Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಲಿಗೆ ಶುದ್ಧ ಮಾಡುತ್ತೆ ಜೀರಿಗೆ ಮಾವಿನಕಾಯಿ ರಸಂ..! ರುಚಿ ಕೂಡ ಅದ್ಭುತ
ಬೇಸಿಗೆ ಆರಂಭದಲ್ಲಿ ಬಾಯಿ ರುಚಿ ಹೆಚ್ಚಿಸುವ ಹಲವು ರೀತಿಯ ಖಾದ್ಯ ಮಾಡಿ ಸವಿಯುವುದು ನೋಡಬಹುದು. ಮಾವಿನ ಹಣ್ಣು ಕೈ ಸಿಕ್ಕುವ ಮೊದಲೇ ಅದರ ಕಾಯಿಯಿಂದ ಹಲವು ರೀತಿಯ ಖಾದ್ಯ ಸವಿಯಬಹುದು. ಅದರಲ್ಲೂ ಮಾವಿನಕಾಯಿ ಚಟ್ನಿ, ಮಾವಿನಕಾಯಿ ಚಿತ್ರಾನ್ನ, ಮಾವಿನಕಾಯಿ ತಂಬುಳಿ, ಮಾವಿನಕಾಯಿ ರಸಂ ಎಲ್ಲರ ಮೆಚ್ಚುಗೆ ಖಾದ್ಯ.
ಊಟದ ಜೊತೆಗೆ ಹುಳಿ ಹುಳಿಯ ಮಾವಿನಕಾಯಿ ರಸಂ ಇದ್ದರೆ ಆ ರುಚಿಗೆ ಮತ್ತಷ್ಟು ಅನ್ನ ಸವಿಯಲು ಮುಂದಾಗುತ್ತೀರಿ. ಮಾವಿನಕಾಯಿಯ ಈ ರಸಂನ ರುಚಿ ನೀವು ಒಮ್ಮೆ ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುವುದು ಖಚಿತ. ಹಾಗೆ ಅತ್ಯಂತ ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡಬಹುದು. ಹಾಗೆ ಮಧ್ಯಾಹ್ನದ ಊಟಕ್ಕೆ ಇದು ಬಹಳ ರುಚಿಯ ಜೊತೆಗೆ ಬಹಳ ತಂಪು ಸಹ ಹೌದು.

ಆರೋಗ್ಯದ ವಿಚಾರವಾಗಿ ಮಸಾಲೆ ಭರಿತ ಸಾರು, ಸಾಂಬಾರ್‌ಗಿಂತ ಈ ಮಾವಿನಕಾಯಿ ರಸಂ ಅದ್ಭುತ ರುಚಿ ನೀಡಲಿದೆ. ಹೀಗಾಗಿ ನೀವು ಕೂಡ ಊಟದ ಸಮಯದಲ್ಲಿ ಇದನ್ನು ಸವಿದು ನೋಡಿ. ಅನ್ನದ ಜೊತೆಗೆ ಸವಿಯುವುದು ಹೊರತುಪಡಿಸಿ ಗ್ಲಾಸ್‌ಗೆ ಹಾಕಿಕೊಂಡು ಕುಡಿಯಬಹುದು. ಜೀರಿಗೆ , ಮಾವಿನ ರಸಂ ಆರೋಗ್ಯಕ್ಕೂ ತುಂಬಾನೆ ಒಳ್ಳೆಯದು.
ಹಾಗಾದ್ರೆ ಈ ಮಾವಿನಕಾಯಿ ಜೀರಿಗೆ ರಸಂ ಮಾಡುವುದು ಹೇಗೆ?, ಮಾವಿನ ಜೀರಿಗೆ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ರಸಂ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನಕಾಯಿ ಜೀರಿಗೆ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಾವಿನ ಕಾಯಿ
- ಒಣ ಮೆಣಸು
- ಹಸಿ ಮೆಣಸು
- ಬೆಲ್ಲ
- ಎಣ್ಣೆ
- ಉಪ್ಪು
- ಅರಶಿಣ ಪುಡಿ
- ಕೊತ್ತಂಬರಿ ಸೊಪ್ಪು
ಮಾವಿನಕಾಯಿ ಜೀರಿಗೆ ರಸಂ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಬಿಡಿ. ನಂತರ ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಿ. ಈಗ ಒಲೆ ಮೇಲೆ ಕುದಿಯುತ್ತಿರುವ ನೀರಿಗೆ ಹೆಚ್ಚಿಕೊಂಡಿರುವ ಈ ಮಾವಿನಕಾಯಿಗಳನ್ನು ಹಾಕಿಕೊಳ್ಳಿ, ಹಾಗೆ ಮೇಲೆ ಅರಶಿಣ ಪುಡಿ, ಹಸಿ ಮೆಣಸು, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಕುದಿಯಲು ಬಿಡಿ. 5 ನಿಮಿಷದ ಬಳಿಕ ಈ ಜರಡಿಯಿಂದ ಮಾವಿನಕಾಯಿ ಸೇರಿ ಮೆಣಸನ್ನು ತೆಗೆದು ಬೌಲ್‌ಗೆ ಹಾಕಿಡಿ.
ಬೌಲ್‌ಗೆ ಹಾಕಿದ ಬೆಂದಿರುವ ಮಾವಿನಕಾಯಿಯು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಬಳಿಕ ಒಲೆ ಮೇಲಿನ ಮಾವಿನ ನೀರಿಗೆ ಹಾಕಿ ಮತ್ತೆ ಸ್ವಲ್ಪ ನೀರು ಹಾಕಿ ಮತ್ತೆ ಕುದಿಯಲು ಬಿಡಿ. ನಂತರ ಇದಕ್ಕೆ ಸ್ವಲ್ಪ ಬೆಲ್ಲ ಹಾಕಿ ಕರಗುವಂತೆ ಮಿಕ್ಸ್ ಮಾಡಿ. ಹಾಗೆ ಇದಕ್ಕೆ ಸ್ವಲ್ಪ ಉಪ್ಪು ಸಹ ಹಾಕಿಕೊಳ್ಳಿ.
ಈಗ ಕುದಿಬರಲು ಬಿಟ್ಟು ಆಗಾಗ ಮಿಕ್ಸ್ ಮಾಡುತ್ತಾ ಇರಿ. ಈಗ ಇನ್ನೊಂದು ಕಡೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಇಂಗು, ಒಣ ಮೆಣಸು, ಕರಿಬೇವು ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಅದನ್ನು ಒಲೆ ಮೇಲೆ ಇಟ್ಟಿರುವ ಮಾವಿನಕಾಯಿ ರಸಂಗೆ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ 2 ನಿಮಿಷ ಕುದಿಯಲು ಬಿಟ್ಟು ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಜೀರಿಗೆ ಮಾವಿನಕಾಯಿ ರಸಂ ರೆಡಿಯಾಗುತ್ತೆ. ಇದನ್ನು ನೀವು ಸಹ ಮನೆಯಲ್ಲಿ ಮಾವಿನಕಾಯಿ ಬಳಸಿ ಮಾಡಿ ನೋಡಿ. ನಾಲಗೆ ಅಥವಾ ಬಾಯಿ ರುಚಿ ಏನಾದ್ರು ಕೆಟ್ಟಿದ್ದರೆ ಇದರ ರುಚಿಗೆ ನೀವು ಫಿದಾ ಆಗುತ್ತೀರಿ.



Click it and Unblock the Notifications