Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟಕ್ಕೆ ಸುವರ್ಣಗಡ್ಡೆ ಪಲ್ಯ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ಊಟ ಅಂದರೆ ಅಲ್ಲಿ ರುಚಿಯಾದ ಒಂದು ಪಲ್ಯ ಇರಬೇಕು. ಅದು ಯಾವುದಾದರು ಒಂದು ತರಕಾರಿಯ ಪಲ್ಯ ಆಗಿದ್ದರೆ ಇನ್ನೂ ಒಳ್ಳೆಯದು. ಊಟದ ಜತೆ ಪಲ್ಯ ಇದ್ದರೆ ಊಟ ಚೆನ್ನಾಗಿ ಸೇರುತ್ತದೆ. ಅದು ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟ ಆಗಿದ್ದರೂ ಸರಿಯೇ.
ಹಾಗಾದ್ರೆ ಊಟಕ್ಕೆ ರುಚಿಕರವಾಗಿ ಯಾವ ಪಲ್ಯ ಮಾಡಬಹುದು. ನೀವು ಸುವರ್ಣ ಗಡ್ಡೆಯ ಪಲ್ಯವನ್ನು ಯಾವುದಾದರು ಮದುವೆ ಮನೆಯಲ್ಲಿ ಸವಿದಿರಬಹುದು. ಆದ್ರೆ ನಾವಿಂದು ಮನೆಯಲ್ಲೇ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಸುವರ್ಣ ಗಡ್ಡೆ ಆರೋಗ್ಯಕ್ಕೆ ತುಂಬಾ ಒಳ್ಳೆಯ ತರಕಾರಿಯಾಗಿದೆ.

ಹಾಗಾದ್ರೆ ನಾವಿಂದು ಸುವರ್ಣ ಗಡ್ಡೆಯ ಪಲ್ಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಪಲ್ಯ ಮಾಡುವ ವಿಧಾನವೇನು ಎಂಬುದನ್ನು ತಿಳಿಯೋಣ.
ಸುವರ್ಣ ಗಡ್ಡೆ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಸುವರ್ಣ ಗಡ್ಡೆ - 1/2 ಕೆ.ಜಿ
- ಈರುಳ್ಳಿ - 3
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಸಾಸಿವೆ - 1/4 ಟೀಸ್ಪೂನ್
- ಜೀರಿಗೆ - 1/4 ಟೀಸ್ಪೂನ್
- ಗರಂ ಮಸಾಲಾ ಪುಡಿ - 1 ಟೀಸ್ಪೂನ್
- ಜೀರಿಗೆ ಪುಡಿ - 1/2 ಟೀಸ್ಪೂನ್
- ಅರಿಶಿನ ಪುಡಿ - 1/2 ಟೀಸ್ಪೂನ್
- ಕೊತ್ತಂಬರಿ ಪುಡಿ - 1 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 2 ಟೀಸ್ಪೂನ್
- ಕರಿಬೇವಿನ ಎಲೆಗಳು-1/2 ಕಪ್
- ಒಣ ಮೆಣಸು - 3
- ಕೊತ್ತಂಬರಿ ಸೊಪ್ಪು - 1/4 ಕಪ್
- ಹುಣಸೆಹಣ್ಣು - 10 ಗ್ರಾಂ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಸುವರ್ಣ ಗಡ್ಡೆ ಪಲ್ಯ ಮಾಡುವುದು ಹೇಗೆ?
ಮೊದಲು ಸುವರ್ಣ ಗಡ್ಡೆಯನ್ನ ಸಣ್ಣದಾಗೊ ಹಚ್ಚಿಕೊಂಡು ಅದನ್ನು ನೀರಿನಲ್ಲಿ ನೆನೆಸಿಡಬೇಕು. ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ನೀರಿನಲ್ಲಿ ನೆನೆಸಿಟ್ಟ ಸುವರ್ಣ ಗಡ್ಡೆ ಹಾಕಿ ಅದಕ್ಕೆ ಅರಶಿಣ, ಹುಣಸೆ ಹಣ್ಣು ಹಾಕಿ 5 ನಿಮಿಷ ಬೇಯಿಸಿಕೊಳ್ಳಬೇಕು.
ಇನ್ನೊಂದೆಡೆ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಈರುಳ್ಳಿ, ಒಣಮೆಣಸು ಹಾಕಿ, ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಅರಶಿನ ಪುಡಿ, ದನಿಯಾ ಪುಡಿ, ಖಾರದ ಪುಡಿ, ಕೊತ್ತಂಬರಿ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಇದಕ್ಕೆ ಬೇಯಿಸಿಕೊಂಡಿರುವ ಸುವರ್ಣ ಗಡ್ಡೆಯನ್ನು ಹಾಕಿ, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಅದಕ್ಕೆ ಕೊತ್ತಂಬರಿ, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿಕರ ಸುವರ್ಣ ಗಡ್ಡೆಯ ಪಲ್ಯ ರೆಡಿಯಾಗಿರುತ್ತೆ.
ಇನ್ನು ಸುವರ್ಣ ಗಡ್ಡೆ ಚೆನ್ನಾಗಿ ಬೇಯಿಸಬೇಕು. ಏಕೆಂದರೆ ಚೆನ್ನಾಗಿ ಬೆಂದಿಲ್ಲ ಅಂದ್ರೆ ತುರಿಕೆ ಆರಂಭವಾಗಬಹುದು, ನೀವು ಸುವರ್ಣ ಗಡ್ಡೆ ಹೆಚ್ಚುವಾಗಲು ಸಹ ಕೈಗೆ ಎಣ್ಣೆ ಹಚ್ಚಿಕೊಳ್ಳಬೇಕು ಇಲ್ಲದಿದ್ದರೆ ತುರಿಕೆ ಆರಂಭವಾಗುತ್ತದೆ. ಹೀಗಾಗಿ ಸುವರ್ಣ ಗಡ್ಡೆಯನ್ನು ಚೆನ್ನಾಗಿ ಬೇಯಿಸಬೇಕು.
ಈ ಪಲ್ಯ ಅನ್ನ, ಚಪಾತಿ ಜೊತೆಯು ಸವಿಯಬಹುದು. ಎಲ್ಲಾ ವಯಸ್ಕರು, ಎಲ್ಲಾ ಸಮಯದಲ್ಲಿಯೂ ಈ ಪಲ್ಯ ಸವಿಯಬಹುದು. ಇದೊಂದು ಆರೋಗ್ಯಕರ ಪದಾರ್ಥವಾಗಿದೆ. ಈ ಪಲ್ಯವನ್ನು ಹಲವು ರೀತಿ ಮಾಡಬಹುದು. ಕೆಲವರು ಇದೇ ಪಲ್ಯವನ್ನು ಕುಕ್ಕರ್ನಲ್ಲಿ ಬೇಯಿಸಿಕೊಂಡು ಮಾಡುತ್ತಾರೆ. ಜೊತೆಗೆ ಇದರ ಗ್ರೇವಿ ಸಹ ಮಾಡಿ ಸವಿಯುತ್ತಾರೆ.
ಹಾಗಾದ್ರೆ ನೀವು ಸಹ ಈ ಪಲ್ಯ ಮಾಡುವ ಯೋಚನೆ ಮಾಡಿದ್ದರೆ ಇದೇ ಪಾಕವಿಧಾನ ಬಳಸಿ ಮಾಡಿಕೊಳ್ಳಿ. ಊಟಕ್ಕೆ ಸಿಕ್ಕಾಪಟ್ಟೆ ರುಚಿ ನೀಡುತ್ತದೆ.



Click it and Unblock the Notifications