Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ಟ್ರೀಟ್ ಸ್ಟೈಲ್ ಕಾರ್ನ್ ಪಕೋಡ! ಮಾನ್ಸೂನ್‌ಗೆ ಪರ್ಫೆಕ್ಟ್ ಸ್ನ್ಯಾಕ್.. ಟೇಸ್ಟ್ ಅದ್ಭುತ
ಸದ್ಯ ಮಾನ್ಸೂನ್ ಪ್ರಾರಂಭವಾಗಿದೆ. ಮಳೆ ಹನಿಗಳ ಸದ್ದು ನಮ್ಮ ಹೃದಯವನ್ನು ತಟ್ಟುತ್ತಿದೆ. ನಮ್ಮ ನಾಲಿಗೆಯು ಬಿಸಿಬಿಸಿ ತಿಂಡಿಗಳನ್ನು ಬಯಸುತ್ತದೆ. ಹೌದು, ಮಳೆಗಾಲದಲ್ಲಿ (monsoon) ಬಿಸಿ ಬಿಸಿಯಾದ ಪಕೋಡ ತಿನ್ನಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಅದರಲ್ಲೂ ಸಿಹಿ ಜೋಳದ ಪಕೋಡಗಳು (sweet corn pakoda) ಮಾನ್ಸೂನ್‌ಗೆ ಹೇಳಿ ಮಾಡಿಸಿದಂತಿವೆ. ಇವು ಗರಿಗರಿ ಮತ್ತು ಸ್ವಲ್ಪ ಖಾರವಾಗಿದ್ದು, ಸಂಜೆ ಟೀ ಕುಡಿಯುವಾಗ ತಿನ್ನಲು ಬಹಳ ರುಚಿಕರವಾಗಿರುತ್ತವೆ. ಇದನ್ನು ಕಡಿಮೆ ಸಮಯದಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಅದು ಹೇಗೆ ಎಂದು ನಾವು ತಿಳಿಸಿಕೊಡುತ್ತೇವೆ.
ಸ್ವೀಟ್ ಕಾರ್ನ್ (ಸಿಹಿ ಜೋಳ), ಕಡಲೆ ಹಿಟ್ಟು, ಈರುಳ್ಳಿ ಬಳಸಿ ಮಾಡುವ ಜೋಳದ ಪಕೋಡ (corn pakora) ಸವಿಯಲು ಅತ್ಯದ್ಭುತ. ಒಂದು ತಿಂದರೆ ಮತ್ತೊಂದು ತಿನ್ನಬೇಕೆನಿಸುತ್ತದೆ. ಈ ಸ್ನ್ಯಾಕ್ಸ್ ಬೀದಿ ಆಹಾರಕ್ಕೆ ಉತ್ತಮ ಪರ್ಯಾಯವಾಗಿದೆ. ಸಾಮಾನ್ಯವಾಗಿ ಈರುಳ್ಳಿ ಪಕೋಡಗಳು ಹೆಚ್ಚು ಪ್ರಸಿದ್ಧವಾಗಿವೆ. ಆದರೆ, ಈ ಜೋಳದ ಪಕೋಡಗಳು ಕೂಡ ಖಾರವಾಗಿ ಮತ್ತು ಗರಿಗರಿಯಾಗಿ ಇರುತ್ತವೆ. ಈ ಪಕೋಡಗಳನ್ನು ಮಸಾಲಾ ಟೀ, ಕಾಫಿಯೊಂದಿಗೆ ಸ್ನ್ಯಾಕ್ಸ್ ಆಗಿ ಸವಿಯಬಹುದು. ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದರೂ ಬಹಳ ರುಚಿ. ಜೋಳದ ಪಕೋಡಗಳನ್ನು ಬಿಸಿ ಬಿಸಿಯಾಗಿ ತಿಂದರೆ ಅದರ ರುಚಿಯೇ ಬೇರೆ.

ಸ್ವೀಟ್ ಕಾರ್ನ್ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು
• ಸ್ವೀಟ್ ಕಾರ್ನ್ (ಜೋಳದ ಕಾಳುಗಳು)
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಜೀರಿಗೆ
• ಕಡಲೆ ಹಿಟ್ಟು
• ಅಕ್ಕಿ ಹಿಟ್ಟು
• ಗರಂ ಮಸಾಲಾ
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಕರಿಬೇವು ಅಥವಾ ಪುದೀನಾ ಅಥವಾ ಕೊತ್ತಂಬರಿ
• ರುಚಿಗೆ ತಕ್ಕಷ್ಟು ಉಪ್ಪು
• ಅರಿಶಿನ
• ಖಾರ
• ಅಗತ್ಯಕ್ಕೆ ತಕ್ಕಷ್ಟು ಎಣ್ಣೆ

