಬದ ಸಮಯಕ್ಕೆ ಮನೆಯಲ್ಲೇ ಮಾಡಿ ಸಿಹಿ ಬೂಂದಿ: ಇಲ್ಲಿದೆ ಸುಲಭದ ಮಾರ್ಗ!
ವರಮಹಾಲಕ್ಷ್ಮಿ ಹಬ್ಬ ಆಗಮಿಸುತ್ತಿದೆ. ಶ್ರಾವಣ ಮಾಸದಲ್ಲಂತು ಒಂದಲ್ಲಾ ಒಂದು ಹಬ್ಬಗಳು ಬರುತ್ತಲೇ ಇರುತ್ತವೆ. ಒಂದರ ಹಿಂದೆ ಒಂದು ಹಬ್ಬ, ವ್ರತ, ಪೂಜೆ ಬಂದೇ ಬರುತ್ತವೆ. ಇನ್ನು ವರಮಹಾಲಕ್ಷ್ಮಿ ಹಬ್ಬದಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡಲಾಗುತ್ತದೆ. ಈ ಸಮಯದಲ್ಲಿ ಲಕ್ಷ್ಮಿಗೆ ಬಹಳ ಇಷ್ಟದ ಪೂಜೆ, ಪ್ರಸಾದ ಮಾಡುವುದು ಸಾಮಾನ್ಯ. ನಾವಿಂದು ಮನೆಯಲ್ಲೇ ಹಬ್ಬದ ಸಲುವಾಗಿ ಮಾಡುವಂತಹ ಒಂದು ಪೂಜೆಯ ಕುರಿತಾಗಿ ತಿಳಿದುಕೊಳ್ಳೋಣ.
ಅದ್ರಲ್ಲೂ ಹಬ್ಬ ಎಂದರೆ ಅಲ್ಲಿ ಸಿಹಿ ಇರಲೇಬೇಕು. ನಾವಿಂದು ಹಬ್ಬದ ಸಂಭ್ರಮ ಹೆಚ್ಚಿಸುವಂತಹ ಸಿಹಿ ಬೂಂದಿ ಮಾಡುವ ಕುರಿಯಾಗಿ ತಿಳಿದುಕೊಳ್ಳೋಣ. ನೀವು ಅಂಗಡಿಗಳಲ್ಲಿ, ಬೇಕರಿಗಳಲ್ಲಿ ನೋಡಿದಂತೆ ಸಿಹಿಯಾದ ಈ ಬೂಂದಿ ಎಲ್ಲರ ಬಾಯಲ್ಲೂ ನೀರು ತರಿಸಲಿವೆ. ಹಾಗೆ ಬೂಂದಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಸಿಹಿ ಬೂಂದಿಯಿಂದಲೇ ಲಡ್ಡು ಸಹ ಮಾಡುತ್ತಾರೆ, ಆದ್ರೆ ನಾವಿಂದು ಸುಲಭದ ಈ ಸಹಿ ಬೂಂದಿ ಮಾಡುವ ಕುರಿತು ತಿಳಿಯೋಣ. ಇದು ಸುಲಭವಾಗಿ ನಿಮ್ಮ ಬಾಯಲ್ಲಿ ನೀರು ತರಿಸಬಹುದು. ಹಾಗೆ ಮನೆಯಲ್ಲಿ ಇದನ್ನು ಮಾಡಿದ್ರೆ ಹಬ್ಬದಂದು ಪೂಜೆಯಲ್ಲಿ ನೈವೇದ್ಯಕ್ಕೂ ಬಳಸಬಹುದು. ಹಾಗೆ ಹಬ್ಬದ ಊಟದ ರುಚಿ ಹೆಚ್ಚಿಸೋದು ಖಚಿತ.
ಹಾಗಾದ್ರೆ ಈ ಸಿಹಿ ಬೂಂದಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಹಿ ಬೂಂದಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಡಲೆ ಹಿಟ್ಟು
- ಸಕ್ಕರೆ
- ಸೋಡಾ
- ಕಲರ್ ಪುಡಿ
- ಏಲಕ್ಕಿ ಪುಡಿ
- ಲವಂಗ
- ಎಣ್ಣೆ
ಸಿಹಿ ಬೂಂದಿ ಮಾಡುವುದು ಹೇಗೆ?
