Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈರುಳ್ಳಿ ಕಡ್ಡಿ ಮೊಟ್ಟೆ ಪಲ್ಯ: ಇದು ಆರೋಗ್ಯಕ್ಕಂತೂ ತುಂಬಾನೇ ಒಳ್ಳೆಯದು
ಈರುಳ್ಳಿ ಕಡ್ಡಿ ಅಥವಾ ಈರುಳ್ಳಿ ಸೊಪ್ಪು(ಸ್ಪ್ರಿಂಗ್ ಆನಿಯನ್) ಈಗ ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಇದು ಸೀಸನ್ ಸಮಯವಾಗಿರುವುದರಿಂದ ಈಗ ಮಾರುಕಟ್ಟೆಯಲ್ಲಿ ಸಿಗುವ ಸೀಸನ್ ಫುಡ್‌ಗಳಲ್ಲಿ ಇದು ಕೂಡ ಒಂದು, ಇದರಿಂದ ಹಲವರು ಹಲವು ರೀತಿಯ ಖಾದ್ಯ ತಯಾರಿಸುತ್ತಾರೆ. ನಾವಿಲ್ಲಿ ಸಿಂಪಲ್ ಆಗಿ ಮಾಡಬಹುದಾದ ಈರುಳ್ಳಿ ಕಡ್ಡಿ ಹಾಗೂ ಮೊಟ್ಟ ಪಲ್ಯ ಮಾಡಿದ್ದೇವೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
2 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
1/2 ಚಮಚ ಚಮಚ ಅರಿಶಿಣ ಪುಡಿ
2-3 ಹಸಿ ಮೆಣಸು
ರುಚಿಗೆ ತಕ್ಕ ಉಪ್ಪು
ಈರುಳ್ಳಿ ಕಡ್ಡಿ (ಈರುಳ್ಳಿ ಸೊಪ್ಪು)
3 ಮೊಟ್ಟೆ
ಮಾಡುವ ವಿಧಾನ:
ಈರುಳ್ಳಿ ಕಡ್ಡಿಯನ್ನು ಚಿಕ್ಕದಾಗಿ ಕತ್ತರಿಸಿ ಇಡಿ
ನೀವು ಬಾಣಲೆಗೆ 2 ಚಮಚ ಎಣ್ಣೆ ಹಾಕಿ
ನಂತರ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ, ಹಸಿ ಮೆಣಸು
ಹಾಕಿ.
ಈಗ ನೀವು ಕತ್ತರಿಸಿದ ಈರುಳ್ಳಿ ಕಡ್ಡಿ ಹಾಕಿ ನಂತರ ರುಚಿಗೆ ತಕ್ಕ ಉಪ್ಪು, ಅರಿಶಿಣ
ಪುಡಿ ಸೇರಿಸಿ ಸಾಧಾರಣ ಉರಿಯಲ್ಲಿ ಬೇಯಿಸಿ
ನೀರು ಹಾಕಬೇಡಿ, ಎಣ್ಣೆಯಲ್ಲಿಯೇ ಬೇಯುತ್ತದೆ.
ನಂತರ ನೀವು 2-3 ಮೊಟ್ಟೆ ಹೊಡೆದು ಹಾಕಿ ಮಿಕ್ಸ್ ಮಾಡಿ ಮತ್ತೆ 3-4 ನಿಮಿಷ ಫ್ರೈ
ಮಾಡಿದರೆ ಈರುಳ್ಳಿ ಕಡ್ಡಿ ಮೊಟ್ಟೆ ಪಲ್ಯ ರೆಡಿ.
ಸ್ಪ್ರಿಂಗ್ ಆನಿಯನ್ ಪ್ರಯೋಜನಗಳು
ಇದರಲ್ಲಿ antioxidants ಅಧಿಕವಿರುತ್ತದೆ
ಕ್ಯಾನ್ಸರ್ ಕಣಗಳ ಇರುದ್ಧ ಹೋರಾಡುತ್ತದೆ
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ
ಮಧುಮೇಹಿಗಳಿಗೆ ತುಂಬಾ ಒಳ್ಳೆಯದು
ಉರಿಯೂತದ ಸಮಸ್ಯೆ ಕಡಿಮೆಯಾಗುವುದು
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಇದರಲ್ಲಿ ರಂಜಕ ಅಂಶ ಅಧಿಕವಿರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು
ಸಹಕಾರಿ, ರಕ್ತದೊತ್ತಡ ನಿಯಂತ್ರಣದಲ್ಲಿಡುವ ಕಾರ್ಯ ಮಾಡುತ್ತದೆ.
ರೋಗ ನಿರೋಧ ಕ ಶಕ್ತಿ ಹೆಚ್ಚಿಸುತ್ತದೆ
ಈ ಎಲೆಯಲ್ಲಿ ವಿಟಮಿನ್ ಸಿ ಅಧಿಕವಿದೆ, ಇದರಿಂದಾಗಿ ರೋಗ ನಿರೋಧಕ ಶಕ್ತಿ
ಹೆಚ್ಚಿಸಲು ತುಂಬಾನೇ ಸಹಕಾರಿ. ಕೆಮ್ಮು, ಶೀತ ಈ ಬಗೆಯ ಸಮಸ್ಯೆ ತಡೆಗಟ್ಟಲು
ಸಹಕಾರಿ.
ಮಧುಮೇಹಿಗಳು ಇದನ್ನು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯಂಶ
ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ
ಕ್ಯಾನ್ಸರ್ ಕಣಗಳ ಉತ್ಪತ್ತಿ ತಡೆಗಟ್ಟುತ್ತದೆ: ಕ್ಯಾನ್ಸರ್ ರೋಗಿಗಳು ಈ ಬಗೆಯ
ಆಹಾರ ತಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ತುಂಬಾನೇ ಒಳ್ಳೆಯದು
ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.
ಈ ಸ್ಪ್ರಿಂಗ್ ಆನಿಯನ್ ಅಥವಾ ಈರುಳ್ಳಿ ಕಡ್ಡಿ ಎರಡೂ
ಸೇಮ್?
ಹೌದು ಈ ಸ್ಪ್ರಿಂಗ್ ಆನಿಯನ್ ಅಥವಾ ಈರುಳ್ಳಿ ಕಡ್ಡಿ ಎರಡೂ ಒಂದೇ, ಇದನ್ನು
ನೂಡಲ್ಸ್, ಮ್ಯಾಗಿ ಇವುಗಳನ್ನು ಮಾಡುವಾಗ ಹಾಕಬಹುದು. ಸಲಾಡ್ ಮಾಡಬಹುದು, ಪಲ್ಯ,
ಸಾರು, ಚಟ್ನಿ ಹೀಗೆ ಹಲವು ರೀತಿಯ ಖಾದ್ಯ ಮಾಡಬಹುದು. ಇದರಲ್ಲಿ ಪೋಷಕಾಂಶ
ಹೇರಳವಾಗಿದೆ.
ಸ್ಪ್ರಿಂಗ್ ಆನಿಯನ್ ಈರುಳ್ಳಿಯಂತೆಯೇ ಖಾರವಾಗಿರುತ್ತದೆ, ಅಲ್ಲದೆ ಪಲ್ಯ ಮಾಡುವಾಗ ಈರುಳ್ಳಿ ಬಳಸಲೂ ಬೇಕಾಗಿಲ್ಲ. ನೀವು ಮೊಟ್ಟೆ ಬಳಸದಿದ್ದರೆ ತೆಂಗಿನಕಾಯಿ ತುರಿದು ಹಾಕಬಹುದು.



Click it and Unblock the Notifications