ಸ್ವೀಟ್ ಕಾರ್ನ್ ಪಕೋಡ ತಯಾರಿಸುವ ವಿಧಾನ
ಮೊದಲು ಸ್ವೀಟ್ ಕಾರ್ನ್ (ಜೋಳದ ಕಾಳು) ಸಿದ್ಧಪಡಿಸಿಕೊಳ್ಳಿ. ಕಾರ್ನ್ ಕೋಬ್ ಬಳಸುತ್ತಿದ್ದರೆ, ಮೊದಲಿಗೆ ಅವುಗಳನ್ನು ನೀರಿನಲ್ಲಿ ಕುದಿಸಿ ಕಾಳುಗಳನ್ನು ಬೇರ್ಪಡಿಸಿ. ಒಂದು ವೇಳೆ ಫ್ರೋಜನ್ ಕಾರ್ನ್ ಉಪಯೋಗಿಸುತ್ತಿದ್ದರೆ, ಅವುಗಳನ್ನು ತೊಳೆದ ಬಳಿಕ ನೀರನ್ನು ಸಂಪೂರ್ಣವಾಗಿ ಒರೆಸಿ ಆರಲು ಬಿಡಬೇಕು. ಈಗ ಸಿದ್ಧಪಡಿಸಿಕೊಂಡ ಸ್ವೀಟ್ ಕಾರ್ನ್ ಅನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಕಾಳುಗಳು ಸಂಪೂರ್ಣವಾಗಿ ನುಣ್ಣಗೆ ಆಗದಂತೆ ನೋಡಿಕೊಳ್ಳಿ. ತರಿತರಿಯಾಗಿ ಇರಬೇಕು. ಹೆಚ್ಚಾಗಿ ರುಬ್ಬಿದರೆ, ಕರಿಯುವಾಗ ಸೀದು ಹೋಗಬಹುದು.
ಈಗ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ಅದರಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ, ಜೀರಿಗೆ, ಸ್ವಲ್ಪ ಸಣ್ಣಗೆ ಹೆಚ್ಚಿದ ಪುದೀನಾ ಅಥವಾ ಕೊತ್ತಂಬರಿ ಅಥವಾ ಕರಿಬೇವು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಈ ಮಿಶ್ರಣಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಅಥವಾ ಕಾರ್ನ್ ಸ್ಟಾರ್ಚ್, ಗರಂ ಮಸಾಲ, ಉಪ್ಪು, ಅರಿಶಿನ, ಖಾರ ಹಾಕಿ ಎಲ್ಲವನ್ನೂ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ಈ ಹಿಟ್ಟಿನ ಮಿಶ್ರಣವು ಗಟ್ಟಿಯಾಗಿ ಮುದ್ದೆಯಂತೆ ಇರಬೇಕು. ಒಂದು ವೇಳೆ ತೆಳುವಾಗಿದ್ದರೆ, ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಸ್ವಲ್ಪ ಸೇರಿಸಿಕೊಳ್ಳಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಿ.

ಈಗ ಒಲೆ ಮೇಲೆ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಿ. ಚೆನ್ನಾಗಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಕಾದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಕಾದ ಎಣ್ಣೆಯಲ್ಲಿ ಹಾಕಿ. ಹಾಕಿದ ತಕ್ಷಣ ಅವುಗಳನ್ನು ಕದಡದೆ ಎರಡು ನಿಮಿಷಗಳ ಕಾಲ ಹಾಗೆಯೇ ಬಿಡಿ. ಪಕೋಡಗಳು ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ. ಎಲ್ಲಾ ಕಡೆ ಸಮವಾಗಿ ಬೇಯುವಂತೆ ತಿರುಗಿಸುತ್ತಾ ಇರಿ. ಬೆಂದ ನಂತರ ಅವುಗಳನ್ನು ಎಣ್ಣೆಯಿಂದ ತೆಗೆದು ಪೇಪರ್ ಅಥವಾ ಪಾತ್ರೆಯಲ್ಲಿ ಹಾಕಿ. ಇಷ್ಟು ಮಾಡಿದರೆ, ಮನೆಯಲ್ಲಿಯೇ ಸ್ವೀಟ್ ಕಾರ್ನ್ ಪಕೋಡ ಸಿದ್ಧ. ಬಿಸಿ ಬಿಸಿಯಾದ ಜೋಳದ ಪಕೋಡವನ್ನು ಟೀ ಅಥವಾ ನಿಮಗೆ ಇಷ್ಟವಾದ ಚಟ್ನಿಯೊಂದಿಗೆ ಸವಿಯಬಹುದು.



Click it and Unblock the Notifications