ಮೊದಲು ಒಂದು ಅಳತೆ ಕಪ್‌ನಲ್ಲಿ ಎರಡು ಕಪ್ ಕಡಲೆ ಹಿಟ್ಟನ್ನು ತೆಗೆದುಕೊಂಡು ಬೌಲ್‌ಗೆ ಹಾಕಿ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು ಎರಡು ಕಾಲು ಕಪ್ ನೀರು ಹಾಕಿ ಗಂಟುಗಳು ಇಲ್ಲದಂತೆ ಹಿಟ್ಟನ್ನು ಹದ ಮಾಡಿಕೊಳ್ಳಿ. ಇದು ತೆಳುವಾಗಿ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ನಂತರ ಇದಕ್ಕೆ ಹಳದಿ ಕಲರ್ ಪುಡಿ ಹಾಗೆ ಚಿಟಿಕೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಕಾಯಲು ಬಿಡಿ. ಉರಿ ದೊಡ್ಡದಾಗಿ ಇಟ್ಟು ಕಾಯಲು ಬಿಡಿ. ಈಗ ಬೂಂದಿಯನ್ನು ಎಣ್ಣೆಗೆ ಬಿಡಬೇಕು. ಬೂಂದಿ ಹಾಕು ತೂತುಗಳಿರುವ ಜರಡಿ, ಸೌಟು ಅಥವಾ ಕೈ ಪಾತ್ರೆ ಬಳಸಬಹುದು. ಬಾಣಲೆ ಮೇಲೆ ಹಿಡಿದು ಅದರೊಳಗೆ ಹಿಟ್ಟು ಹಾಕಿದರೆ ಬೂಂದಿ ಕರಿಯಲು ಸಿದ್ದವಾಗುತ್ತದೆ.
ಸುಮಾರು ಅರ್ಧ ನಿಮಿಷಕ್ಕಿಂತ ಕಡಿಮೆ (15 ಸೆಕೆಂಡ್) ಸಮಯ ಫ್ರೈ ಮಾಡಬೇಕು. ಎಲ್ಲಾ ಹಿಟ್ಟನ್ನು ಇದೇ ರೀತಿ ಬೂಂದಿ ಕರಿದುಕೊಂಡು ಜರಡಿಯಲ್ಲಿ ಇಟ್ಟ ಎಣ್ಣೆ ಇಳಿಯಲು ಬಿಡಿ. ಬೂಂದಿ ಗಟ್ಟಿಯಾಗಿರಬಾರದು ಇದು ಮೃದುವಾಗಿರಬೇಕು. ಈಗ ಎರಡು ಮುಷ್ಟಿ ಬೂಂದಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಟ್ಟುಕೊಳ್ಳಿ.
ಈಗ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ 2 ಕಪ್ ಸಕ್ಕರೆ ಹಾಕಿ ಅಧ ಕಪ್ ನೀರು ಹಾಕಿ. ಬಳಿಕ ಹಳದಿ ಬಣ್ಣ, ಏಲಕ್ಕಿಪುಡಿ, 2 ಲವಂಗ ಸೇರಿಸಿ ಚೆನ್ನಾಗಿ ಮಿಕ್ಸ್ ಆಗಿ 1 ಎಳೆ ಪಾಕ ಬರುವಂತೆ ಮಾಡಿ. ಈಗ ಒಲೆ ಸಣ್ಣ ಮಾಡಿಕೊಂಡು ಫ್ರೈ ಮಾಡಿಕೊಂಡ ಬೂಂದಿಯನ್ನು ಹಾಕಿಕೊಂಡು 4 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 1 ಗಂಟೆ ಹಾಗೆಯೇ ಬಿಡಬೇಕು. ಇಷ್ಟಾದರೆ ಹುಡಿ ಹುಡಿಯಾದ ಸಹಿ ಬೂಂದಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications