Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಪ್ಪದ ಹೀರೆಕಾಯಿಯ ಹೊಸ ರೀತಿ ಬಜ್ಜಿ..! ಒಮ್ಮೆಯಾದ್ರು ಸವಿದು ನೋಡಿ!
ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಟಿ, ಕಾಫಿಯೊಂದಿಗೆ ಯಾವುದಾದರು ಖಾದ್ಯ ಇದ್ದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮನೆಯಲ್ಲಿ ಮಾಡಿ ಸವಿಯುವ ಸ್ನ್ಯಾಕ್ಸ್ ಎಂದ ಕೂಡಲೇ ಎಲ್ಲರಿಗೂ ಬೋಂಡಾ ಬಜ್ಜಿ ಸಾಮಾನ್ಯವಾಗಿ ನೆನಪಾಗುತ್ತೆ. ಅದ್ರಲ್ಲೂ ಬಜ್ಜಿ ಬೋಂಡಾಗಳು ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಾಯಲ್ಲೂ ನೀರು ಬರಲಿದೆ. ಆದ್ರೆ ಬಜ್ಜಿ ಬೋಂಡಾವನ್ನು ಹೇಗೆಲ್ಲಾ ಮಾಡಬಹುದು ಎಂಬುದನ್ನು ನೀವು ಕೂಡ ತಿಳಿದಿದ್ದೀರಿ.
ಹಾಗೆ ತರಕಾರಿಗಳ ಬಳಸಿಕೊಂಡು ಹಲವು ರೀತಿಯ ಬಜ್ಜಿಗಳ ಮಾಡಿ ಸವಿಯುವುದು ನೋಡಬಹುದು. ಇನ್ನು ತರಕಾರಿಗಳು ಅಂದರೆ ಹೀರೆಕಾಯಿಯಲ್ಲಿ ಮಾಡುವ ಬಜ್ಜಿ ಅಂದ್ರೆ ಬಾಯಲ್ಲಿ ನೀರು ಬರೋದು ಖಚಿತ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ. ಇನ್ನು ತುಪ್ಪದ ಹೀರೆಕಾಯು ಬಜ್ಜಿ ಅಂದ್ರೆ ಬಾಯಲ್ಲಿ ನೀರು ಬರುತ್ತೆ.

ಹೀರೆಕಾಯಿ ಬಜ್ಜಿ ಅಲ್ಲ ಬದಲಿಗೆ ತುಪ್ಪದ ಹೀರೆಕಾಯಿಯಿಂದ ಈ ಬಜ್ಜಿ ಮಾಡಲಾಗುತ್ತದೆ. ಹೀಗಾಗಿ ಈ ಹೀರೆಕಾಯಿ ಬಜ್ಜಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಬಹಳ ರುಚಿಯ ಈ ಖಾದ್ಯವು ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಸಂಜೆ ಸಮಯಕ್ಕೆ ಸವಿಯಲು ರುಚಿ ರುಚಿಯ ಈ ಬಜ್ಜಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ತುಪ್ಪದ ಹೀರೆಕಾಯಿ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳು
ಹೀರೆಕಾಯಿ
ತುಪ್ಪ
ಕಡಲೆ ಹಿಟ್ಟು
ಎಣ್ಣೆ
ಅಕ್ಕಿ ಹಿಟ್ಟು
ಖಾರದ ಪುಡಿ
ಉಪ್ಪು
ಸೋಡಾ ಪುಡಿ
ಅಜ್ವೈನಾ
ತುಪ್ಪದ ಹೀರೆಕಾಯಿ ಬಜ್ಜಿ ಮಾಡುವ ವಿಧಾನವೇನು?
ಮೊದಲು ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ವೃತ್ತಾಕಾರವಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು. ಹಾಗೆ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ 1 ಕಪ್ ಕಡಲೆ ಹಿಟ್ಟು 2 ಚಮಚ ಅಕ್ಕಿ ಹಿಟ್ಟು, ಉಪ್ಪು, ಖಾರದ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಅಜ್ವೈನಾ ಹಾಕಿ ಬಳಿಕ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಮಿಶ್ರಣ ಮಾಡಬೇಕು.
ನಂತರ ನೀರು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಇದು ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಈ ಹಿಟ್ಟು ಹದ ಬರಬೇಕು. ಕೊನೆಯಲ್ಲಿ ಸ್ವಲ್ಪ ಸೋಡಾ ಪುಡಿ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹೀಗೆ ಮಾಡಿಕೊಂಡ ಬಳಿಕ ಹಿಟ್ಟನ್ನು ಬದಿಗಿಟ್ಟು ಈಗ ಕತ್ತರಿಸಿಕೊಂಡಿದ್ದ ಹೀರೆಕಾಯಿಯನ್ನು ಹಿಟ್ಟಿನೊಳಗೆ ಹಾಕಿಕೊಳ್ಳಿ.
ನಂತರ ಹಿಟ್ಟು ಚೆನ್ನಾಗಿ ಹೀರೆಕಾಯಿಗಳಿಗೆ ಹಿಡಿದ ಬಳಿಕ ಅದನ್ನು ನಿಧಾನವಾಗಿ ಎಣ್ಣೆಯೊಳಗೆ ಬಿಡಬೇಕು. ಚೆನ್ನಾಗಿ ಎರಡು ಕಡೆಗಳಲ್ಲಿ ಈ ಹೀರೆಕಾಯಿ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ತುಪ್ಪದ ಹೀರೆಕಾಯಿಯ ಬಜ್ಜಿ ರೆಡಿಯಾಗುತ್ತದೆ. ನೀವು ಕೂಡ ಸಂಜೆ ಸಮಯದಲ್ಲಿ ಸವಿಯಲು ಹಾಗೆ ಊಟದ ರುಚಿ ಹೆಚ್ಚಿಸಲು ಕೂಡ ಇದನ್ನು ಮನೆಯಲ್ಲಿ ಮಾಡಿ ಸವಿಯಬಹುದು.
ಬಹಳ ಸುಲಭವಾಗಿ ಮಾಡಿ ಮುಗಿಸಬಹುದಾದ ಸ್ನ್ಯಾಕ್ಸ್ ಇದು. ಹಾಗೆ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ಹೀಗೆ ಟೀ ಕಾಫಿಯ ಜೊತೆಗೂ ಇದು ಬಹಳ ರುಚಿ ನೀಡಲಿದೆ.



Click it and Unblock the Notifications