Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಗಾಲಕ್ಕೆ ರುಚಿ ರುಚಿಯ ಖಾರ ಚಟ್ನಿ ಮಾಡಿ..! ಇಲ್ಲಿದೆ ರೆಸಿಪಿ!
ಮಳೆಗಾಲದಲ್ಲಿ ನೀವು ಊಟ ತಿಂಡಿಗೆ ಖಾರ ಖಾರವಾಗಿ ಇರುವ ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು. ಏಕೆಂದರೆ ಮಳೆಗಾಲದಲ್ಲಿ ಬಾಯಿ ರುಚಿಗೆ ಖಾರವಾದ ಅಡುಗೆ ಇದ್ದರೆ ಆ ದಿನ ಅದ್ಭುತವಾಗಿರುತ್ತೆ. ಹಾಗೆ ಬೆಳಗ್ಗೆ ತಿಂಡಿ ಸಮಯದಲ್ಲಿ ರುಚಿ ರುಚಿಯ ಚಟ್ನಿ ಮಾಡುವುದು ನೋಡಿರಬಹುದು. ನೀವು ಬೆಳಗ್ಗೆ ಇಡ್ಲಿ, ದೋಸೆಗೆ ಖಾರದ ಖಾರದ ಚಟ್ನಿ ಇದ್ದರೆ ಅದ್ಭುತ ರುಚಿ ನೀಡಲಿದೆ.
ಇನ್ನು ಎಲ್ಲಾ ಚಟ್ನಿಯನ್ನು ಕೂಡ ನಾವು ಖಾರ ಖಾರವಾಗಿ ಮಾಡಬಹುದು. ಎಲ್ಲರು ಸವಿಯುವಂತೆ ನಾವಿಂದು ಸುಲಭವಾಗಿ ಮಾಡುವಂತಹ ರುಚಿ ರುಚಿಯ ಟೊಮೆಟೋ, ಈರುಳ್ಳಿ ಚಟ್ನಿ ಮಾಡುವ ಕುರಿತು ತಿಳಿಯೋಣ. ಈ ಚಟ್ನಿ ಎಲ್ಲಾ ರೀತಿಯ ತಿಂಡಿಯ ಜೊತೆಗೂ ಅದ್ಭುತ ರುಚಿ ನೀಡಲಿದೆ. ಹೀಗಾಗಿ ನಾವಿಂದು ಈ ಖಾರದ ಚಟ್ನಿ ಮಾಡುವ ಕುರಿತು ತಿಳಿಯೋಣ.

ಈ ಖಾರದ ಚಟ್ನಿ ಮಾಡಿ ಇಟ್ಟರೆ ಬ್ರೇಕ್ ಫಾಸ್ಟ್ ಜೊತೆಗೆ ಊಟದೊಂದಿಗೂ ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ಈ ಖಾರ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ, ಈರುಳ್ಳಿಯ ಖಾರ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಈರುಳ್ಳಿ
- ಟೊಮೊಟೊ
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಪುದಿನ ಸೊಪ್ಪು
- ಹಸಿ ಮೆಣಸು
- ಒಣ ಮೆಣಸು
- ಎಣ್ಣೆ
- ಬೆಳ್ಳುಳ್ಳಿ
- ಶುಂಠಿ
- ಹುಣಸೆ ಹುಳಿ
- ಸಾಸಿವೆ
- ಉಪ್ಪು
ಟೊಮೆಟೋ, ಈರುಳ್ಳಿಯ ಖಾರ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ನಂತರ ಬಿಡಿಸಿಕೊಂಡಿರುವ ಬೆಳ್ಳುಳ್ಳಿ ಹಾಕಿಕೊಳ್ಳಿ. ಹಾಗೆ ಶುಂಠಿ, ಹಸಿ ಮೆಣಸು, ಒಣ ಮೆಣಸು ಸಹ ಹಾಕಿಕೊಳ್ಳಿ. ನಂತರ ಇದಕ್ಕೆ ಸಾಂಬಾರ್ ಈರುಳ್ಳಿ ಅಥವಾ ಸಾಮಾನ್ಯ ಈರುಳ್ಳಿಯನ್ನೇ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ರಿಂದ 3 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ 2 ಟೊಮೆಟೋ ಹೆಚ್ಚಿಕೊಂಡು ಹಾಕಿಕೊಳ್ಳಿ. ಹಾಗೆ 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಈಗ ಬಾಣಲೆಗೆ ಕೊತ್ತಂಬರಿ ಸೊಪ್ಪು, ಕರಿಬೇವು, ಪುದಿನ ಸೊಪ್ಪು ಕೂಡ ಹಾಕಿಕೊಂಡು ಪತ್ತೆ ಫ್ರೈ ಮಾಡಿಕೊಳ್ಳಿ. ಹಾಗೆ ಉಪ್ಪು ಸಹ ಹಾಕಿ, ಹುಣಸೆ ಹುಳಿ, ತೆಂಗಿನಕಾಯಿ ತುರಿಯನ್ನು ಹಾಕಿ ಮತ್ತೆ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ.
ನಿಮಗೆ ಯಾವ ಪ್ರಮಾಣದಲ್ಲಿ ಚಟ್ನಿ ಬೇಕೋ ಹಾಗೆ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದ ಬಳಿಕ ಚಟ್ನಿಗೆ ಸಾಸಿವೆ ಹಾಗೂ ಕರಿಬೇವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಖಾರ ಖಾರದ ಚಟ್ನಿ ರೆಡಿಯಾಗುತ್ತದೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ನೋಡಿ ಯಾವುದೇ ಖಾದ್ಯದ ಜೊತೆಗೂ ಇದನ್ನು ಸವಿಯಬಹುದು. ಹಾಗೆ ಈ ಚಟ್ನಿಯನ್ನು ಮಾಡುವುದು ಕೂಡ ತುಂಬಾನೆ ಸುಲಭ, ಕೆಲವೇ ಕೆಲವು ವಸ್ತುಗಳ ಬಳಸಿ ಕಡಿಮೆ ಸಮಯದಲ್ಲಿ ಮಾಡಿ.
ಊಟದ ಜೊತೆಗೂ ಕೂಡ ಈ ಚಟ್ನಿ ಬಹಳ ರುಚಿಯಾಗಿರಲಿದೆ. ಕೆಲವರು ಇದಕ್ಕೆ ಹುರಿಗಡಲೆ ಹಾಕಿಕೊಂಡು ಕೂಡ ಮಾಡಿ ಸವಿಯುವುದು ನೋಡಬಹುದು.



Click it and Unblock the Notifications