Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಮಾಡಿ ಕೊಡಿ ಮಸಾಲ ಪಾಸ್ತಾ..! ಬಹಳ ಸುಲಭದ ಸ್ನ್ಯಾಕ್ಸ್ ಇದು!
ಬೇಸಿಗೆ ರಜೆ ಆರಂಭಗೊಂಡಿದೆ. ಮಕ್ಕಳು ಈಗ ಮನೆಯಲ್ಲೇ ಉರುವ ಕಾರಣ ಅವರಿಗಾಗಿ ಸಂಜ್ಯೆ ಸಮಯದಲ್ಲಿ ಸ್ನ್ಯಾಕ್ಸ್ ಮಾಡುವುದು ಸಾಮಾನ್ಯ. ಅದರಲ್ಲೂ ಮನೆಯಿಂದ ಹೊರಗೆ ಸ್ನ್ಯಾಕ್ಸ್ ಸವಿಯುವುದಕ್ಕಿಂತ ಮನೆಯಲ್ಲೇ ಮಾಡಿದಂತಹ ಸ್ನ್ಯಾಕ್ಸ್ ಬಹಳ ರುಚಿ ನೀಡಬಹುದು. ಈಗ ಮಕ್ಕಳಿಗೆ ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿ, ಗೋಬಿ ಮಂಚೂರಿಯನ್ ಅಂದರೆ ಬಾಯಲ್ಲಿ ನೀರು ಬರುತ್ತೆ ಅವರು ಕೂಡ ಈ ಖಾದ್ಯಗಳನ್ನೇ ಸವಿಯಲು ಮುಂದಾಗೋದು ನೋಡಬಹುದು.
ಆದ್ರೆ ಮನೆಯಲ್ಲಿ ನೀವು ವಿಶೇಷವಾಗಿ ಏನಾದರು ಖಾದ್ಯ ಮಾಡಿ ಸವಿಯಲು ಮುಂದಾಗುವುದಾದರೆ ಈ ರೀತಿ ಪಾಸ್ತಾ ರೆಸಿಪಿಯನ್ನು ಮಾಡಿ ಸವಿದು ನೋಡಿ. ಮಸಾಲಾ ಪಾಸ್ತಾ ಮಾಡಿದರೆ ಮಕ್ಕಳು ಕೇಳಿ ಕೇಳಿ ಹಾಕಿಸಿಕೊಂಡು ಸವಿಯುತ್ತಾರೆ. ಪಾಸ್ತಾ ಆರೋಗ್ಯದ ದಷ್ಟಿಯಲ್ಲಿ ಹಾಗೆ ಮನೆಯಲ್ಲೇ ಮಾಡುವುದರಿಂದ ಬಹಳ ರುಚಿಯಾಗಿಯೂ ಇರಲಿದೆ.

ಪಾಸ್ತಾದಿಂದ ಮಾಡುವ ಪಾಯಸ ನೀವು ಸವಿದಿರಬಹುದು, ಅದರ ರುಚಿ ನೋಡಿದ್ದರೆ ಈ ಪಾಸ್ತಾ ಮಸಾಲೆ ಕೂಡ ಮಾಡಿ ನೋಡಿ. ಹೀಗಾಗಿ ನಾವಿಂದು ಬೇಸಿಗೆ ರಜೆಯ ಮಜಾ ಹೆಚ್ಚಿಸುವಂತಹ ಪಾಸ್ತಾ ಮಸಾಲೆ ಮಾಡುವುದು ಹೇಗೆ ಅನ್ನೋದನ್ನು ತಿಳುದುಕೊಳ್ಳೋಣ. ಈ ಪಾಸ್ತಾ ಮಸಾಲೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪಾಸ್ತಾ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳು
- ಪಾಸ್ತಾ
- ಈರುಳ್ಳಿ
- ಹಸಿ ಮೆಣಸು
- ಕ್ಯಾರೆಟ್
- ಕ್ಯಾಪ್ಸಿಕಂ
- ಟೊಮೆಟೊ
- ಕಾಳು ಮೆಣಸಿನ ಪುಡಿ
- ಧನಿಯ ಪುಡಿ
- ಗರಂ ಮಸಾಲ
- ಕೊತ್ತಂಬರಿ ಸೊಪ್ಪು
- ಮೆಣಸಿನ ಪುಡಿ
- ಟೊಮೆಟೊ ಸಾಸ್
- ಸೋಯಾ ಸಾಸ್
ಪಾಸ್ತಾ ಮಸಾಲೆ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆಯಲ್ಲಿ ನೀರು ಹಾಕಿ ಬಿಸಿ ಮಾಡಿ ಬಿಸಿಯಾಗುವಾಗ ಪಾಸ್ತಾ ಹಾಕಿಕೊಂಡು 1 ಸ್ಪೂನ್ ಎಣ್ಣೆ, ಉಪ್ಪು, ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿಕೊಳ್ಳಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. 10 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ನೀರನ್ನು ಜರಡಿ ಹಿಡಿದು ಬರಿ ಪಾಸ್ತಾ ಮಾತ್ರ ತೆಗೆದಿಟ್ಟುಕೊಳ್ಳಿ. ಈಗ ಮತ್ತೊಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ.
ಎಣ್ಣೆ ಕಾದ ಬಳಿಕ ಇದಕ್ಕೆ ಈರುಳ್ಳಿ, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಒಂದು ಕ್ಯಾಪ್ಸಿಕಂ, ಕ್ಯಾರೆಟ್, 2 ಟೊಮೆಟೋವನ್ನು ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಖಾರದ ಪುಡಿ, ಧನಿಯ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ ಮಿಕ್ಸ್ ಮಾಡಿ 1 ನಿಮಿಷ ಬಿಡಿ. ನಂತರ ಸ್ವಲ್ಪ ಟೊಮೆಟೋ ಸಾಸ್, ಸೋಯಾ ಸಾಸ್ ಹಾಕಿಕೊಳ್ಳಿ. ಈ ಎರಡು ಸಾಸ್ ಇಲ್ಲದಿದ್ದರೂ ಸಮಸ್ಯೆಯಿಲ್ಲ.
ಈಗ ಸಣ್ಣಗೆ ಕುದಿಬರುವಾಗ ಇದಕ್ಕೆ ಪಾಸ್ತಾವನ್ನು ಸೇರಿಸಿ ಮಿಕ್ಸ್ ಮಾಡಿಕೊಂಡು ಕುದಿಬರಲು ಬಿಡಿ. ಮಿಕ್ಸ್ ಮಾಡುತ್ತಾ ಚೆನ್ನಾಗಿ ಮಸಾಲೆ ಹಿಡಿಯುವಂತೆ ಮಾಡಿ. ಹಾಗೆ ಮುಚ್ಚಳ ಮುಚ್ಚಿ 1 ನಿಮಿಷ ಬೇಯಲು ಬಿಡಿ. ಕೊನೆಯದಾಗಿ ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಪಾಸ್ತಾ ಮಸಾಲೆ ರೆಡಿಯಾಗುತ್ತೆ. ಮಕ್ಕಳಿಗೆ ಸವಿಯಲು ನೀಡಲು ಇದು ಅದ್ಭುತ ರುಚಿಯ ಖಾದ್ಯ ಆಗಿದೆ. ನೀವು ಬೆಳಗ್ಗೆ ತಿಂಡಿ ಅಥವಾ ಸಂಜೆ ಸ್ನ್ಯಾಕ್ಸ್ ಗೂ ಇದನ್ನು ಮಾಡಬಹುದು.



Click it and Unblock the Notifications