Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆ ಬಿಸಿಗೆ ತಂಪು ತಂಪಿನ ಮಜ್ಜಿಗೆ ಹುಳಿ..! ಸೌತೆಕಾಯಿ ಮೊಸರು ಇದ್ರೆ ಸಾಕು!
ಬೇಸಿಗೆಯ ಬಿಸಿ ಹೆಚ್ಚಾದಾಗ ಎಲ್ಲರಲ್ಲೂ ತಂಪು ತಂಪಿನ ಪದಾರ್ಥಗಳ ಮಾಡಿ ಸೇವಿಸುವ ಮನಸ್ಸಾಗಿರುತ್ತೆ. ಹೀಗಾಗಿ ಮನೆಯಲ್ಲಿ ಜ್ಯೂಸ್, ಹಣ್ಣು ಹಂಪಲು, ಮಜ್ಜಿಗೆ, ಮೊಸರು, ಹುಳಿ ಹೀಗೆ ತಂಪಿನಿಂದ ಕೂಡಿರುವ ಹಲವು ಖಾದ್ಯಗಳ ಮಾಡಿ ಸವಿಯಲು ಮುಂದಾಗುವುದು ಕಾಮನ್. ಅದರಲ್ಲೂ ಮಜ್ಜಿಗೆಯಿಂದ ಮಾಡುವಂತಹ ಖಾದ್ಯ ದೇಹಕ್ಕೆ ಬಹಳ ಉತ್ತಮ.
ಮಸಾಲ ಮಜ್ಜಿಗೆ, ಮಜ್ಜಿಗೆ ಹುಳಿ ಬೇಸಿಗೆಯ ಸಮಯದಲ್ಲಿ ಎಲ್ಲರ ಮನೆಯಲ್ಲೂ ಮಾಡಿ ಸವಿಯುವ ಖಾದ್ಯ. ಅದರಲ್ಲೂ ಮಧ್ಯಾಹ್ನದ ಬಿಸಿಲಿನ ಸಮಯದಲ್ಲಿ ಈ ಮಜ್ಜಿಗೆ ಹುಳಿ ಹಾಗೆ ಮಸಾಲೆ ಮಜ್ಜಿಗೆ ಇದ್ದರೆ ದೇಹ ತಣ್ಣಗಾಗುತ್ತೆ. ಹಾಗಾದ್ರೆ ನಾವಿಂದು ಮನೆಯಲ್ಲಿ ಈ ಮಜ್ಜಿಗೆ ಹುಳಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಮಜ್ಜಿಗೆ ಹುಳಿ ಬಹಳ ಹಿಂದಿನ ಕಾಲದಿಂದಲೂ ಮಾಡಿಕೊಂಡು ಬಂದಿರುವ ರೆಸಿಪಿ. ಹಿಂದೆ ಬೇಸಿಗೆಯಲ್ಲಿ ಈ ಮಜ್ಜಿಗೆ ಹುಳಿ ಎಲ್ಲರ ಮನೆಯಲ್ಲೂ ಕಡ್ಡಾಯ ಎನ್ನುವಂತೆ ಮಾಡುತ್ತಿದ್ರು. ದೇಹದಕ್ಕೆ ತಂಪು ನೀಡುವ ಜೊತೆಗೆ ಇದು ಬಹಳ ಆರೋಗ್ಯಕರ ಅಂಶಗಳ ಹೊಂದಿರುವ ಕಾರಣಕ್ಕೆ ಎಲ್ಲರು ವಿವಿಧ ಬಗೆಯಲ್ಲಿ ಮಾಡಿ ಸವಿಯುತ್ತಿದ್ದರು.
ನಾವಿಂದು ಸುಲಭವಾಗಿ ಒಂದು ಒಗ್ಗರಣೆ ಹಾಕಿ ಮಾಡುವಂತಹ ರುಚಿ ರುಚಿಯ ಮಜ್ಜಿಗೆ ಹುಳಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಮಜ್ಜಿಗೆ ಹುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಜ್ಜಿಗೆ ಹುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೊಸರು ಅರ್ಧ ಲೀಟರ್
- ಈರುಳ್ಳಿ
- ಬ್ಯಾಡಗಿ ಮೆಣಸಿನಕಾಯಿ
- ಗದ್ದೆ ಸೌತೆಕಾಯಿ ಅಥವಾ ಮಂಗಳೂರು ಸೌತೆ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಸಾಸಿವೆ
- ಜೀರಿಗೆ
- ಹರಿಶಿಣ ಪುಡಿ
- ಇಂಗು
- ಶುಂಠಿ
- ಉಪ್ಪು
- ಎಣ್ಣೆ
ಮಜ್ಜಿಗೆ ಹುಳಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಕಾಲು ಲೀಟರ್ ನೀರು ಹಾಕಿ ನೀರು ಬಿಸಿಯಾದಾಗ ಹೆಚ್ಚಿಕೊಂಡಿರುವ ಸೌತೆಕಾಯಿಯನ್ನು ಈ ನೀರಿಗೆ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು 10 ನಿಮಿಷ ಬೇಯಲು ಬಿಡಿ. ಸೌತೆಕಾಯಿ ಚೆನ್ನಾಗಿ ಮೃದುವಾಗಬೇಕು. ನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಇಂಗು, ಚಿಕ್ಕದಾಗಿ ಕತ್ತರಿಸಿಕೊಂಡಿರುವ ಹಸಿ ಮೆಣಸು, ತುರಿದ ಶುಂಠಿ, ಬ್ಯಾಡಗಿ ಮೆಣಸು, ಕರಿಬೇವಿನ ಸೊಪ್ಪು, ಈರುಳ್ಳಿ ಸೇರಿಸಿ 1 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಅರಶಿಣ ಪುಡಿ, ಉಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಆಫ್ ಮಾಡಿಕೊಂಡು ಈ ಪದಾರ್ಥಗಳು ಸಹ ತಣ್ಣಗಾಗಲು ಬಿಡಿ. ಈಗ ಒಂದು ಬೌಲ್‌ನಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಸೌತೆಕಾಯಿ ಬೇಯಿಸಿದ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಆ ನೀರು ಮೊಸರಿನೊಂದಿಗೆ ಬೆರೆಯಬೇಕು. ಈಗ ಈ ಮಿಶ್ರಣಕ್ಕೆ ಬೇಯಿಸಿಕೊಂಡಿರುವ ಸೌತೆಕಾಯಿಯನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಬಾಣಲೆಯಲ್ಲಿ ಹುರಿದ ಮಸಾಲೆಗಳು ತಣ್ಣಗಾಗಿದ್ದರೆ ಅದನ್ನು ಕೂಡ ಈ ಮೊಸರಿಗೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸಹ ಸೇರಿಸಿ ಮಿಕ್ಸ್ ಮಾಡಿಕೊಂಡು ಟೇಸ್ಟ್ ನೋಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಈ ಮಜ್ಜಿಗೆ ಹುಳಿ ರೆಡಿಯಾಗುತ್ತೆ. ಇದರ ರುಚಿ ಒಮ್ಮೆ ಸವಿದರೆ ನೀವು ಪದೇ ಪದೇ ಮಾಡಿ ಸವಿಯುವುದು ಖಚಿತ. ಮಾಡೋದು ಕೂಡ ಸುಲಭ ಹಾಗೆ ದೇಹಕ್ಕೂ ತಂಪು.



Click it and Unblock the Notifications